ಉನ್ನಾವೊದಲ್ಲಿ ಇಬ್ಬರು ದಲಿತ ಹುಡುಗಿಯರ ಸಾವು : ಯೋಗಿ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಿಲ್ಲ ರಕ್ಷಣೆ

ಉನ್ನಾವೊ ಫೆ 19 :  ಉತ್ತರ ಪ್ರದೇಶದಲ್ಲಿನ ಹೆಣ್ಣು ಮಕ್ಕಳಿಗೆ ಅಲ್ಲಿನ ಸರಕಾರ ರಕ್ಷಣೆ ಕೊಡುತ್ತಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಮೂರು ತಿಂಗಳ ಹಿಂದೆ  ಹತ್ರಾಸ್ ನಲ್ಲಿ  ನಡೆದಿದ್ದ ದಲಿತ ಮಹಿಳೆಯ ಮೇಲಿನ ಲೈಂಗಿಕ ದೈರ್ಜನ್ಯ & ಕೊಲೆ ಪ್ರಕರಣ ಮಾಸುವ ಮುನ್ನವೆ. ಅಂತಹದ್ದೆ ಘಟನೆ ಉನ್ನಾವೊ ಜಿಲ್ಲೆಯಲ್ಲಿ ನಡೆದಿದೆ. ಮೂವರೂ ಬಾಲಕೀಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇವು ತರಲು ಹೊರಟ ನಂತರ ಹಿಂದಿರುಗಲಿಲ್ಲ ಎಂದು  ಪೊಲೀಸ್ ಮೂಲಗಳು ತಿಳಿಸಿವೆ.

ಫೆಬ್ರವರಿ 17 ರ ಬುಧವಾರ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ 13 ಮತ್ತು 16 ವರ್ಷ ವಯಸ್ಸಿನ ಇಬ್ಬರು ದಲಿತ ಹುಡುಗಿಯರು ತಮ್ಮ ಕುಟುಂಬಸ್ಥರ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 17 ವರ್ಷದ ಮತ್ತೊಬ್ಬ ದಲಿತ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಕುಟುಂಬದ ದೂರಿನ ಮೇರೆಗೆ ಯುಪಿ ಪೊಲೀಸರು ಫೆಬ್ರವರಿ 18, ಗುರುವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಮತ್ತು ಸಾಕ್ಷ್ಯಗಳನ್ನು ಮರೆಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ದನಕರುಗಳಿಗೆ ಮೇವು ಸಂಗ್ರಹಿಸಲು ಮನೆಯಿಂದ ಹೊರಟುಹೋದ ನಂತರ ಹಿಂತಿರುಗದಿದ್ದಾಗ ಗ್ರಾಮಸ್ಥರು ಸಹಜವಾಗಿ ಊರಿನ ತುಂಬೆಲ್ಲ ಹುಡಿಕಿದ್ದಾರೆ.  ಸಂಜೆ ಹೊಲದಲ್ಲಿ ಹುಡುಗಿಯರ ಶವ ಇರುವುದನ್ನು  ಗುರುತಿಸಿ ಕುಟುಂಬಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ : ಯೋಗಿಯ ರಾಜ್ಯದಲ್ಲಿ ಭೋಗಿಗಳದೇ ಕಾರುಬಾರು..

ಪೂರ್ವ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಅಶೋಹಾ ಬ್ಲಾಕ್‌ನ ಹಳ್ಳಿಯೊಂದರಲ್ಲಿ ಹೊಲವೊಂದರಲ್ಲಿ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸುವ ಮೊದಲೆ ಸಾವನ್ನಪ್ಪಿದ್ದರು. ಇನ್ನೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಸುರೇಶರಾವ್ ಎ. ಕುಲಕರ್ಣಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಪ್ರಾಥಮಿಕ ಮಾಹಿತಿಯಂತೆ ಇದು ವಿಷದ ಪ್ರಕರಣದಂತೆ ಕಾಣುತ್ತದೆ, ಏಕೆಂದರೆ ಅವರ ಬಾಯಿಂದ ನೊರೆ ಹೊರಬರುತ್ತಿತ್ತು. ಮರಣೋತ್ತರ ವರದಿಯಿಂದ ಸಾವಿನ ಕಾರಣ ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಹತ್ರಾಸ್ ಪ್ರಕರಣ : ಸುಪ್ರೀಂ ಕೋರ್ಟಿನ ಮೇಲ್ ವಿಚಾರಣೆ ತನಿಖೆಗೆ ಆಗ್ರಹ

ಎಫ್‌ಐಆರ್ ಪ್ರಕಾರ, ಮೂವರು ಬಾಲಕಿಯರು ಬುಧವಾರ ಮಧ್ಯಾಹ್ನ ಸುಮಾರಿಗೆ ತಮ್ಮ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೊಲಕ್ಕೆ ಹೋಗಿದ್ದರು, ಆದರೆ ಸಂಜೆ ಆದರೂ ಮನೆಗೆ ಬಂದಿರಲಿಲ್ಲ. ಮೂವರು ಬಾಲಕಿಯರು ಹೊಲವೊಂದರಲ್ಲಿ ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಫ್‌ಐಆರ್ ಪ್ರಕಾರ, ಶಿರೋವಸ್ತ್ರಗಳನ್ನು ಅವರ ಕುತ್ತಿಗೆಗೆ ಕಟ್ಟಲಾಗಿತ್ತು ಮತ್ತು ಮೂವರು ಹುಡುಗಿಯರು ಬಾಯಿಂದ ನೊರೆ ಬರುತ್ತಿತ್ತು. ಅವರನ್ನು ಮೊದಲು ನರ್ಸಿಂಗ್ ಹೋಂಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ತಪಾಸಣೆ ಮಾಡಲು ನಿರಾಕರಿಸಿದರು. ನಂತರ ಅವರನ್ನು ಸಿಎಚ್‌ಸಿ ಅಶೋಹಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಗೆ ಬಂದ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದರೆ, ಮೂರನೇ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಮತ್ತು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಆಕೆಯನ್ನು ಉನ್ನಾವೊ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರೈಮಾ ಫೇಸಿ ಸಾಕ್ಷ್ಯವನ್ನು ಉಲ್ಲೇಖಿಸಿ, ಪೊಲೀಸರು ವಿಷದ ಪ್ರಕರಣವನ್ನು ಶಂಕಿಸಿದ್ದಾರೆ ಆದರೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *