ಪ್ರಾಣವಾಯು ಕೊರತೆ, ಪೆಟ್ರೋಲ್‍ ಶತಕ: ಫಕೀರನಿಗೆ ಮಾತ್ರ ಫಿಕೀರ್ ಇಲ್ಲ!

ದೈನಂದಿನ ಕೊವಿಡ್ ಸೋಂಕಿತರ ಸಂಖ್ಯೆ ನಾಲ್ಕು ಲಕ್ಷ, ಸಾವುಗಳ ಸಂಖ್ಯೆ ನಾಲ್ಕು ಸಾವಿರ  ದಾಟುತ್ತಿರುವಾಗ, ಜನರ ಪ್ರಾಣ ಉಳಿಸುವ  ವಾಯು (ಆಕ್ಸಿಜನ್‍) ಬಗ್ಗೆ ತಲೆ ಕಡಿಸಿಕೊಳ್ಳುವದನ್ನು ಸುಪ್ರಿಂ ಕೋರ್ಟಿಗೆ ಬಿಟ್ಟು ಹೊಸ ಸಂಸತ್‍ ಭವನ, ಹೊಸ ಪ್ರಧಾನಿ ನಿವಾಸ ನಿರ್ಮಾಣದ ‘ಸೆಂಟ್ರಲ್‍ ವಿಸ್ತಾ’ದ ಗೀಳು ಮತ್ತು ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಮತ್ತೆ ಪೆಟ್ರೋಲ್-ಡೀಸೆಲ್‍ ಬೆಲೆಯೇರಿಕೆ- ಸಹಜವಾಗಿ ಈ  ವಾರ ವ್ಯಂಗ್ಯಚಿತ್ರಕಾರರ ಗಮನ ಸೆಳೆದಿದೆ.

ಇತ್ತ ದಿಲ್ಲಿಯಲ್ಲಿ ಕೋವಿಡ್‍ ಹಾಹಾಕಾರದ ನಡುವೆ ಲಾಕ್‍ಡೌನ್‍ ಘೋಷಿಸಿದ್ದರೆ, ಅತ್ತ ರಾಜಧಾನಿಯ ಕೇಂದ್ರ ಭಾಗವನ್ನು ಸುಂದರಗೊಳಿಸುತ್ತದೆ ಎನ್ನುವ ಪ್ರಧಾನಿಗಳ ಪ್ರಿಯ ಮೆಗಾ ಪ್ರಾಜೆಕ್ಟ್   ‘ಸೆಂಟ್ರಲ್‍ ವಿಸ್ತಾ’ಕ್ಕೆ ಮಂಜೂರಾತಿ ಮತ್ತು ಅದರ ಕಾಮಗಾರಿ ‘ಆವಶ್ಯಕ ಸೇವೆ’ ಎಂದು ಘೋಷಿಸಲಾಗಿದೆ ಎಂಬ ಸುದ್ದಿ ಬಂದಿದೆ.

ತಾನೊಬ್ಬ ಫಕೀರ, ಜೋಳಿಗೆ ಹಾಕಿಕೊಂಡು ಹೊರಟೇ ಬಿಡುತ್ತೇನೆ  ಎಂದ ವ್ಯಕ್ತಿ ಕೋವಿಡ್‍ ಸಾವು-ನೋವುಗಳ ನಡುವೆಯೇ ತನ್ನ ಹೊಸ ನಿವಾಸದ ಸೆಂಟ್ರಲ್‍ ವಿಸ್ತಾ ಪಿಟೀಲು ಬಾರಿಸುತ್ತಿದ್ದರೆ ಆಶ್ಚರ್ಯ ಪಡಬೇಕೇ? ಅಥವ ……….?!

(ಶಿರ್ಷಿಕೆಯ ವ್ಯಂಗ್ಯಚಿತ್ರ: ಪಂಜು ಗಂಗೊಳ್ಳಿ ‘’ಸೆಂಟ್ರಲ್‍ ವಿಸ್ತಾ.. ಹಮ್‍ತೋ ಫಕೀರಾ” / ಫೇಸ್‍ಬುಕ್)

***

ಕೋವಿಡ್‍ ಅಂಬ್ಯುಲೆನ್ಸಾದರೇನು?   ನೇರ ದಾರಿ ಬಂದ್, ತಿರುವು ತಗೊಂಡು ಹೋಗಿ! ಏಕೆಂದರೆ, ಪ್ರಧಾನಿಗಳ ಹೊಸ ನಿವಾಸದ ‘ಅತ್ಯಗತ್ಯ’  ನಿರ್ಮಾಣ ಕಾರ್ಯ ನಡೆಯುತ್ತಿದೆ!

( ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

“ನಾವು ದೈತ್ಯ ಔಷಧಿ ಕಂಪನಿಗಳೊಂದಿಗೆ ಕೋವಿಡ್‍ ಲಸಿಕೆ ತಯಾರಿಕೆಯ ಬಗ್ಗೆ ಇತ್ಯರ್ಥಕ್ಕೆ ಬಂದಿದ್ದೇವೆ” ಎಂದು ಜುಲೈ 2020 ರಲ್ಲಿ ಅಮೆರಿಕ ಮತ್ತು ಬ್ರಿಟನ್ನಿನ ಸರಕಾರಗಳು ಹಾಗೂ ಆಗಸ್ಟ್ 2020ರಲ್ಲಿ ಯುರೋಪಿಯನ್‍ ಒಕ್ಕೂಟದ ಸರಕಾರಗಳು  ಹೇಳುತ್ತಿದ್ದರೆ, ಸಪ್ಟಂಬರ್ 2020ರಲ್ಲಿ ಭಾರತದ  ಸರಕಾರವೂ “ಒಂದು ವ್ಯವಹಾರ ಕುದುರಿಸಿದ್ದೇವೆ”  ಎಂದಿತ್ತು- ದೈತ್ಯ ನಿರ್ಮಾಣ ಕಂಪನಿಯೊಂದಿಗೆ!

( ಸಂದೀಪ್‍ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

***

ಕೋವಿಡ್‍ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಜಾಗವಿಲ್ಲ,  ಪ್ರಾಣ ಕಳಕೊಂಡವರಿಗೆ ಅಂತ್ಯ ಸಂಸ್ಕಾರಕ್ಕೂ ಜಾಗವಿಲ್ಲ ಎನ್ನುತ್ತಿದ್ದಾಗ…..

ಇದು ಸೆಂಟ್ರಲ್‍ ವಿಸ್ತಾ ಪ್ರಾಜೆಕ್ಟ್ -ಇತ್ತ ಬರಬೇಡಿ!

(ಸತೀಶ ಆಚಾರ್ಯ/ ಫೇಸ್‍ಬುಕ್)

***

ರೂ.13,450 ಕೋಟಿ ಸೆಂಟ್ರಲ್‍ ವಿಸ್ತಾ ಪರಿಯೋಜನೆಗೆ ಮಂಜೂರಾತಿ-ಸುದ್ದಿ

“ಸರ್, ಸೆಂಟ್ರಲ್‍ ವಿಸ್ತಾದಲ್ಲಿ ನಿಮ್ಮ ಹೊಸ ನಿವಾಸ ಬೇಗನೇ ಸಿದ್ಧವಾಗುತ್ತದೆ!”

“ಅಲ್ಲಿ ನನ್ನ ತಾಯಿಗೆ ಒಂದು ಬೆಡ್‍ ಸಿಗಬಹುದೇ?”

(ಅಲೋಕ್‍ ನಿರಂತರ್/ ಫೇಸ್‍ಬುಕ್)

ಪ್ರಧಾನಿಗಳ ಈ ಮೆಗಾ ಪ್ರಾಜೆಕ್ಟ್ ನ ಹಣದಿಂದ 40 ಮೆಗಾ ಕೋವಿಡ್‍ ಆಸ್ಪತ್ರೆಗಳನ್ನು ಕಟ್ಟಬಹುದಿತ್ತು ಎಂದು ಪರೀಣಿತರು ಲೆಕ್ಕ ಹಾಕಿದ್ದಾರೆ.

***

ಕಾರ್ಯಾಂಗದ  ಕೆಲಸ ನ್ಯಾಯಾಂಗದಿಂದ!

ದಿಲ್ಲಿಗೆ 700 ಮೆಟ್ರಿಕ್‍ ಟನ್  ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಬೇಕು ಎಂದು ದಿಲ್ಲಿ ಹೈಕೋರ್ಟ್ ನ ಆದೇಶ ಪಾಲಿಸಲು ವಿಫಲವಾದ ಮೇಲೆ, 1200 ಮೆಟ್ರಿಕ್‍ ಟನ್‍ ಪೂರೈಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರಕಾರದ ಅರ್ಜಿಯನ್ನು ತಿರಸ್ಕರಿಸಿದ ಮೇಲೆ, ಸುಪ್ರಿಂ ಕೋರ್ಟ್ ಸ್ವತಃ ಮಧ್ಯಪ್ರವೇಶಿಸಿ ದೇಶವಿಡೀ ಆಕ್ಸಿಜನ್‍ ಪೂರೈಕೆಯನ್ನು ನಿರ್ವಹಿಸಲು ತಾನೇ ಒಂದು ಕಾರ್ಯಪಡೆಯನ್ನು ನೇಮಿಸಬೆಕಾಗಿ ಬಂದಿದೆ!

(ಪಿ.ಮಹಮ್ಮದ್, ವಾರ್ತಾಭಾರತಿ)

***

“ಸರ್, ಜನಗಳಿಗೆ ಆಕ್ಸಿಜನ್‍ ತಲುಪುವಲ್ಲಿ ವಿಳಂಬವಾಗುತ್ತಿದೆ”

“ಬುಲೆಟ್‍ ಟ್ರೈನ್‍ ನಿರ್ಮಾಣವನ್ನು ಅನಿವಾರ್ಯ ಸೇವೆ ಎಂದು ಘೋಷಿಸಿ ಬಿಡು!!”

(ರಾಜೇಂದ್ರ ಧೋಡಪ್‍ಕರ್, ಕಾರ್ಟೂನಿಸ್ಟ್ ಕ್ಲಬ್‍ ಆಫ್‍ ಇಂಡಿಯ)

***

ಚುನಾವಣೆಗಳು ಸದ್ಯ ಮುಗಿದವು, ಇನ್ನು ಪೆಟ್ರೋಲ್‍-ಡೀಸೆಲ್ ಬೆಲೆಗಳ ಏರಿಕೆಯ ಸರದಿ !

ಏಪ್ರಿಲ್‍ 30ರಂದು ವಿಧಾನಸಭಾ ಚುನಾವಣೆಗಳಲ್ಲಿ ಮತದಾನ ಮುಗಿಯುತ್ತಿದ್ದಂತೆಯೇ ಪೆಟ್ರೋಲ್-ಡೀಸೆಲ್ ಬೆಲೆಗಳು ಸತತ 4 ದಿನ ಏರುತ್ತಲೇ ಬಂದಿವೆ-ಇನ್ನೂ ಏರಲಿವೆ ಎಂದು ಹೇಳಲಾಗುತ್ತಿದೆ

“ಸದ್ಯ ಚುನಾವಣಾ ರ‍್ಯಾಲಿಗಳಿಲ್ಲ. ಆದ್ದರಿಂದ ಮನೆಯಲ್ಲೆ ಇರಿ, ಸುರಕ್ಷಿತವಾಗಿರಿ” ಎನ್ನುವಂತಿದೆ ಗೃಹಮಂತ್ರಿಗಳು

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ಜನಗಳು ರ‍್ಯಾಲಿಗಳಿಗೆ ಹೋಗಬೇಕಾಗಿಲ್ಲ, ಆದರೆ ಅಸ್ಪತ್ರೆ ಇತ್ಯಾಧಿಗಳಿಗೆ ಓಡಾಡಲೇ ಬೇಕಲ್ಲವೇ?

ಆದರೇನಂತೆ ! ಅಂಬ್ಯುಲೆನ್ಸ್ ಗಳ ಓಡಾಟದಿಂದಲಾದರೂ ಅರ್ಥವ್ಯವಸ್ಥೆಗೆ ಇಂಧನ ಸಿಗುತ್ತದಲ್ಲವೇ?

(ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್)

ಪೆಟ್ರೋಲಿಯಂ ಮಾರಾಟ ಕಂಪನಿಗಳು ಮತ್ತು ಸರಕಾರದ ಚರ್ವಿತ ಚರ್ವಣ ಸಮಜಾಯಿಷಿಗಳು ಕೂಡ ಮತ್ತೆ ಬರುತ್ತಿವೆ. ಆದರೆ ಈ ಕಾರಣಗಳು ಚುನಾವಣಾ ಪ್ರಚಾರದ ಸಮಯದಲ್ಲಿ ಹಿಂದಕ್ಕೆ ಸರಿಯುವುದು ಸಾಧ್ಯವಿದ್ದರೆ ಎರಡನೇ ಕೋವಿಡ್‍ ಅಲೆಯ ದುರಿತ ಕಾಲದಲ್ಲಿ ಅವನ್ನು ಪಕ್ಕಕ್ಕೆ ಇಡಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆ ಕೇಳುವುದು  ಬಹುಶಃ ಈಗಿನ ವಾತಾವರಣದಲ್ಲಿ ಅರ್ಥಹೀನ!

“ನಾವು ಗೆದ್ದಿರುವಲ್ಲಿ ಒಂದು ಪೈಸೆ ಹೆಚ್ಚಿಸಿ, ಸೋತಿರುವಲ್ಲಿ ಒಂದು ರೂಪಾಯಿ ಹೆಚ್ಚಿಸಿ!”

(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

(ವ್ಯಂಗ್ಯಚಿತ್ರಗಳ ಕೃಪೆ: ಪಂಜು ಗಂಗೊಳ್ಳಿ, ಸಜತ್‍ಕುಮಾರ್, ಸಂದೀಪ್‍ ಅಧ್ವರ್ಯು, ಅಲೋಕ್ ನಿರಂತರ್, ಪಿ.ಮಹಮ್ಮದ್, ರಾಜೇಂದ್ರ ದೋಢಪ್‍ಕರ್,  ಇ.ಪಿ.ಉನ್ನಿ, ಸುಭಾನಿ)

Donate Janashakthi Media

One thought on “ಪ್ರಾಣವಾಯು ಕೊರತೆ, ಪೆಟ್ರೋಲ್‍ ಶತಕ: ಫಕೀರನಿಗೆ ಮಾತ್ರ ಫಿಕೀರ್ ಇಲ್ಲ!

Leave a Reply

Your email address will not be published. Required fields are marked *