ಬೆಂಗಳೂರು,ಫೆ.13 : ಕೋವಿಡ್-19 ಹಿನ್ನಲೆಯಲ್ಲಿ ಅಂಗನವಾಡಿಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೂಲಕ ನಿರ್ದಿಷ್ಟ ಕಾರ್ಯವಿಧಾನಗಳನ್ನು ಜಾರಿಗೊಳಿಸಿದೆ.
ರಾಜ್ಯ ಸರ್ಕಾರ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಕೋವಿಡ್ -19 ತಡೆಗಟ್ಟುವ ಶಿಷ್ಟಾಚಾರಗಳು ಪಾಲಿಸುವ ಮೂಲಕ ಹಂತ ಹಂತವಾಗಿ ಅಂಗನವಾಡಿಗಳನ್ನು ತೆರೆಯಲು ಶಿಪಾರಸ್ಸು ಮಾಡಿ ಮಾರ್ಗಸೂಚಿಗಳನ್ನು ನೀಡಿದೆ.
ಸರ್ಕಾರವು ಜಾರಿಗೊಳಿಸಿರುವ ಈ ವಿಧಿ ವಿಧಾನಗಳಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಶಾಲೆಗಳೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ, ಶಾಲೆಗಳ ಆರಂಭಕ್ಕೆ ಬೇಕಾದ ಪೂರ್ಣ ಪ್ರಮಾಣದ ಸಿದ್ದತೆಗಳನ್ನು ಮಾಡಿಕೊಂಡಿಲ್ಲ. ಹೀಗಿರುವಾಗ ಮೂರು ವರ್ಷ ದಿಂದ ಆರು ವರ್ಷ ಮಕ್ಕಳನ್ನು ಹೇಗೆ ಅಂಗನವಾಡಿಗಳಿಗೆ ಕಳುಹಿಸುತ್ತಾರೆ ಎಂದು ಪೋಷಕರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ: ಬೆಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರಗಳ ಬಲವರ್ಧನೆಗಾಗಿ ಒತ್ತಾಯಿಸಿ ಬಿಬಿಎಂಪಿ ಚಲೋ
ಅಂಗನವಾಡಿ ಪುನರಾರಂಭಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದು ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಮೂಲಕ ಸೂಚನೆ ಹೊರಡಿಸಿದೆ. ಇದು ಅವೈಜ್ಞಾನಿವಾದ ಕ್ರಮ. ಅಂಗನವಾಡಿಗಳನ್ನು ಸಾನಿಟೈಸರ್ ಮಾಡುವುದು, ಮೂರು ವರ್ಷದಿಂದ 6 ವರ್ಷದ ಮಗವಿನ ಆರೋಗ್ಯದ ಸ್ಥಿತಿ ಮೇಲೆ ಅಂಗನವಾಡಿಗೆ ಕರೆತರುವುದು. ಮತ್ತು ಪಾಳಿ ವ್ಯವಸ್ಥೆಯಲ್ಲಿ ಮಕ್ಕಳನ್ನು ಅಂಗನವಾಡಿಯಲ್ಲಿ ಕೂರಿಸುವುದು ಸರಿಯಾದ ಕ್ರಮವೇ? ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್ ವರಲಕ್ಷ್ಮಿಯವರು ಪ್ರಶ್ನಿಸಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಣ್ಣ ಮಕ್ಕಳು ಅಷ್ಟು ಸಮಯ ಮಾಸ್ಕ ಧರಿಸಿಕೊಂಡೇ ಕುಳಿತುಕೊಳ್ಳಲು ಸಾಧ್ಯವೇ? ಈ ಎಲ್ಲಾ ಅಂಶಗಳು ಒಟ್ಟಾರೆಯಾಗಿ ಅವೈಜ್ಞಾನಿವಾಗಿದೆ. ಕೋವಿಡ್ -19 ರ ಭಯ ಭೀತಿಯನ್ನು ಹೋಗಲಾಡಿಸಲು ಸರ್ಕಾರಗಳು ಕಾರ್ಯಕ್ರಮಗಳನ್ನು, ಅಭಿಯಾನಗಳನ್ನು ಮಾಡಬೇಕು. ಆ ಮೂಲಕ ಅಂಗನವಾಡಿಗೆ ಬರುವ ಮಕ್ಕಳ ಜವ್ದಾರಿಯನ್ನು ಸರ್ಕಾರ ಹೊತ್ತುಕೊಳ್ಳಲು ಸಿದ್ದವಾಗಬೇಕು. ಮಕ್ಕಳಲ್ಲಿ ಭರವಸೇ ಮೂಡಿಸಿಬೇಕು. ಸರ್ಕಾರ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಂಡು ಅಂಗನವಾಡಿಗಳನ್ನು ಪುನರರಾರಂಭಿಸಬೇಕು. ಅವಸರದಲ್ಲಿ ಅಂಗನವಾಡಿಗಳನ್ನು ತೆರೆಯುವುದು ಬೇಡ, ಇದು ಮಕ್ಕಳ ಭವಿಷ್ಯ ಮತ್ತು ಜೀವದ ಸಂಗತಿ. ಹಾಗಾಗಿ ಸರ್ಕಾರ ಇನ್ನು ಕಾಲವಕಾಶವನ್ನು ತೆಗೆದುಕೊಂಡು ಅಂಗನವಾಡಿಗಳನ್ನು ಆರಂಭಿಸಬೇಕು ಎಂದು ಎಸ್. ವರಲಕ್ಷ್ಮಿ ಆಗ್ರಹಿಸಿದ್ದಾರೆ.