ಬೆಂಗಳೂರು: ಎಲ್ಲ ಶಾಸಕರು ʻಏಕಪತ್ನೀವ್ರತಸ್ಥರೇʼ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರ ಹೇಳಿಕೆ ತುಂಬಾ ಬಾಲಿಶತನದ್ದು, ಆರೋಗ್ಯ ಸಚಿವರ ಈ ಹೇಳಿಕೆ ಸ್ಟುಪ್ಪಿಡ್ ಸ್ಟೇಟ್ಮೆಂಟ್ (ಮೂರ್ಖತನದ ಹೇಳಿಕೆ) ಆಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದರು.
ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಬೇಕು ಎಂಬ ಸುಧಾಕರ್ ಹೇಳಿಕೆಗೆ ಇಂದಿನ ಅಧಿವೇಶನದ ಸಂದರ್ಭದಲ್ಲಿಯೂ ತೀವ್ರವಾದ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು. ಸದನದಲ್ಲಿ ಸಿದ್ಧರಾಮಯ್ಯ ರವರ ನೇತೃತ್ವದಲ್ಲಿ ಸಚಿವ ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿ ಧರಣಿ ನಡೆಸಿದರು.
ಸುಧಾಕರ್‌ದ್ದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಮಂತ್ರಿಯಾಗಿ ಅವರು ಈ ರೀತಿಯ ಹೇಳಿಕೆ ಸರಿಯಾದುದ್ದಲ್ಲ. ಸದನದ ಹೊರಗೆ ಈ ಹೇಳಿಕೆ ನೀಡಿದ್ದರೂ ಸಹ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಹೀಗೆ ಹೇಳಿರುವುದರಿಂದ ಸದಸ್ಯರ ಹಕ್ಕುಚ್ಯುತಿ ಆಗುತ್ತೆ ಎಂದು ಹೇಳಿದರು.
ಇದನ್ನು ಓದಿ : ಚರ್ಚೆ ಇಲ್ಲದೆ ಅಂಗೀಕಾರಗೊಂಡ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ಮಸೂದೆ 2021
ರಾಜ್ಯದಲ್ಲಿ ಆಯ್ಕೆಯಾದ 224 ಶಾಸಕರ ಬಗ್ಗೆ ಅಸಭ್ಯ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸದನದಲ್ಲಿ ಹೆಣ್ಣುಮಕ್ಕಳು ಇದ್ದಾರೆ. ಮಹಿಳಾ ಸಚಿವರೂ ಇದ್ದಾರೆ. ಅವರ ವಿರುದ್ಧ ಹೀಗೆ ಹೇಳಿದ್ದಾರೆ. ಇದು ಮೂರ್ಖತನದ ಹೇಳಿಕೆಯಾಗಿದೆ ಎಂದು ಖಂಡಿಸಿದರು.
ಎಲ್ಲರನ್ನೂ ಸೇರಿಸಿ ಹೀಗೆ ಹೇಳಿದ್ದಾರೆ. ಮಹಿಳೆಯರು ಏನು ಅಂತ ತಿಳಿಬೇಕು? ಹೆಂಗಸರಿಗೂ ಹಂಗೇ ಅಂತಾರಾ? ಸುಧಾಕರ್ ಇದನ್ನು ಗಿಲ್ಟಿ ಮೈಂಡ್ನಿಂದ ಹೇಳಿರೋದು. ಆ ಮಾತನ್ನು ಖಂಡಿಸುತ್ತೇನೆ ಎಂದರು ಸಿದ್ದರಾಮಯ್ಯ.
ಇದನ್ನು ಓದಿ : ಸದನದ ಒಳಗೆ ಸಿಡಿ ಪ್ರದರ್ಶಿಸಿದ ಕಾಂಗ್ರೆಸ್
ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ: ಬಹಳ ಸಂತೋಷವಾಗಿದೆ ಸುಧಾಕರ್ ಅವರಿಂದ ಈ ಮಾತು ಕೇಳಿ ಎಂತಹ ನುಡಿಮುತ್ತು ಕೊಟ್ಟಿದ್ದಾರೆ ರಾಜ್ಯಕ್ಕೆ. ನನಗೆ ಒಬ್ಬಳೇ ಹೆಂಡತಿ ಒಂದೇ ಸಂಸಾರ ಇರೋದು. ಇಂತಹ ಹೇಳಿಕೆ ಇಲ್ಲಿ ಮಾತಾಡೋದಲ್ಲ ಅಸೆಂಬ್ಲಿಯಲ್ಲಿ ಮಾತಾಡಬೇಕು. ಪಕ್ಷದ ನಾಯಕರ ಜೊತೆ ಮಾತನಾಡುತ್ತೇನೆ, ಚರ್ಚೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಸುಧಾಕರ್ ಸ್ಪಷ್ಟನೆ : ಇನ್ನೂ ಇದಕ್ಕೆ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದ, ತಮ್ಮ ಹೇಳಿಕೆ ಬೇರೆ ರೀತಿಯಲ್ಲಿ ವಿವಾದಕ್ಕೀಡಾಗಿದ್ದನ್ನು ಮನಗಂಡ ಸಚಿವ ಡಾ.ಕೆ.ಸುಧಾಕರ್ ತಮ್ಮ ಹೇಳಿಕೆಗೆ ಟ್ವೀಟರ್ ಮೂಲಕ ಸ್ಪಷ್ಟನೆ ನೀಡದ್ದಾರೆ. ‘ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನಾನು ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ’ ಎಂದು ಡಾ.ಕೆ.ಸುಧಾಕರ ಟ್ವೀಟ್ ಮಾಡಿದ್ದಾರೆ.