ಜಾಗತಿಕ ಕಾರ್ಪೊರೇಟ್ ತೆರಿಗೆ-ಬಿಡೆನ್ ಆಡಳಿತದ ಮಿಶ್ರ ಸಂಕೇತಗಳು – ಪ್ರೊ. ಸಿ.ಪಿ. ಚಂದ್ರಶೇಖರ್

ಸರಕಾರ ಮಾಡಬೇಕಾದ ವೆಚ್ಚದ ಪ್ರಮಾಣವನ್ನು ಹೆಚ್ಚಿಸುವುದೇ ಅಜೆಂಡಾ. ಇದಕ್ಕೆ ಹೆಚ್ಚಿನ ತೆರಿಗೆ ಆದಾಯ ಮತ್ತು ಒಂದು ಜಾಗತಿಕ ತೆರಿಗೆ ಒಪ್ಪಂದ ಒಂದು ಪೂರ್ವಷರತ್ತು. ಆದರೆ ಈ ಕುರಿತು ಒಂದು ಜಾಗತಿಕ ಒಪ್ಪಂದಕ್ಕೆ ಬರುವುದು ಸುಲಭಸಾಧ್ಯವಲ್ಲ. ಇದು, ಉದಾಹರಣೆಗೆ, ಡಿಜಿಟಲ್‌ಸೇವಾ ತೆರಿಗೆ(ಡಿಎಸ್‌ಟಿ) ಕುರಿತಂತೆ ಅಮೆರಿಕಾದ ನಿಲುವಿನಲ್ಲಿ ಬಿಂಬಿತವಾಗುತ್ತದೆ.

ಭಾರತ, ಅಸ್ಟ್ರೇಲಿಯ, ಇಟಲಿ, ಸ್ಪೇನ್, ಟರ್ಕಿ ಮತ್ತು ಯುಕೆ ಅಮೆರಿಕನ್ ಡಿಜಿಟಲ್ ಕಂಪನಿಗಳು ತಮ್ಮ ದೇಶಗಳಲ್ಲಿ ಮಾಡುವ ವ್ಯವಹಾರಗಳ ಆದಾಯಗಳ ಮೇಲೆ ತೆರಿಗೆಯನ್ನು ಹಾಕಿರುವುದರ ಬಗ್ಗೆ ಕುಪಿತಗೊಂಡ ಅಮೆರಿಕನ್ ಆಡಳಿತ ತನ್ನ ಸೆಕ್ಷನ್ 301ರ ಅಡಿಯಲ್ಲಿ ಕ್ರಮಕ್ಕೆ ಒಳಪಡುತ್ತಾರೆ ಎಂದು ಯುಎಸ್ ವ್ಯಾಪಾರ ಪ್ರತಿನಿಧಿ(ಯುಎಸ್‌ಟಿಆರ್) ಕಚೇರಿ ಬಿಡೆನ್ ಆಡಳಿತ ಬಂದ ಮೇಲೂ ಒಂದಿಷ್ಟು ವರದಿಗಳನ್ನು ಕಳಿಸಿತ್ತು.

ಬಿಡೆನ್ ಈಗ ಯುಎಸ್‌ಟಿಆರ್ ಹುದ್ದೆಗೆ ನೇಮಿಸಿರುವ ಕ್ಯಾಥರಿನ್ ತಾಯ್ ಕೂಡ ಅಂತರರಾಷ್ಟ್ರೀಯ ತೆರಿಗೆಗಳನ್ನು ಕುರಿತಂತೆ ಒಇಸಿಡಿ ಮೂಲಕ ಅಂತರರಾಷ್ಟ್ರೀಯ ಒಮ್ಮತಕ್ಕೆ ಬರುವ ವರೆಗೆ ಸೆಕ್ಷನ್ 301ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದಿದ್ದಾರೆ.

ಇದನ್ನು ಓದಿ: ಬಿಡೆನ್ ಪ್ಯಾಕೇಜ್ ಉದ್ದೇಶ ಒಳ್ಳೆಯದೇ, ಆದರೆ…

ಭಾರತ 2016ರಲ್ಲಿ ಡಿಜಿಟಲ್ ಸೇವಾ ತೆರಿಗೆ(ಡಿಎಸ್‌ಟಿ) ಎಂಬುದನ್ನು ಆರಂಭಿಸಿತು, 2020ರಲ್ಲಿ ಇದನ್ನು ವಿಸ್ತರಿಸಿ ಅನಿವಾಸಿ ಇ-ವಾಣಿಜ್ಯ ಕಂಪನಿಗಳು ಭಾರತದಲ್ಲಿ ಮಾಡುವ ವ್ಯವಹಾರಗಳಿಂದ ಗಳಿಸುವ ಆದಾಯಗಳ ಮೇಲೆ 2% ತೆರಿಗೆ ವಿಧಿಸಿತು. ಇದರ  ಹಿಂದಿರುವ ಮೂಲ ವಿಚಾರ ಎಂದರೆ, ಇಂತಹ ಕಂಪನಿಗಳು ಭಾರತದಲ್ಲಿ ಪಡೆಯುವ ಆದಾಯಗಳು ಮತ್ತು ಲಾಭಗಳ ದಾಖಲೆಗಳನ್ನು ಕೊಡುವುದಿಲ್ಲ, ಇದರಿಂದ ಭಾರತ ಸರಕಾರಕ್ಕೆ ಇಂತಹ ಚಟುವಟಿಕೆಗಳಿಂದ ಬರಬೇಕಾಗಿರುವ ತೆರಿಗೆ ಆದಾಯ ಸಿಗದಂತಾಗುತ್ತದೆ. ಅಂತರರಾಷ್ಟ್ರೀಯ ತೆರಿಗೆಗಳನ್ನು ಕುರಿತಂತೆ ಒಇಸಿಡಿ ತಯಾರಿಸಿರುವ ನೀಲನಕ್ಕೆ ಅನಿವಾಸಿ ಕಂಪನಿಗಳು ಬೇರೆ ದೇಶಗಳಲ್ಲಿ ಪಡೆಯುವ ಆದಾಯಗಳು ಮತ್ತು ಲಾಭಗಳ ಮೇಲೆ ತೆರಿಗೆಯಲ್ಲಿ ಪಾಲು ಪಡೆಯುವ ಒಂದು ಹಕ್ಕು ಹೊಂದಿದ್ದಾರೆ ಎಂದು  ಗುರುತಿಸಿದೆ.

ಆದ್ದರಿಂದ ಜಾಗತಿಕ ಕನಿಷ್ಟ ಕಾರ್ಪೊರೇಟ್ ತೆರಿಗೆಯ ತನ್ನ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಬೇಕಾದರೆ ಈ ಡಿಎಸ್‌ಟಿಯ ಯಾವುದಾದರೊಂದು ಪ್ರಸ್ತಾವವನ್ನು ಸ್ವೀಕರಿಸಬೇಕಾಗುತ್ತದೆ.

ಹೀಗಿರುವಾಗ ತನ್ನ ಸೆಕ್ಷನ್ 301ರ ಅಡಿಯಲ್ಲಿ ಸುಂಕಪಟ್ಟಿಯನ್ನು ಹಾಕುವ ಬೆದರಿಕೆಯನ್ನು ಮುಂದುವರೆಸುವುದೆಂದರೆ , ಒಂದು ಅಂತರರಾಷ್ಟ್ರೀಯ ತೆರಿಗೆ ಸಂರಚನೆಯನ್ನು ರೂಪಿಸುವುದರಲ್ಲಿ ಸಹಕರಿಸಲು ಅಮೆರಿಕಾ ನಿಜವಾಗಿಯೂ ಸಿದ್ಧವಿದೆಯೇ ಎಂಬ ಬಗ್ಗೆ ವೈರುಧ್ಯಪೂರ್ಣ ಸಂಕೇತಗಳನ್ನು ಕಳಿಸಿದಂತಾಗುತ್ತದೆ. ತನ್ನ ಆರ್ಥಿಕ ಸ್ಪರ್ಧಾತ್ಮಕತೆ ಮತ್ತು ಪ್ರಾಬಲ್ಯವನ್ನು ಮತ್ತೆ ಗಳಿಸುವ ಆಕಾಂಕ್ಷೆಯ ಈಡೇರಿಕೆಗಾಗಿ ಜಾಗತಿಕ ಕನಿಷ್ಟ ಕಾರ್ಪೊರೇಟ್ ತೆರಿಗೆಯ ಮಾತಾಡುತ್ತಿದೆಯೇ ಎಂಬ  ಸಂದೇಹ ಮೂಡಿಸುವಂತದ್ದು.

(-ಫ್ರಂಟ್‌ಲೈನ್, ಮೇ 7, 2021ರಲ್ಲಿ ಪ್ರಕಟವಾದ Biden’s global corporate tax plans send mixed signals ಲೇಖನದಿಂದ)

Donate Janashakthi Media

Leave a Reply

Your email address will not be published. Required fields are marked *