ಬೆಂಗಳೂರು: ರಾಜ್ಯದಲ್ಲಿ ಇಂದು ಬಿಡುಗಡೆಗೊಂಡ ಕೋವಿಡ್ ಪ್ರಕರಣಗಳ ವರದಿಯಂತೆ ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಹೊಸ ಪ್ರಕರಣಗಳು ದಾಖಲಾಗುವುದು ತುಸು ಕಡಿಮೆಯಾದರೂ, ಸಾವಿನ ಸಂಖ್ಯೆ ಹೆಚ್ಚುತ್ತಿವೆ.
ಇಂದಿನ ವರದಿ :
ಹೊಸ ಪ್ರಕರಣಗಳು – 39,510, ಮೃತರ ಸಂಖ್ಯೆ : 480, ಕೋವಿಡ್‌ನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದದವರು – 22,584 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಲಸಿಕೆಯೇ ಇಲ್ಲ ಎರಡನೇ ಡೋಸ್ ಹೇಗೆ ನೀಡುತ್ತೀರಿ: ಹೈಕೋರ್ಟ್ ಪ್ರಶ್ನೆ
ರಾಜ್ಯದ ಒಟ್ಟು ವರದಿ:
ಇದುವರೆಗೆ ದಾಖಲಾದ ಒಟ್ಟು ಕೋವಿಡ್ ಪ್ರಕರಣಗಳು-20,13,193. ಗುಣಮುಖ ಹೊಂದಿದವರು-14,05869 ಮತ್ತು ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ-5,87,452 ಅಂದರೆ ಒಟ್ಟು ಶೇ.33.99ರಷ್ಟು ಪ್ರಕರಣಗಳು ಸಕ್ರಿಯವಾಗಿವೆ. ರಾಜ್ಯದಲ್ಲಿ ಒಟ್ಟಾರೆಯಾಗಿ 19852 ಮಂದಿ ನಿಧನರಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 15,879 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 9,83,519ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ಇಂದು 259 ಮಂದಿ ನಿಧನರಾಗಿದ್ದಾರೆ.
ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!
ಇಂದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳು
ಬಳ್ಳಾರಿ-1558, ಮಂಡ್ಯ-1359, ಮೈಸೂರು-2170, ಶಿವಮೊಗ್ಗ-1108, ತುಮಕೂರು-2496, ಉಡುಪಿ-1083, ಉತ್ತರ ಕನ್ನಡ-1084. ಉಳಿದ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.
ಇಲಾಖೆಯ ಪ್ರಕಟಣೆ ಪ್ರಕಾರ ರಾಜ್ಯದಲ್ಲಿ 1,07,59,572 ಲಸಿಕೆಯನ್ನು ನೀಡಲಾಗಿದೆ. ಅದರಲ್ಲಿ ಮೊದಲನೆ ಡೋಸ್-85,37,247 ಮತ್ತು ಎರಡನೇ ಡೋಸ್-22,22,325 ರಷ್ಟು ಲಸಿಕೆ ನೀಡಲಾಗಿದೆ.