ಖಾತೆಗಾಗಿ ಮತ್ತೋರ್ವ ಸಚಿವನ ಅಸಮಾಧಾನ; ಖಾತೆಗಾಗಿ “ಕ್ಯಾತೆ” ಮುಗಿಯದ ಕಥೆ

ಚಾಮರಾಜನಗರ ಫೆ 08: ಸಚಿವ ಸಂಪುಟ ವಿಸ್ತರಣೆಯಾಗಿ ಎರಡ್ಮೂರು ಬಾರಿ ಖಾತೆ ಬದಲಾವಣೆ ಆದ್ರೂ ಇನ್ನೂ ಖಾತೆ ಕ್ಯಾತಿ ಇನ್ನೂ ನಿಂತಿಂತೆ ಕಾಣುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವು ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗಗೊಂಡಿದೆ. ಅರಣ್ಯ ಖಾತೆ ನೀಡಿರುವುದಕ್ಕೆ ಸಚಿವ ಅರವಿಂದ ಲಿಂಬಾವಳಿ ಪರೋಕ್ಷವಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರದಲ್ಲಿ ನಿನ್ನೆ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ನನಗೆ ಎರಡು ಖಾತೆ ಕೊಟ್ಟಿದ್ದಾರೆ. ರಾತ್ರಿ ಹೊತ್ತು ಕಾಡಿನಲ್ಲಿ ಇರಬೇಕು, ಹಗಲು ವೇಳೆ ನಾಡಿಗೆ ಬರಬೇಕು, ಕಾಡು ನಾಡು ಎರಡನ್ನೂ ನೋಡಿಕೊಳ್ಳುವ ಜವಬ್ದಾರಿಯನ್ನು ಹೊರಿಸಿದ್ದಾರೆ. ನಾನು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಇಲಾಖೆಯ ಸುರೇಶ್ ಕುಮಾರ್ ಅವರ ಜೊತೆಗೆ ಶಿಕ್ಷಣ ಸಚಿವನಾಗುತ್ತೇನೆ ಎಂದುಕೊಂಡಿದ್ದೆ. ಅವರ ಜೊತೆಗಾರನಾಗಿ ಕಳುಹಿಸುತ್ತಾರೆ ಎಂದುಕೊಂಡಿದ್ದೆ ಎನ್ನುವ ಮೂಲಕ ಉನ್ನತ ಶಿಕ್ಷಣ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಲಿಂಬಾಳಿ ಇದ್ದರು ಎಂಬುದು ಅವರ ಮಾತಿನಿಂದ ಹೊರ ಬಿದ್ದಿದೆ.

ನನಗೆ ನೀಡಿರುವ ಎರಡು ಹೊಸ ಖಾತೆಗಳನ್ನ ನಿಭಾಯಿಸಿಲು ದಿನದ 24 ಗಂಟೆ ಬೇಕು. ಕಾಡಿಗೆ ರಾತ್ರಿ ವೇಳೆ ಹೋದರೆ ಮಾತ್ರ ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತದೆ. ಪ್ರಾಣಿಗಳು ಓಡಾಡುವುದೆ ರಾತ್ರಿ ವೇಳೆ ಎಂದ ಅವರು, ನಾನು ಮೂಲತಃ ಸಿವಿಲ್ ಎಂಜಿನಿಯರ್, ಕಾಡಿನ ಎಂಜಿನಿಯರ್ ಅಲ್ಲ. ಸಾಮಾನ್ಯ ಜನರಿಗೆ ಕಾಡಿನ ಬಗ್ಗೆ ಇರುವಷ್ಟು ತಿಳುವಳಿಕೆಯು ನನಗೆ ಇಲ್ಲ, ಎಂದು ಅಸಮಧಾನ ವ್ಯಕ್ತಪಡಿಸಿದರು. ಸ್ವತಃ ಅವರೆವಕಾಡಿನ ಬಗ್ಗೆ ಜ್ಞಾನ ಇಲ್ಲ ಎಂದು ಒಪ್ಪಿಕೊಂಡಿರುವ ಕಾರಣ ಅರಣ್ಯಾಭಿವೃದ್ಧಿ ಇವರಿಂದ ಸಾಧ್ಯವಾ? ಎಂಬ ಪ್ರಶ್ನೆ ಉದ್ಭವವಾಗಿದೆ.

ಖಾತೆಗಾಗಿ ಕ್ಯಾತೆ ಮುಗಿದ ಅಧ್ಯಾಯವಾಗಿದ್ದು ಎಂದು ಕಳೆದ ವಾರವಷ್ಟೆ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದರು. ಆದರೂ ಸಚಿವರಾದ ಸುಧಾಕರ್, ಜಿ.ಸಿ.ಮಾಧುಸ್ವಾಮಿ ಸಿಎಂ ವಿರುದ್ಧ ಮುನಿಸ್ಸು ಮುಂದುವರೆದಿತ್ತು. ಈಗ ಸಿಎಂ ಆಪ್ತರಲ್ಲಿ ಒಬ್ಬರಾದ ಅರವಿಂದ್ ಲಿಂಬಾವಳಿ ಕೂಡಾ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲ ಗಮನಿಸುತ್ತಿದ್ದರೆ ಖಾತೆ ವಿಚಾರದಲ್ಲಿ “ಕ್ಯಾತೆ” ಬೂದಿ ಮುಚ್ಚಿದ ಕೆಂಡದಂತಿದ್ದೂ ಯಾವಾಗ ಬೇಕಾದರೂ ಸ್ಪೋಟಗೊಳ್ಳುವ ಸಾಧ್ಯತ ಇದೆ.

Donate Janashakthi Media

Leave a Reply

Your email address will not be published. Required fields are marked *