ತಿರುವನಂತಪುರಂ: ಪಂಚರಾಜ್ಯಗಳ ಚುನಾವಣೆಯ ಮತಎಣಿಕೆ ಕಾರ್ಯ ಬಿರುಸಿನಿಂದ ಮುಂದುವರಿದಿದ್ದು, ಏತನ್ಮಧ್ಯೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಈ ಬಾರಿ ಎಲ್ ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸುವತ್ತ ದಾಪುಗಾಲಿಟ್ಟಿದೆ.
140 ಸ್ಥಾನಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 71 ಸ್ಥಾನಗಳ ಅಗತ್ಯವಿದೆ. ಆರಂಭಿಕ ಟ್ರೆಂಡ್ ಪ್ರಕಾರ ಕೇರಳದಲ್ಲಿ ಎರಡನೇ ಬಾರಿಗೆ ಎಲ್ ಡಿಎಫ್ ಆಡಳಿತಕ್ಕೆ ಏರುವ ಮುನ್ಸೂಚನೆ ನೀಡಿದೆ. ಸದ್ಯದ ಮತಎಣಿಕೆಯಲ್ಲಿ ಎಲ್ ಡಿಎಫ್ 90 ಸ್ಥಾನಗಳಲ್ಲಿ, ಯುಡಿಎಫ್ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಕೊನೆಯ ಸುತ್ತಿನವರೆಗೂ ಎಲ್ ಡಿಎಫ್ ಮೈತ್ರಿಕೂಟ ಇದೇ ಮುನ್ನಡೆ ಕಾಯ್ದುಕೊಂಡರೆ ಮತ್ತೊಮ್ಮೆ ಪೂರ್ಣಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತವಾಗಲಿದೆ. ಅಷ್ಟೇ ಅಲ್ಲ 1980ರ ದಶಕದಿಂದ ಕೇರಳ ರಾಜಕೀಯದಲ್ಲಿ ಒಮ್ಮೆ ಎಲ್ ಡಿಎಫ್, ಒಮ್ಮೆ ಯುಡಿಎಫ್ ಅಧಿಕಾರಕ್ಕೆ ಬರುತ್ತಿತ್ತು.
ಒಂದು ಬಾರಿ ಅಧಿಕಾರಕ್ಕೇರಿದವರು ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲವಾಗಿತ್ತು. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಮತದಾರರ ಎಲ್ ಡಿಎಫ್ ಗೆ ಎರಡನೇ ಅವಧಿಗೆ ಕೈಹಿಡಿದಂತಾಗಿದೆ. ಕೇರಳದ ಎಡರಂಗ ಸರಕಾರ ಕಳೆದ ಐದು ವರ್ಷದಲ್ಲಿ ಎದುರಾದ ಸಂಕಷ್ಟಗಳನ್ನು ನಿವಾರಿಸಿದ ರೀತಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಆರೋಗ್ಯ, ಶಿಕ್ಷಣ, ಜನಪರ ಯೋಜನೆಗಳ ಮೂಲಕ ಎಲ್.ಡಿಎಫ್. ಎರಡನೇ ಭಾರೀ ಅಧಿಕಾರಕ್ಕೇರಿ ಇತಿಹಾಸ ನಿರ್ಮಿಸುವುದು ನಿಚ್ಚಳವಾಗಿದೆ.
- ತಮಿಳುನಾಡಿನಲ್ಲಿ ಡಿಎಂಕೆಗೆ 128 ಅಣ್ಣಾಡಿಎಂಕೆಗೆ 92 ಕ್ಷೇತ್ರಗಳಲ್ಲಿ ಮುನ್ನಡೆ
- ಕೇರಳದಲ್ಲಿ ಎಲ್ಡಿಎಫ್ 90 ಯುಡಿಎಫ್ 47 ಕ್ಷೇತ್ರಗಳಲ್ಲಿ ಮುನ್ನಡೆ
- ಅಸ್ಸಾಂನಲ್ಲಿ ಬಿಜೆಪಿ 71, ಕಾಂಗ್ರೆಸ್ 31 ಕ್ಷೇತ್ರಗಳಲ್ಲಿ ಮುನ್ನಡೆ
- ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 147 ಬಿಜೆಪಿ 116 ,ಎಡರಂಗ ಮೈತ್ರಿ : 03 ಕ್ಷೇತ್ರಗಳಲ್ಲಿ ಮುನ್ನಡೆ
- ಪುದುಚೇರಿ : ಎನ್. ಆರ್.ಸಿ 08 ಮತ್ತು ಕಾಂಗ್ರೆಸ್ 04 ಕ್ಷೇತ್ರಗಳ ಮುನ್ನಡೆ.
ಕರ್ನಾಟಕ ಉಪಚುನಾವಣೆ
ಬೆಳಗಾವಿ ಲೋಕಸಭೆ : ಕಾಂಗ್ರೆಸ್ ಆರಂಭಿಕ ಮುನ್ನಡೆ
ಬಸವಕಲ್ಯಾಣ : ಬಿಜೆಪಿ ಆರಂಭಿಕ ಮುನ್ನಡೆ
ಮಸ್ಕಿ : ಕಾಂಗ್ರೆಸ್ ಆರಂಬಿಕ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗಾಗಿ http://www.Janashakthimedia.com ಗೆ ಭೇಟಿ ಕೊಡಿ.
ಪಂಚರಾಜ್ಯ ಚುನಾವಣೆ : ಮತದಾರನ ತೀರ್ಪೇನು? ಸಂಜೆ 6 ಕ್ಕೆ ಪ್ರೈಮ್ ಡಿಬೆಟ್
ಜನಶಕ್ತಿ ಮೀಡಿಯಾ Facebook & YouTube ನಲ್ಲಿ ತಪ್ಪದೆ ವೀಕ್ಷಿಸಿ.