ದಾಸ್ತಾನಿನಲ್ಲಿ ರೆಮಿಡಿಸಿವಿರ್ ಔಷಧಿಯ ಕೊರತೆ ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದೆ
ಬೆಂಗಳೂರು : ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯ ಮಧ್ಯೆ ರೆಮ್ಡೆಸಿವಿರ್ ಇಂಜೆಕ್ಷನ್ ಕೊರತೆಯಾಗುತ್ತಿರುವುದು ಹೆಚ್ಚಿನ ಆತಂಕವನ್ನು ಸೃಷ್ಟಿಸಿದೆ. ಅನೇಕರು ಇದೇ ಕಾರಣದಿಂದಾಗಿ ಸಾವನ್ನಪ್ಪುತ್ತಿದ್ದಾರೆ.
ಹೆಚ್ಚುತ್ತಿರುವ ಕೊರೊನಾವೈರಸ್ನಿಂದಾಗಿ ದೇಶದಲ್ಲಿ ರೆಮಿಡಿಸಿವಿರ್ ಔಷಧಿಯ ದಾಸ್ತಾನಿನಲ್ಲಿ ಎದುರಾದ ಕೊರತೆ ಸಾರ್ವಜನಿಕರಲ್ಲಿ ಚಿಂತೆ ಹೆಚ್ಚಿಸಿದೆ. ದೇಶದ ರೋಗಿಗಳಿಗೆ ರೆಮ್ಡೆಸಿವಿರ್ ಇಂಜೆಕ್ಷನ್ ತಲುಪಲು ಸುಲಭವಾಗುವಂತೆ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು, ಆದರೆ ಅದಿನ್ನು ಜಾರಿಯಾಗುತ್ತಿಲ್ಲ.
ರೆಮ್ಡಿಸಿವಿರ್ ಔಷಧಿಯ ಸ್ಟಾಕ್ / ವಿತರಣೆಯ ವಿವರಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಕೇಂದ್ರ ಸರ್ಕಾರ ರೆಮ್ಡೆಸಿವಿರ್ನ ಎಲ್ಲಾ ದೇಶೀಯ ಉತ್ಪಾದಕರಿಗೆ ಸೂಚಿಸಿದೆ. ಡ್ರಗ್ ಇನ್ಸ್ಪೆಕ್ಟರ್ಗಳು ಮತ್ತು ಇತರ ಅಧಿಕಾರಿಗಳಿಗೆ ಸ್ಟಾಕ್ ಚೆಕ್ ನಡೆಸಲು ಮತ್ತು ಹಿಡುವಳಿ, ಕಪ್ಪು ಮಾರ್ಕೆಟಿಂಗ್ ನಿಲ್ಲಿಸಲು ಸೂಚನೆ ನೀಡಿದೆ. ಆದರೂ ಮುಂದಿನ ದಿನಗಳಲ್ಲಿ ರೆಮಿಡಿಸೈವರ್ ಇಂಜೆಕ್ಷನ್ ಬೇಡಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಷರು ಹೇಳುತ್ತಿದ್ದಾರೆ.
ಜನಪರ ವೈಧ್ಯರಾದ ಡಾ. ಅನಿಲ್ ಪ್ರತಿಕ್ರಿಯಿಸುತ್ತಾ, ಸರಕಾರ ಕೊರೊನಾ ನಿಯಂತ್ರಣ ಮಾಡಲು ಸರಿಯಾದ ಸಿದ್ಧತೆ ನಡೆಸಿಲ್ಲ. ಕೇವಲ ವ್ಯಾಕ್ಸಿನ್ ನ ಅಬ್ಬರದ ಪ್ರಚಾರದಲ್ಲಿ ಮುಳುಗಿದ್ದೆ ಇವತ್ತಿನ ಪರಿಸ್ಥಿತಿಗೆ ಕಾರಣವಾಗಿದೆ. ಈಗಲೂ ಸರಕಾರದ ಬಳಿ ಕೋವಿಡ್ ವಿರುದ್ಧ ಹೋರಾಡಬಹುದಾದ ಯಾವ ಔಷಧಿಯು ಇಲ್ಲ, ಆಸ್ಪತ್ರೆಗಳಲ್ಲಿ ದೊಡ್ಡ ಪ್ರಮಾಣದ ಹಾಸಿಗೆ ಕೊರತೆ ಉಂಟಾಗಿದೆ. ಸಾರ್ವಜನಿಕ ಆರೋಗ್ಯವನ್ನು ಬಲಪಡಿಸದ ನಾವಿಂದು ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ ಎಂದು ಸರಕಾರದ ತಯಾರಿಯ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ, ಆಮ್ಲಜನಕ, ವೆಂಟಿಲೇಟರಗಳ ಅಭಾವವು ಎದುರಾಗಿದೆ. ರಾಜ್ಯ ಸಕಾ೯ರ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಕಾಣುತ್ತಿದೆ. ಆದ ಕಾರಣ ರಾಜ್ಯ ಸಕಾ೯ರ ಮತ್ತು ಬಿಬಿಎಂಪಿ ಕೂಡಲೆ ಎಚ್ಚೆತ್ತುಕೊಂಡು ವೈಧ್ಯಕೀಯ ತುತು೯ ಪರಿಸ್ಥಿತಿ ಘೋಷಿಸಿ ಖಾಸಗಿ ಆಸ್ಪತ್ರೆಗಳ ಬೆಡ್ ಗಳನ್ನು ವಶಪಡಿಸಿಕೊಂಡು ನಿವ೯ಹಿಸಲು ಮುಂದಾಗಬೇಕಿದೆ. ಬೆಂಗಳೂರಿನ ಮೂಲದಿಂದ ಸಾವಿರಾರು ಕೋಟಿ ರೂಗಳ ನಿಧಿ ಪಿಎಂ ಕೇರ್ಸ ನಿಧಿಗೆ ಹೋಗಿದೆ. ಆದರೂ ಬೆಂಗಳೂರಿನ ಜನತೆ ಚುಚ್ಚುಮದ್ದು,ಲಸಿಕೆ, ಆಮ್ಲಜನಕ, ಐಸಿಯು, ವೆಂಟಿಲೇಟರ್ ಕೊರತೆಯಿಂದಾಗಿ ಸಾವಿನ ದವಡೆಗೆ ದೂಡಲ್ಪಟ್ಟಿದ್ದಾರೆ. ಆದರೆ ಜನರ ಸಂಕಷ್ಟ, ನೋವುಗಳು ಕೇಂದ್ರ, ರಾಜ್ಯ ಸರಕಾರಗಳಿಗೆ ಕಾಣೋದು ಯಾವಾಗ? ಈ ಕೊರೊನಾ ದಿಂದ ನಾವು ಮುಕ್ತರಾಗೋದು ಯಾವಾಗ ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡುತ್ತಿದೆ.