ಮೋದಿ ಸರ್ಕಾರದ ಆಕ್ರಮಣಕಾರಿ ನೀತಿಯಿಂದ ನಾವು ನೆರೆಹೊರೆಯ ರಾಷ್ಟ್ರಗಳ ಸ್ನೇಹವನ್ನು ಕಳೆದುಕೊಳ್ಳುತ್ತಿದ್ದೇವೆ

ಬೆಂಗಳೂರು : ಮೋದಿ ಸರ್ಕಾರ ತನ್ನ ಆಕ್ರಮಣಕಾರಿ ನೀತಿಯಿಂದ ನಾವು ನೆರೆಹೊರೆಯ ರಾಷ್ಟ್ರಗಳ ಸ್ನೇಹವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಸುಬ್ರಮಣಿಯನ್ ಸ್ವಾಮಿಯವರು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಅವರು, ‘ಕೇಂದ್ರ ಸರ್ಕಾರ ಸ್ನೇಹಿತರನ್ನು ಹೇಗೆ ಕಳೆದುಕೊಳ್ಳುವುದು ಮತ್ತು ಶತ್ರುಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ಎಂಬ ಒಂದು ಪುಸ್ತಕ ಬರೆದರೆ ಅದು ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಟವಾಗುವ ಪುಸ್ತಕವಾಗಬಹುದು ಎಂದು ಕಾಲೆಳದಿದ್ದಾರೆ.

 

ಡೆಲ್​ ಕಾರ್ನೆಗಿ ಅವರ ಹೇಗೆ ಸ್ನೇಹಿತರನ್ನು ಗೆಲ್ಲುವುದು ಮತ್ತು ಜನರ ಮೇಲೆ ಪರಿಣಾಮ ಬೀರುವುದು ಎಂಬ ಪುಸ್ತಕಕ್ಕೆ ವಿರುದ್ಧವಾಗಿ ಅವರು ಬರೆಯಬಹುದು ಎಂದಿದ್ದಾರೆ. ನಾವು ನೇಪಾಳ, ಭೂತಾನ್, ಶ್ರೀಲಂಕಾ ಕಳೆದುಕೊಂಡೆವು. ಚೀನಾ, ಪಾಕಿಸ್ತಾನದ ಜೊತೆ ದಿನನಿತ್ಯ ವಿವಾದ ನಡೆದಿದೆ’ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿದ್ದುಕೊಂಡು ಸಮಯ ಸಿಕ್ಕಾಗ ತಪ್ಪದೇ ಬಿಜೆಪಿ ಮುಖಂಡರ ಕಾಲೆಳೆಯುವುದರಲ್ಲಿ ಸಿದ್ದಹಸ್ತರಾಗಿರುವ ಸುಬ್ರಮಣಿಯನ್ ಸ್ವಾಮಿಯವರ ಹರಿತ ಚುಚ್ಚು ಮಾತುಗಳನ್ನು ಬಿಜೆಪಿಗರಿಗೆ ಅರಗಿಸಿಕೊಳ್ಳುವುದು ಕಷ್ಟವೇ.

ಇದೀಗ ಮತ್ತೆ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿರುವ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಸರ್ಕಾರ ತನ್ನ ಧೋರಣೆಗಳಿಂದ ವಿಶ್ವಮಟ್ಟದಲ್ಲಿ ಇತರ ದೇಶಗಳಿಂದ ದೂರವಾಗುತ್ತಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಮೋದಿ ಮತ್ತು & ಬಿಜೆಪಿಯ ಮೇಲೆ ಸ್ವಪಕ್ಷ ಮುಖಂಡರು ಆರೋಪ ಮಾಡುತ್ತಿರುವುದು ಹೆಚ್ಚಾಗುತ್ತಿರುವುದನ್ನು ಗಮನಿಸಬಹುದಾಗಿದೆ.

Donate Janashakthi Media

Leave a Reply

Your email address will not be published. Required fields are marked *