ಚೆನ್ನೈ: ಕರ್ನಾಟಕದ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಕೋವಿಡ್ ಸೋಂಕು ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿ ಮೇ 10 ರಿಂದ 24ರವರೆಗೆ ಹದಿನಾಲ್ಕು ದಿನಗಳ ಕಾಲ ರಾಜ್ಯವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
ಇದನ್ನು ಓದಿ: ಮೇ 10 ರಿಂದ 24ರ ವರೆಗೆ ರಾಜ್ಯದ್ಯಂತ ಲಾಕ್ಡೌನ್: ಸಿಎಂ ಯಡಿಯೂರಪ್ಪ ಘೋಷಣೆ
ಕೇರಳ ನಂತರ ಕರ್ನಾಟಕ ಈಗ ತಮಿಳುನಾಡಿನಲ್ಲಿ ಲಾಕ್ಡೌನ್ ಘೋಷಿಸಿರುವ ಸರಕಾರ ದಕ್ಷಿಣ ಭಾರತದ ಪ್ರಮುಖ ಮೂರು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ಈ ರೀತಿಯ ಕಠಿಣ ತೀರ್ಮಾನಕ್ಕೆ ಬಂದಿವೆ.
‘ಅನಿವಾರ್ಯ ಕಾರಣಗಳಿಂದಾಗಿ’ ಈ ರೀತಿಯ ನಿರ್ಧಾರಕ್ಕೆ ಬರಲಾಗಿದೆ ಎಂದು ನೂತನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ. ತಜ್ಞ ವೈದ್ಯರೊಂದಿಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ಬಳಿಕ ಅಭಿಪ್ರಾಯಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
‘ಮೇ 10 ರಂದು ಬೆಳಿಗ್ಗೆ 4 ರಿಂದ ಮೇ 24 ರಂದು ಬೆಳಿಗ್ಗೆ 4 ಗಂಟೆವರೆಗೆ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಕೇರಳ: ಮೇ 8 ರಿಂದ 16ರವರೆಗೆ ಸಂಪೂರ್ಣ ಲಾಕ್ಡೌನ್
ಲಾಕ್ಡೌನ್ಸಮಯದಲ್ಲಿ ಅಗತ್ಯ ಸೇವೆಗಳನ್ನು ಮುಂದುವರೆಸಲಾಗುವುದು. ಪ್ರಮುಖವಾಗಿ ಬ್ಯಾಂಕುಗಳು (ಶೇಕಡಾ 50 ಸಿಬ್ಬಂದಿ) ಮತ್ತುಪಡಿತರಅಂಗಡಿಗಳು.ಟೇಕ್ಅವೇಗಳಿಗೆಮಾತ್ರರೆಸ್ಟೋರೆಂಟ್ಗಳನ್ನುಅನುಮತಿಸಲಾಗುತ್ತದೆ.
ಆಸ್ಪತ್ರೆ ಅಥವಾ ವಿವಾಹ / ಅಂತ್ಯಕ್ರಿಯೆಯ ಕೆಲಸಗಳನ್ನು ಹೊರತುಪಡಿಸಿ ಯಾವುದೇ ಕ್ಯಾಬ್ಗಳು ಅಥವಾ ಆಟೋರಿಕ್ಷಾಗಳು ರಸ್ತೆಯಲ್ಲಿ ಓಡಾಡಕ್ಕೆ ಅವಕಾಶವಿಲ್ಲ.
ಇದನ್ನು ಓದಿ: ಮುಖ್ಯಮಂತ್ರಿಯಾಗಿ ಎಂ ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ
ನೆನ್ನೆಯಷ್ಟೆ ಡಿಎಂಕೆ ಪಕ್ಷದ ನೂತನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ೩೩ ಸಚಿವರು ಅಧಿಕಾರ ಸ್ವೀಕರಿಸಿದರು. ಸರಕಾರವು ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಮಹತ್ವ ತೀರ್ಮಾನಗಳನ್ನು ಕೈಗೊಂಡಿದ್ದವು. ಇಂದು ರಾಜ್ಯವನ್ನು ಸಂಪೂರ್ಣ ಲಾಕ್ಡೌನ್ಗೆ ಆದೇಶ ನೀಡಿದೆ.
ತಮಿಳುನಾಡಿನಲ್ಲಿ ನೆನ್ನೆ ಒಂದೇ ದಿನ 26,465 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ರಾಜ್ಯದಲ್ಲಿ ಒಟ್ಟು ಸೋಂಕಿರ ಸಂಖ್ಯೆ 13.23 ಲಕ್ಷಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆಯ 197 ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 15,171 ಕ್ಕೆ ಏರಿದೆ. ಆರೋಗ್ಯ ಇಲಾಖೆಯ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ 1,35,355 ರಷ್ಟು ಇದೆ.