ಬೆಂಗಳೂರು: ಸಾಲುಮರದ ತಿಮ್ಮಕ್ಕನವರು ನಮ್ಮ ಊರಿನವರು. ಅಮೇರಿಕಾ ಸೇರಿದಂತೆ ದೇಶದೆಲ್ಲೆಡೆ ಅವರ ಪರಿಸರಪ್ರೇಮಿಗಳಿದ್ದಾರೆ. ಅವರ ಹೆಸರಿನಲ್ಲೊಂದು ಟ್ರೀ ಪಾರ್ಕ್ ಮಾಡಬೇಕೆಂದು ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದರು.
ಸಾಲುಮರದ ತಿಮ್ಮಕ್ಕ ನನ್ನ ಕ್ಷೇತ್ರದ ಬಳ್ಳೂರಿನವರು. ಅವರಿಂದಾಗಿ ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಹೆಸರು ಬಂದಿದೆ. ದೇಶ-ವಿದೇಶಗಳಿಂದ ಅವರನ್ನು ನೋಡಲು ಸಾವಿರಾರು ಜನ ಬರುತ್ತಿರುತ್ತಾರೆ. ಅವರಿಗೆ ಸಾವಿರಾರು ಪ್ರಶಸ್ತಿಗಳೂ ಬಂದಿವೆ. ಅವುಗಳೆಲ್ಲವನ್ನೂ ಇಡಲೂ ಸೂಕ್ತವಾದ ಜಾಗವಿಲ್ಲ. ಅದಕ್ಕಾಗಿ ಒಂದು ಮ್ಯೂಸಿಯಂ ಮಾಡಬೇಕು.
ಸರಕಾರವು ಇದರ ಕುರಿತು ಗಮನಹರಿಸಬೇಕು. ದೇವಿಪಾರ್ಕ್ ನಿರ್ಮಿಸಲು ರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಮತ್ತು ಹಳೆಬೀಡು ಪಕ್ಕ ಕಲ್ಲಳ್ಳಿಯಲ್ಲೂ ಜಾಗವಿದೆ. ಅವರೇ ಗೌರವಾಧ್ಯಕ್ಷರಾಗಿರುವ ಫೌಂಡೇಶನ್ ಸಹ ಇದೆ. ಅವರ ದತ್ತು ಪುತ್ರ ಉಮೇಶ್ ಅವನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಒಂದು ಮ್ಯೂಸಿಯಂ ಮಾಡಿಕೊಡಬೇಕು ಎಂದು ಹೇಳಿದರು.
ಶಾಸಕ ಲಿಂಗೇಶ್ ರವರ ಪ್ರಶ್ನೆಗೆ ಸಚಿವ ಜಗದೀಶ್ ಶೆಟ್ಟರ್ ಶಾಸಕರೇ ಹಲವು ಸ್ಥಳ ತಿಳಿಸಿದ್ದಾರೆ. ಅರಣ್ಯ ಸಚಿವರ ಜೊತೆ ಚರ್ಚೆಸುತ್ತೇವೆ. ಅಧಿಕಾರಿಗಳಿಗೂ ಸ್ಥಳ ಪರಿಶೀಲಿಸಲು ಸೂಚಿಸುತ್ತೇನೆ ಮತ್ತು ಟ್ರೀಪಾರ್ಕ್, ದೇವಿಪಾರ್ಕ್ ನಿರ್ಮಾಣಕ್ಕೆ ಪ್ರಯತ್ನಿಸುತ್ತೇವೆ ಎಂದು ಉತ್ತರಿಸಿದರು.