ಬಿಜೆಪಿಯಿಂದಾಗಿ ಬರೀ ಚುನಾವಣೆಗಳೇ ಆಗಿವೆ : ಪ್ರಿಯಾಂಕ ಖರ್ಗೆ

ಬಸವಕಲ್ಯಾಣ : ಬಿಜೆಪಿ ಪಕ್ಷ ರಾಜ್ಯದಲ್ಲಿ ಮಾಡುತ್ತಿರುವುದು ಅತ್ಯಂತ ಕೆಟ್ಟ ಸರಕಾರ. ಬಿಜೆಪಿಯಿಂದಾಗಿ ರಾಜ್ಯದಲ್ಲಿ ಚುನಾವಣೆ ಮೇಲೆ ಚುನಾವಣೆಗಳು ಎದುರಾಗುತ್ತಿವೆ. ಹಿಂದಿನ 17 ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಈಗಿನ ಉಪಚುನಾವಣೆಗೂ ವ್ಯತ್ಯಾಸವಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ ಅವರು ಜನರ ಮತಗಳನ್ನು ಮಾರಾಟ ಮಾಡಿದ್ದರಿಂದ ಚುನಾವಣೆ ನಡೆಯಿತು. ಆದ್ರೆ ಈ ಚುನಾವಣೆ ಹೋರಾಟದ ಚುನಾವಣೆಯಾಗಿರುವುದರಿಂದ ಜನತೆ ಕಾಂಗ್ರೆಸ್‌ ಗೆ ಮತ ನೀಡಲು ವಿನಂತಿಸಿದರು.

ಬಸವಕಲ್ಯಾಣ ವಿಧಾನಸಭಾಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಮಾಲಾ ನಾರಾಯಣರಾವ್‌ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಮಾಜಿ ಸಚಿವ ಮತ್ತು ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ : ಉಪಚುನಾವಣೆ – ಲೆಕ್ಕಾಚಾರ ಹೇಗಿದೆ? ‘ಸಿಡಿ’ಯುತ್ತಾ ಅಸ್ತ್ರ, ಜಾತಿ, ಹಣದ್ದೆ ಕಾರ್ಬಾರು

ಮೂಡಬಿ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ಅವರು ನನ್ನ ಪತಿ ನಾರಾಯಣರಾವ್ ಅವರಿಗೆ ಜನರ ಆಶೀರ್ವಾದ ಸದಾ ಇತ್ತು. ಅದೇ ರೀತಿ ನನಗೂ  ಆಶೀರ್ವಾದ ಮಾಡಿ. ಸಿದ್ದರಾಮಯ್ಯ ಅವರು ನನ್ನ ತಂದೆಯ ಸ್ವರೂಪಿಗಳು. ಇಬ್ಬರು ಮಕ್ಕಳಉ ನನ್ನ ಜೊತೆಯಲ್ಲಿದ್ದಾರೆ. ಜನತೆ ನಿಮ್ಮ ಮಗಳಕೆಂದು ಮತ ನೀಡಿ ಎಂದು ವಿನಂತಿಸಿದರು.

ಪ್ರಿಯಾಂಕ ಖರ್ಗೆ ಮಾತನಾಡಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಒಳ್ಳೆಯ ಜನಪರ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಆದರೆ, ಬಿಜೆಪಿಯದ್ದು ಲಂಚ ಮತ್ತು ಮಂಚದ ವ್ಯವಹಾರವಾಗಿದೆ ಎಂದು ರಮೇಶ್‌ ಜಾರಕಿಹೊಳಿ ವಿಚಾರವನ್ನು ಪ್ರಸ್ತಾಪಿಸಿದರು.

ಬಿಜೆಪಿ ಶರಣು ಸಲಗರ ಅಲ್ಲ ಅವರು ಸೂಟ್‌ಕೇಸ್‌ ಸಲಗರ ಎಂದ ಪ್ರಿಯಾಂಕ ಖರ್ಗೆ ಬಿಜೆಪಿ ಅಭ್ಯರ್ಥಿ ಮಾರಾಟವಾಗಿದ್ದಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಕೋಟಿಗಟ್ಟಲೆ ಹಣ ನೀಡಲಾಗಿದೆ. ಸಲಗರ ತಾವು ಅಭ್ಯರ್ಥಿಯಾಗಲು ಹತ್ತು ಕೋಟಿ ರೂ ಹಣ ನೀಡಿದ್ದಾರೆ ಎಂದು ಸ್ವತಃ ಬಿಜೆಪಿಯವರೇ ಹೇಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *