ಇತಿಹಾಸ ನಿರ್ಮಿಸಿದ ಎಲ್.ಡಿ.ಎಫ್ : ಶತಕ ಬಾರಿಸಿದ ಎಡರಂಗ

ಕೇರಳ ಮತದಾರರನ್ನು ಅಭಿನಂದಿಸಿದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ

ತಿರುವನಂತಪುರಂ: ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ 100 ರಲ್ಲಿ ಆಡಳಿತಾರೂಢ ಎಲ್‌ಡಿಎಫ್ ತನ್ನ ಮುನ್ನಡೆ ಕಾಯ್ದುಕೊಂಡಿದೆ. ಪ್ರತಿಪಕ್ಷದ ಕಾಂಗ್ರೆಸ್ ನೇತೃತ್ವದ ಯುಡಿಎಫ್ 40 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಳೆದ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಸಂಪೂರ್ಣವಾಗಿ ಸೋಲುಂಡು ಇದ್ದ ಒಂದು ಸ್ಥಾನವನ್ನು ಕಳೆದುಕೊಂಡಿದೆ. ಆರಂಭದಲ್ಲಿ ಮೂರು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಅಂತಮವಾಗಿ ಸೊನ್ನೆ ಸುತ್ತಿದೆ.

ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಕೇರಳದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ತಮ್ಮ ವಿಡಿಯೋ ಸಂದೇಶದ ಮೂಲಕ ರಾಜ್ಯದ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಜನರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಎಡಪಕ್ಷಗಳು ಹೋರಾಟವನ್ನು ಮುಂದುವರೆಸಲಿವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

“ಎಲ್‌ಡಿಎಫ್ ಸರ್ಕಾರವು ಜನರು ಎದುರಿಸಿದ ಎಲ್ಲಾ ಸವಾಲುಗಳನ್ನು ಮತ್ತು ಸಾಂಕ್ರಾಮಿಕದ ಸಂಕಟವನ್ನು ನಿಭಾಯಿಸಿದ ರೀತಿ ಅಭೂತಪೂರ್ವವಾಗಿದ್ದು ಜನರು ನಮ್ಮ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಕೇರಳದ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಸರ್ಕಾರ ಕೋವಿಡ್ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎಂದು ಕೇರಳ ಮಾದರಿಯನ್ನು ಜಗತ್ತಿಗೆ ನೀಡಿದೆ.” ಅವರು ಹೇಳಿದರು.

ಇದನ್ನೂ ಓದಿ : ಚುನಾವಣಾ ಫಲಿತಾಂಶ : ಹೊಸ ಇತಿಹಾಸದತ್ತ ಎಲ್.ಡಿ.ಎಫ್‌ – ಭಾರೀ ಮುನ್ನಡೆ ಕಾಯ್ದುಕೊಂಡ ಎಡರಂಗ

ರಾಷ್ಟ್ರ ಹಾಗೂ ರಾಜ್ಯಗಳೆರಡೂ ಅಪಾಯದಲ್ಲಿದೆ. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಜೀವನೋಪಾಯದ ಸಮಸ್ಯೆಗಳು ಮತ್ತು ಸಾಂವಿಧಾನಿಕ, ಜಾತ್ಯತೀತ, ಭಾರತದ ಗಣರಾಜ್ಯದ ರಕ್ಷಣೆ ನಿಟ್ಟಿನಲ್ಲಿ ಎಲ್‌ಡಿಎಫ್ ತನ್ನ ಪಾತ್ರವನ್ನು ವಹಿಸಲಿದೆ ಮತ್ತು ಕೇರಳದ ಜನರು ಯಾವಾಗಲೂ ಒಗ್ಗಟ್ಟಾಗಿ ಇರುತ್ತಾರೆಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದರು.

1980ರ ದಶಕದಿಂದ ಕೇರಳ ರಾಜಕೀಯದಲ್ಲಿ ಒಮ್ಮೆ ಎಲ್ ಡಿಎಫ್, ಒಮ್ಮೆ ಯುಡಿಎಫ್ ಅಧಿಕಾರಕ್ಕೆ ಬರುತ್ತಿತ್ತು. ಒಂದು ಬಾರಿ ಅಧಿಕಾರಕ್ಕೇರಿದವರು ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲವಾಗಿತ್ತು. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಮತದಾರರ ಎಲ್ ಡಿಎಫ್ ಗೆ ಎರಡನೇ ಅವಧಿಗೆ ಕೈಹಿಡಿದಂತಾಗಿದೆ. ಕೇರಳದ ಎಡರಂಗ ಸರಕಾರ ಕಳೆದ ಐದು ವರ್ಷದಲ್ಲಿ ಎದುರಾದ ಸಂಕಷ್ಟಗಳನ್ನು ನಿವಾರಿಸಿದ ರೀತಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಆರೋಗ್ಯ, ಶಿಕ್ಷಣ, ಜನಪರ ಯೋಜನೆಗಳ ಮೂಲಕ ಎಲ್.ಡಿ.ಎಫ್ ಕೇರಳದ ಜನರನ್ನು ಗೆದ್ದಿತು. ಜನ ಈಗ ಎಲ್.ಡಿ.ಎಫ್ ನ್ನು ಎರಡನೇ ಅವಧಿಗೆ ಆಯ್ಕೆ ಮಾಡಿದ್ದಾರೆ.

 ಸೀತಾರಾಂ ಯೆಚೂರಿಯವರ ಶುಭಾಶಯದ ವಿಡಿಯೊ

Donate Janashakthi Media

One thought on “ಇತಿಹಾಸ ನಿರ್ಮಿಸಿದ ಎಲ್.ಡಿ.ಎಫ್ : ಶತಕ ಬಾರಿಸಿದ ಎಡರಂಗ

  1. Congratulations! Manjeshwaram Tuluva MLA
    Mr.AM Ashraf!
    ತುಳು ಭಾಷೆದ ಜವಣೆ ನಮ್ಮ ತುಳುವೆ ಅಶ್ರಫ್!(ಉಪ್ಪಳದ ಅಬ್ಬೋಕರ್ ನ ಮಗೆ)

Leave a Reply

Your email address will not be published. Required fields are marked *