ಮುಷ್ಕರ ನಿಷೇಧಕ್ಕೆ ಬಗ್ಗದ ಸಾರಿಗೆ ನೌಕರರು : ನಾಲ್ಕನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ

ಬೆಂಗಳೂರು: 6ನೇ ವೇತನ ಆಯೋಗ ಜಾರಿಗಾಗಿ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಹುತೇಕ ಪ್ರದೇಶಗಳಲ್ಲಿ ಇಂದು ಕೂಡಾ ಸಾರ್ವಜನಿಕ‌ ಸಾರಿಗೆ ಸ್ತಬ್ದವಾಗಿತ್ತು.

6ನೇ ವೇತನ ಜಾರಿಯಾಗುವರೆಗೂ ಮುಷ್ಕರ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದಿರುವ ಸಾರಿಗೆ ನೌಕರರಿಗೆ ಸರ್ಕಾರ ಶಾಕ್‌ ನೀಡಿದ್ದು, ಮುಷ್ಕರ ಹತ್ತಿಕ್ಕಲು ಕಾನೂನು ಅಸ್ತ್ರ ಪ್ರಯೋಗಿಸಿದೆ.

ಹೌದು, ಕಾನೂನಿನ ಮೂಲಕ ಸಾರಿಗೆ ನೌಕರರ ಮುಷ್ಕರವನ್ನ ಹತ್ತಿಕ್ಕಲು ಸರ್ಕಾರ ಮುಂದಾಗಿದ್ದು, ಸಾರ್ವಜನಿಕ ಉಪಯುಕ್ತ ಸೇವೆ ಎಂದು ಪರಿಗಣಿಸಿ ಮುಷ್ಕರ ನಿಷೇಧಿಸಿ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಸಂಧಾನ ವಿಫಲವಾದ ಬಳಿಕ ಸರಕಾರ ಈ ಅಸ್ತ್ರಕ್ಕೆ ಮುಂದಾಗಿದೆ.

ಸಾರ್ವಜನಿಕ ಉಪಯುಕ್ತ ಸೇವೆ ಎಂದು ಪರಿಗಣಿಸಿ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಕೈಗಾರಿಕಾ ವಿವಾದ ಕಾಯ್ದೆ 21(1) (d) ಅನ್ವಯ ಮುಷ್ಕರಕ್ಕೆ ತಡೆ ನೀಡಿ, ಮುಷ್ಕರ ನಿಷೇಧಿಸಿ ನಾಲ್ಕು ನಿಗಮಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಕೈಗಾರಿಕಾ ವಿವಾದ ಕಾಯ್ದೆ 21(1) (d) ಅನ್ವಯ ಸಂಧಾನ‌ ಪ್ರಕ್ರಿಯೆ ಬಾಕಿ ಇರುವಾಗ ಯಾವುದೇ ಮುಷ್ಕರ ನಡೆಸುವಂತಿಲ್ಲ ಎಂದು ಸರ್ಕಾರ ಹೇಳಿದೆ.

ಬಿಎಂಟಿಸಿ ಕೆಎಸ್‌ಆರ್​ಟಿಸಿ ವಾಯುವ್ಯ ಈಶಾನ್ಯ ನಾಲ್ಕೂ ನಿಗಮಗಳ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು ಈ‌ ತಕ್ಷಣಕ್ಕೆ ಜಾರಿಗೆ ಬರುವಂತೆ ಮುಷ್ಕರ ನಿಷೇಧಿಸಿ, ವಿವಾದವನ್ನ ನ್ಯಾಯ ನಿರ್ಣಯಕ್ಕಾಗಿ ಸರ್ಕಾರ ಕಳುಹಿಸಿದೆ.

Donate Janashakthi Media

Leave a Reply

Your email address will not be published. Required fields are marked *