ಸ್ಥಗಿತಗೊಂಡಿದ್ದ ವಿಸ್ಟ್ರಾನ್ ಚಟುವಟಿಕೆ ಶೀಘ್ರದಲ್ಲಿ ಪುನರಾರಂಭ

ಕೋಲಾರ ಫೆ 11 : ಅತಿಶೀಘ್ರದಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಲು ವಿಸ್ಟ್ರಾನ್ ಸಂಸ್ಥೆ ತೀರ್ಮಾನಿಸಿದೆ.

ಕೋಲಾರದ ನರಸಾಪುರ ಬಳಿ ಇರುವ ಐಫೋನ್ ತಯಾರಿಕಾ ಘಟಕ ಡಿಸೆಂಬರ್ ೨೦೨೦ರ ಪ್ರತಿಭಟನೆ ಹಾಗೂ ಕೆಲ ಅಹಿತಕರ ಘಟನೆಗಳಿಂದಾಗಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಡಿಸೆಂಬರ್ ೧೨ರಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ ಕೆಲ ಕಾರ್ಮಿಕರು ಸರಿಯಾಗಿ ವೇತನ ನೀಡುತ್ತಿಲ್ಲ ಮತ್ತು ವೇತನ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು ಅವರು ವೇತನ ನೀಡುವುದಾಗಲಿ ಅಥವಾ ತಾರತಮ್ಯವನ್ನು ಸರಿಪಡಿಸುವುದಾಗಲಿ ಮಾಡಿರಲಿಲ್ಲ. ಇದರಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು.

ಈಗ ಆ ಘಟನೆಯಿಂದ ಎಚ್ಚೆತ್ತುಕೊಂಡಿರುವ ವಿಸ್ಟ್ರಾನ್ ‘ಕಾರ್ಮಿಕರನ್ನು ಗೌರವದಿಂದ ನೋಡಿಕೊಳ್ಳಲು ನಿರ್ಧರಿಸಿದೆ. ಅವರಿಗೆ ಯಾವದೇ ಸಮಸ್ಯೆ ಬಾರದಂತೆ ಹಾಗೂ ಸಮಸ್ಯೆಗೆ ಸರಿಯಾಗಿ ಸ್ಪಂದಿಸುವ ಯೋಜನೆಯನ್ನು ಹಾಕಿ ಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಲೋಪಗಳನ್ನು ಸರಿಪಡಿಸಿಕೊಳ್ಳುವ ಸಮಗ್ರ ಕೆಲಸಗಳು ಆಗಿವೆ. ವಿಸ್ಟ್ರಾನ್ ಕಂಪನಿಯು ತನ್ನ ನೇಮಕಾತಿ ತಂಡವನ್ನು ಪುನರ್‌ರಚಿಸಿದೆ. ಕಾರ್ಮಿಕರಿಗೆ ತರಬೇತಿ ಹಾಗೂ ನೆರವು ನೀಡುವುದನ್ನು ಹೆಚ್ಚಿಸಿದೆ’. ತಯಾರಿಕಾ ಘಟಕದಲ್ಲಿ ಎಲ್ಲರೂ ಹೊಸ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ತಮ್ಮ ಹಕ್ಕುಗಳನ್ನು, ಸಮಸ್ಯೆಗಳನ್ನು ಹೇಗೆ ಹೇಳಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲಿದ್ದಾರೆ. ಆ್ಯಪಲ್‌ನ ನೌಕರರು ಹಾಗೂ ಸ್ವತಂತ್ರ ಪರಿಶೋಧಕರು ಘಟಕದಲ್ಲಿ ಹಾಜರಿದ್ದು, ಹೊಸ ವ್ಯವಸ್ಥೆ ಪರಿಣಾಮಕಾರಿಯಾಗಿ ಇದೆಯೇ ಎಂಬುದನ್ನು ನೋಡಲಿದ್ದಾರೆ ಎಂದು ವಿಸ್ಟ್ರಾನ್ ಸಂಸ್ಥೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *