ರೆಮ್‌ಡೆಸಿವಿರ್ ಅಕ್ರಮ ಮಾರಾಟ: ಆರು ಮಂದಿ ಬಂಧನ

ಬೆಂಗಳೂರು: ಕೋವಿಡ್ ಸೋಂಕಿತರು ಗುಣಮುಖವಾಗಲು‌ ಅತ್ಯಂತ ಪರಿಣಾಮಕಾರಿಯಾಗಿ ಬಳಕೆಗೆ ಬರುವ ರೆಮ್‌ಡೆಸಿವಿರ್ ಚುಚ್ಚು ಮದ್ದು ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರು ಜನರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಇದನ್ನು ಓದಿ: ದುಡ್ಡು ಕೊಟ್ಟರೆ ಹಾಸಿಗೆ: ದಂಧೆಯ ರುವಾರಿ ಸತೀಶ್‌ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

‘ಕೊರೊನಾ ಸೋಂಕಿತರ ಸಂಬಂಧಿಕರನ್ನು ಸಂಪರ್ಕಕ್ಕೆ ಆರೋಪಿಗಳು ಏಜೆಂಟರು ಹಾಗೂ ಆಸ್ಪತ್ರೆಯವರ ಸಹಾಯ ಪಡೆದುಕೊಳ್ಳುತ್ತಿದ್ದರು. ಸರ್ಕಾರದ ದರಕ್ಕಿಂತ ಹೆಚ್ಚಿನ ದರಕ್ಕೆ ಚುಚ್ಚುಮದ್ದು ಮಾರುತ್ತಿದ್ದರು’ ಎಂದೂ ಪೊಲೀಸ್‌ ಹಿರಿಯ ಅಧಿಕಾರಿಗಳು ತಿಳಿಸಿದರು.

ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸುತ್ತಿದ್ದರೂ ರೆಮ್‌ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ದೊಡ್ಡ ಜಾಲ ಹುಟ್ಟಿಕೊಂಡಿರುವುದು ಬೆಚ್ಚಿ ಬೀಳಿಸಿದೆ.

ಇದನ್ನು ಓದಿ: ಬಿಬಿಎಂಪಿ ಬೆಡ್‌ ಹಗರಣ : ಹಗರಣದ ಹಿಂದಿರುವವರು ಯಾರು?

ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಮೆಡಿಕಲ್ ಪ್ರತಿನಿಧಿಯೊಬ್ಬನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಜನಾರ್ಧನ್ ಬಂಧಿತ ಆರೋಪಿ. ಈತನಿಂದ ಮೂರು ವಲಯ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ನಾಗವಾರದ ಮೆಡಿಕಲ್ ರೆಪ್ರಸೆಂಟೀವ್ ದೀಪಕ್ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದಲೂ ಕೆಲವು ರೆಮ್‌ಡೆಸಿವಿರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಲಹಂಕ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಲೋಕೇಶ್ ನನ್ನು ಬಂಧಿಸಿರುವ ಪೊಲೀಸರು ಆತನಿಂದ ನಾಲ್ಕು ವಯಲ್ ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಜೆ.ಸಿ.ನಗರ ಪೊಲೀಸರು ಮೂರು ಪ್ರತ್ಯೇಕವಾದ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ತೇಜಸ್ವಿ ಸೂರ್ಯ ಹೇಳುವಂತೆ ಬೆಂಗಳೂರಲ್ಲಿ ಹಾಸಿಗೆ ಲಭ್ಯತೆ ಶೂನ್ಯಕ್ಕೆ ಇಳಿದಿಲ್ಲ

ಸುಬ್ರಮಣ್ಯ ಪೊಲೀಸ್‌ ಠಾಣೆ ವ್ಯಾಪ್ತಿ: ಸೋಂಕಿತರಿಗೆ ದುಬಾರಿ ಬೆಲೆಗೆ ರೆಮ್‌ಡೆಸಿವಿರ್ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಸುಬ್ರಮಣ್ಯನಗರ ಪೊಲೀಸರು ಅವರಲ್ಲಿ ಪ್ರಮುಖ ಆರೋಪಿಯಾದ ಹೆಸರಘಟ್ಟ ಮುಖ್ಯ ರಸ್ತೆಯ ಎಸ್ಎಲ್‌ವಿ ಮೆಡಿಕಲ್ ಸ್ಟೋರ್‌ನ ಹೃದಯ ರಾಜ್ ಬಂಧಿತನು. ಈತನಿಂದ ಮೂರು ರೆಮ್‌ಡೆಸಿವಿರ್ ವಶಕ್ಕೆ ಪಡೆಯಲಾಗಿದೆ. ಇವನೊಂದಿಗೆ ನಾಗರಭಾವಿಯ ಮಲ್ಲಹತ್ತಹಳ್ಳಿಯ ದಿನೇಶ್, ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ಗಾಯತ್ರಿ ಡಯೋಗ್ನಸ್ಟಿಕ್ ನ ಶಂಕರ್ ಬಂಧಿತರು.

ಆರೋಪಿಗಳು ರೆಮ್‌ಡಿಸಿವಿರ್ ಚುಚ್ಚುಮದ್ದು ಸಿಗುತ್ತದೆ ಎಂದು ವಾಟ್ಸ್‌ಆ್ಯಪ್, ಫೇಸ್‌ಬುಕ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದರು. ಪೊಲೀಸರು ಕೊರೊನಾ ಸೋಂಕಿತರಿಗೆ ಚುಚ್ಚುಮದ್ದು ಬೇಕೆಂದು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *