ಚೆನ್ನೈ: ತಮಿಳು ಚಿತ್ರ ನಟ ಶರತ್ ಕುಮಾರ್ ಹಾಗೂ ಅವರ ಪತ್ನಿ ನಟಿ ರಾಧಿಕಾ ಅವರು ಪಡೆದ ಸಾಲವನ್ನು ಪಾವತಿಗೆ ಇರುವುದರ ಬಗ್ಗೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ವಿಶೇಷ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ಮತ್ತು ರೂ. 5 ಕೋಟಿ ದಂಡ ವಿಧಿಸಿದೆ.
2015ರಲ್ಲಿ ರೇಡಿಯನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನಿಂದ ಈ ದಂಪತಿಗಳು ಸಾಲ ಪಡೆದಿದ್ದರು. ಅದೇ ಹಣದಿಂದ ‘ಇದು ಎನ್ನ ಮಾಯಂ’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ತಮ್ಮದೇ ನಿರ್ಮಾಣ ಸಂಸ್ಥೆಯ (ಮ್ಯಾಜಿಕ್ ಫ್ರೇಮ್ಸ್ ) ಮೂಲಕ ನಿರ್ಮಾಣ ಮಾಡಿದ್ದ ಸಿನಿಮಾಕ್ಕೆ ಶರತ್ ಅವರು ರೇಡಿಯನ್ಸ್ ಸಂಸ್ಥೆಯಿಂದ ₹ 50 ಲಕ್ಷ ಕೈ ಸಾಲ ಪಡೆದಿದ್ದರು.
ಇದನ್ನು ಓದಿ : ಪಂಜರದ ಬಂಧಿಯಾಗಿ ʻಮುಖ್ಯಮಂತ್ರಿʼ
ಸಾಲ ತೀರಿಸುವುದಕ್ಕೆ ಸಂಬಂಧಪಟ್ಟಂತೆ ಶರತ್ ಕುಮಾರ್ ಹಾಗೂ ರಾಧಿಕ ಅವರು ನೀಡಿದ ರೂ. 10 ಲಕ್ಷದ ಐದು ಚೆಕ್ ನೀಡಿದ್ದರು. 2018ರ ಸಂದರ್ಭದಲ್ಲಿ ಆ ಚೆಕ್ಗಳು ಬೌನ್ಸ್ ಆಗಿದ್ದು, ಇದರ ವಿರುದ್ಧ ರೇಡಿಯನ್ಸ್ ಕಂಪನಿ ಕೋರ್ಟ್ ಮೆಟ್ಟಿಲೇರಿತ್ತು. ಶರತ್ ವಿರುದ್ಧ ಏಳು ಮತ್ತು ರಾಧಿಕಾ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿತ್ತು.
ನಟ ಹಾಗೂ ರಾಜಕಾರಣಿಯೂ ಆಗಿರುವ ಶರತ್ ಕುಮಾರ್, ರಾಧಿಕಾ ದಂಪತಿಗಳು ಮತ್ತು ಲಿಸ್ಟಿನ್ ಸ್ಟೀಫನ್ ಅವರು ಮ್ಯಾಜಿಕ್ ಫ್ರೇಮ್ಸ್ನ ಪಾಲುದಾರರಾಗಿದ್ದಾರೆ.
ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಿಕೊಳ್ಳುತ್ತೇವೆ. ಅಲ್ಲಿಯವರೆಗೆ ಶಿಕ್ಷೆಯನ್ನು ತಡೆಹಿಡಿಯಬೇಕು ಎಂದು ಶರತ್ ಅವರು ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ವಜಾ ಮಾಡಿತು.
ಇದನ್ನು ಓದಿ : ಪರಮ್ ಬೀರ್ ಸಿಂಗ್ ವಿಚಾರಣೆ ನಡೆಸಿದ ಎನ್ಐಎ
ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಅಲಿಸಿಯಾ ಅವರು ಈ ದಂಪತಿಗಳಿಗೆ ಶಿಕ್ಷೆ ಪ್ರಕಟಿಸಿದರು.
ಈ ಪ್ರಕರಣವು ಸೈದಾಪೇಟ್ನ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿತ್ತು. ಈ ವೇಳೆ ತಾರಾದಂಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಪ್ರಕರಣವು ಶಾಸಕ ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲ್ಪಟ್ಟಿತ್ತು. ಇಂದು ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.