ಚಂಡೀಗಡ ಫೆ 17: ಎಂಟು ಮಹಾನಗರ ಪಾಲಿಕೆಗಳು ಮತ್ತು 109 ಪುರಸಭೆಗಳು ಸೇರಿದಂತೆ ರಾಜ್ಯದ 117 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆದ ಮೂರು ದಿನಗಳ ನಂತರ ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು (ಬುಧವಾರ) ಪ್ರಕಟವಾಗಿದೆ.
ಪಂಜಾಬ್‌ನ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬಿದಿದು, ಆಡಳಿತಾರೂಢ ಕಾಂಗ್ರೆಸ್ ಹೊಸ ದಾಖಲೆ ಬರೆದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಂಜಾಬ್ ನ ಎಂಟು ಮಹಾನಗರ ಪಾಲಿಕೆಯಲ್ಲಿ ಏಳು ಮಹಾನಗರ ಪಾಲಿಕೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿದೆ. ಅಬೋಹರ್, ಬತಿಂಡಾ, ಕಪುರ್ಥಾಲಾ, ಹೋಶಿಯಾರ್ಪುರ್, ಪಠಾಣ್‌ಕೋಟ್ ಬಟಾಲ ಮತ್ತು ಮೋಗಾ ದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಮೊಹಾಲಿ ಪಾಲಿಕೆಯ ಫಲಿತಾಂಶ ತಾಂತ್ರಿಕ ಕಾರಣದಿಂದಾಗಿ ನಾಳೆ (ಗುರುವಾರ) ಪ್ರಕಟವಾಗಲಿದೆ. ಈ ಫಲಿತಾಂಶ ಬಿಜೆಪಿ ಗೆ ತೀವೃ ಮುಖಬಂಗವಾಗಿದ್ದು ರೈತರ ಪ್ರತಿಭಟನೆಗೆ ಬಿಜೆಪಿ ಧೂಳಿಪಟವಾಗಿದೆ
ಒಟ್ಟು 9,222 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ರೈತರ ಪ್ರತಿಭಟನೆಯ ಮಧ್ಯೆ ಮತ್ತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಸರ್ಕಾರದ ಕೊನೆಯ ವರ್ಷದಲ್ಲಿ ಚುನಾವಣೆಯ ಫಲಿತಾಂಶಗಳು ಗಮನಾರ್ಹವಾಗಿವೆ. ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.