ಬಿರುಬಿಸಿಲನ್ನು ಎದುರಿಸಲು ರೈತ ಆಂದೋಲನ ಸಜ್ಜಾಗುತ್ತಿದೆ

ಚಂಡೀಗಢ : ರೈತರ ಆಂದೋಲನ ಕಳೆದ ನಾಲ್ಕು ತಿಂಗಳುಗಳಿಂದ ಮುಂದುವರೆದಿದೆ. ಈಗ ಹರಿಯಾಣ ಭಾಗದಲ್ಲಿ ಗೋಧಿ ಕೊಯ್ಲು ಮಾಡುವ ಈ ಸಮಯದಲ್ಲೂ ಆಂದೋಲನ ಮುಂದುವರಿಯಲಿದೆ ಎಂದು ಆಂದೋಲನ ದೃಢಪಡಿಸಿದೆ.

ಆದರೂ ಸಹ ರೈತರು ಕೃಷಿ ಕಾಯ್ದೆಗಳಿಗಾಗಿ ರದ್ದತಿಗಾಗಿ ಹಮ್ಮಿಕೊಂಡಿರುವ ರೈತ ಆಂದೋಲನವನ್ನು ಮುಂದುವರೆಸುವ ಬಗ್ಗೆ ಮತ್ತು ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಪೂರ್ವಯೋಜಿತ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬಿರುಬಿಸಿಲಿನ ಈ ಸಮಯದಲ್ಲಿ ಪ್ರತಿಭಟನೆಯ ಕಾವು ಕಡಿಮೆಯಾಗದಂತೆ ಹೋರಾಟದ ಸ್ಥಳದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಸುಗ್ಗಿಯ ಅವಧಿಯಲ್ಲಿ ಗೋಧಿ ಕೊಯ್ಲು ಮಾಡಿಕೊಂಡು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ದೆಹಲಿ ಗಡಿಗಳಲ್ಲಿ, ಟೋಲ್‌ ಪ್ಲಾಜಾಗಳಲ್ಲಿ ಬೀಡು ಬಿಟ್ಟಿರುವ ಹೋರಾಟದ ಬಿಡಾರಗಳಲ್ಲಿ ರೈತರ ಉಪಸ್ಥಿತಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿದ್ದಾರೆ. ದೆಹಲಿ ಗಡಿಯಲ್ಲಿ ಹರಿಯಾಣ ಮತ್ತು ಪಂಚಾಬ್‌ ರಾಜ್ಯಗಳ ಸುಮಾರು 40 ಸಾವಿರ ರೈತರು ಸುಮಾರು ನಿರಂತರವಾಗಿ ಈ ರೈತ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.

ಇದನ್ನು ಓದಿ : ನಿಷ್ಕ್ರಿಯತೆ ಉನ್ಮಾದದ ನಡುವೆ ಪ್ರಜಾಸತ್ತೆಯ ರಕ್ಷಣೆಗಾಗಿ,,,

ಮಾರ್ಚ್‌ 26 ರಂದು ರೈತರು ಹಮ್ಮಿಕೊಂಡಿದ್ದ ಭಾರತ್‌ ಬಂದ್‌ ಸಂದರ್ಭದಲ್ಲಿ ಹರಿಯಾಣದಲ್ಲಿ ರೈತರು ಸಂಪೂರ್ಣವಾಗಿ ಯಶಸ್ವಿ ಮಾಡುವಲ್ಲಿ ಈ ರೈತ ಆಂದೋಲನ ಯಶಸ್ವಿಯಾಗಿದೆ.

ಭಾರತ್‌ ಕಿಸಾನ್‌ ಯೂನಿಯನ್‌ ಜಿಂದ್‌ ಪ್ರದೇಶದ ರೈತ ನಾಯಕ ಆಜಾದ್‌ ಸಿಂಗ್‌ ಪಾಲ್ವಾ ಅವರು ʻʻಹಗಲಿನ ವೇಳೆಯಲ್ಲಿ ಆಂದೋಲನವನ್ನು ಮುಂದುವರೆಸಲು ನಾವು ರಾತ್ರಿ ಸಮಯದಲ್ಲಿಯೂ ನಮ್ಮ ಬೆಳೆ ಕೊಯ್ಲು ಮಾಡಲು ಸಿದ್ದʼʼ ಎಂದು ಹೇಳಿದರು. ರೈತರು ಟೋಲ್‌ ಪ್ಲಾಜಾಗಳಲ್ಲಿ ಭಿಡಾರ ಬಿಡಲು ನಾವು ಕೇಳಿಕೊಂಡಿದ್ದೇವೆ ಎಂದು ಹೇಳಿದರು.

ಪ್ರತಿದಿನ 15 ಗ್ರಾಮಗಳ ರೈತರು ಜಿಂದ್‌ ಪ್ರದೇಶದ ಖಟ್ಕರ್‌ ಟೋಲ್‌ ಪ್ಲಾಜಾದ ಹೋರಾಟದ ಸ್ಥಳದಲ್ಲಿ ಉಳಿಯುವಂತೆ ತಿಳಿಸಲಾಗಿದೆ. ಪ್ರತಿ ದೊಡ್ಡ ಹಳ್ಳಿಯ 40 ರೈತರು ದೆಹಲಿ ಗಡಿಯಲ್ಲಿ ಉಳಿಯುವಂತೆ ನಾವು ರೈತರಿಗೆ ಹೇಳಲಾಗಿದೆ. ರೈತರ ಸರದಿ ಒಂದು ವಾರಕಾಲ ರೈತರ ಹೋರಾಟದ ಸ್ಥಳದಲ್ಲಿ ಉಳಿಯುವಂತೆ ಯೋಜಿಸಲಾಗಿದೆ.

ಇದನ್ನು ಓದಿ : ಕೃಷಿ ಮಹಿಳೆಯರ ಬದುಕಿನ ಪಲ್ಲಟಗಳು: ಜೀವದ ವಿರುದ್ಧ ಕೈಗಾರಿಕಾ ಕೃಷಿ ಸಾರಿದ ಸಮರ

ಯಮುನಾ ನಗರ ಪ್ರದೇಶದ ಬಿಕೆಯುನ ಮತ್ತೊಬ್ಬ ಮುಖಂಡರಾದ ಸುಭಾಷ್‌ ಗುರ್ಜಾರ್‌ ಅವರು ತಮ್ಮ ಪ್ರದೇಶದ ರೈತರು ದೆಹಲಿ ಗಡಿಯಲ್ಲಿ ಮೂರು ದಿನಗಳ ಕಾಲ ಉಳಿಯುವಂತೆ ಯೋಜಿಸಲಾಗಿದೆ. ಒಂದು ದೊಡ್ಡ ಸಮೂಹದ ರೈತರು ಪ್ರತಿಭಟನಾ ಸ್ಥಳಕ್ಕೆ ಬಂದ ನಂತರ ಮತ್ತೊಂದು ತಂಡದ ರೈತರು ಹಳ್ಳಿಗೆ ಮರಳುತ್ತಾರೆ ಎಂದು ಹೇಳಿದರು.

ರೈತರ ಬದ್ಧತೆಯ ಹಿಂದಿನ ಪ್ರೇರಕ ಶಕ್ತಿ ಯಾವುದು ಎಂಬ ಪ್ರಶ್ನೆಗೆ ಭೂಮಿಯನ್ನು ರಕ್ಷಿಸಲು ಹೆಣಗುತ್ತಿರುವ ಈ ರೈತ ಆಂದೋಲನ ಕೇಂದ್ರದ ಬಿಜೆಪಿ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಹಿಂಪಡೆಯಬೇಕು ಮತ್ತು ನಮ್ಮ ಜಮೀನುಗಳು ಎಲ್ಲಿಯೂ ಹೋಗುವುದಿಲ್ಲ ಎಂಬ ದೃಢನಿರ್ಧಾರಕ್ಕೆ ಬರುವವರೆಗೂ ತಮ್ಮ ಮನೆಗಳಿಗೆ ಮರಳಲು ಸಿದ್ಧರಿಲ್ಲ ಎಂದು ಹೇಳಿದರು.

ಈ ಕೃಷಿ ಕಾಯ್ದೆಗಳು ತಮ್ಮ ಜಮೀನುಗಳು ದೊಡ್ಡ ದೊಡ್ಡ ಕಾರ್ಪೊರೇಟ್‌ ಗಳು ತಮ್ಮ ಭೂಮಿಯನ್ನು ಕಸಿದೊಕೊಳ್ಳಲು ಅನುಕೂವಾಗುವಂತದ್ದು ಎಂಬ ಅಂಶ ಪ್ರಧಾನವಾಗಿದೆ ಇದು ರೈತರನ್ನು ಕೆರಳಿಸಿದೆ. ಬಿಜೆಪಿ ನಾಯಕರು ಇದು ರೈತರ ಕಲ್ಯಾಣಕ್ಕಾಗಿ ಮಾಡಿದ್ದು, ರೈತರು ವಿವಿಧ ನಿಬಂಧನೆಗಳಿಂದ ಮುಕ್ತರಾಗಿದ್ದಾರೆ, ಈ ಕಾಯ್ದೆಗಳಿಂದ ರೈತರು ಉದ್ಧಾರವಾಗಲಿದ್ದಾರೆ ಎಂಬ ಪ್ರಚಾರಕ್ಕೆ ರೈತರು ಅಷ್ಟೊಂದು ಸಲಿಸಾಗಿ ಮನಃಸೋತಿಲ್ಲ. ರೈತ ಮುಖಂಡರು ಈ ಆಂದೋಲನವನ್ನು ʻʻಮತ್ತೊಂದು ಸ್ವಾತಂತ್ರ್ಯ ಹೋರಾಟʼʼಕ್ಕೆ ಸಮನಾಗಿದೆ ಎಂದು ಹೇಳುತ್ತಿದ್ದಾರೆ.

ಮಾಜಿ ಐಎಎಸ್‌ ಅಧಿಕಾರಿ ಎಸ್.ಕೆ.ಗೋಯಲ್‌ ಅವರು ರೈತ ಆಂದೋಲನವನ್ನು ಸಕ್ರಿಯವಾಗಿ ಬೆಂಬಲಿಸಿದ್ದಾರೆ. ರೈತರ ಆತಂಕಗಳು ಆಧಾರರಹಿತವಲ್ಲ. ಮೂರು ಕೃಷಿ ಕಾನೂನುಗಳು ಜಾರಿಗೆ ತಂದ ನಂತರ ಕೃಷಿ ಕ್ಷೇತ್ರವು ಅಪಾಯದಲ್ಲಿದೆ. ಏಕೆಂದರೆ ದೊಡ್ಡ ಪ್ರಮಾಣದ ಕೃಷಿ ಭೂಮಿ ಕಾರ್ಪೋರೇಟ್‌ ಗಳಿಗೆ ಹಸ್ತಾಂತರವಾಗುವಂತಹ ಕಾನೂನು ಇದಾಗಿದೆ ಎಂದು ಹೇಳಿದರು.

ಈ ಕಾನೂನು ಬೆಳಗಳಿಗೆ ನಿಗದಿಪಡಿಸುವ ಎಂಎಸ್‌ಪಿಯ ಸುರಕ್ಷತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಿವೆ ಎಂದು ಗೋಯಲ್‌ ಹೇಳಿದರು.

ಇದನ್ನು ಓದಿ : ಕೇರಳದಿಂದ ರಾಜ್ಯಸಭಾ ಸದಸ್ಯರ ಚುನಾವಣೆ: ಚುನಾವಣಾ ಆಯೋಗದ ಹಿಂಜರಿಕೆ ಏಕೆ?

ರಾಜಕೀಯ ವಿಶ್ಲೇಷಕ ರಿಷಿ ಸೈನಿ ಅವರು ಇದುವರೆಗಿನ ಆಂದೋಲನಗಳನ್ನು ಗಮನಿಸಿದಾಗ ಶತಮಾನದ ಅತ್ಯಂತ ದೊಡ್ಡ ರೈತ ಆಂದೋಲನ ಇದಾಗಿದೆ. ಹರಿಯಾಣದಲ್ಲಿ ಇಂತಹ ದೊಡ್ಡ ರೈತ ಆಂದೋಲನ ಎಂದೂ ಕಂಡಿರಲಿಲ್ಲ. ಈ ಹಿಂದೆ ರೈತರ ಪ್ರತಿಭಟನೆಗಳು ಕೇವಲ ಒಂದು ಸ್ಥಳ ಅಥವಾ ಪ್ರದೇಶಕ್ಕೆ ಸೀಮಿತವಾಗಿದ್ದವು ಅಥವಾ ಒಂದು ನಿರ್ದಿಷ್ಠ ಅವಧಿಗೆ ಮಾತ್ರ ಸೀಮಿತವಾಗುತ್ತಿತ್ತು. ಆದರೆ ಸಮಾಜದ ಎಲ್ಲಾ ವರ್ಗಗಳಿಗೂ ಬಾಧಿಸುವ ಬೃಹತ್‌ ಸಮಸ್ಯೆಯ ಪರಿಹಾರಕ್ಕಾಗಿ ಹಮ್ಮಿಕೊಂಡಿರುವ ದೀರ್ಘವಾದ ಈ ಆಂದೋಲನ ಅತ್ಯಂತ ವಿಶಿಷ್ಠವಾಗಿದೆ ಎಂದು ಹೇಳಿದರು.

ಬಿಕೆಯು ನಾಯಕ ಸುಭಾಷ್ ಗುರ್ಜರ್ “ನಾವು ನಮ್ಮ ಭವಿಷ್ಯದ ಪೀಳಿಗೆಗೆ ನಮ್ಮ ಭೂಮಿಯನ್ನು ಉಳಿಸಲು ಹೋರಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ. ನಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ ಮತ್ತು ಸರ್ಕಾರವು ಈ ಕಾನೂನುಗಳನ್ನು ಆದಷ್ಟು ಬೇಗನೇ ರದ್ದುಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಆದೋಲನ ಇದೇ ರೀತಿ ಮುಂದುವರೆದರೆ, ರೈತ ಸಂಘಟನೆಗಳ ಸಂಘಟನಾ ಶಕ್ತಿ ಮತ್ತಷ್ಟು ವಿಸ್ತರಿಸಲಿದೆ. ಪ್ರಸಕ್ತ ಆಡಳಿತದಲ್ಲಿ ಎದುರಾಗುತ್ತಿರುವ ಸವಾಲುಗಳು ಭವಿಷ್ಯದಲ್ಲಿ ಮತ್ತಷ್ಟು ಗಂಭೀರಗೊಳ್ಳುವ ಸಾಧ್ಯತೆಯಿದೆ.

Donate Janashakthi Media

Leave a Reply

Your email address will not be published. Required fields are marked *