ರೈತರ ಹೋರಾಟಕ್ಕೆ “ಯಂಗವರ್ಕರ್ಸ್” ನಿಂದ ಸೌಹಾರ್ಧ ಚಿತ್ರಕಲೆ

ಬೆಂಗಳೂರು ಜ 25 :  ದೇಶಾದ್ಯಂತ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟ ಹಲವು ರೂಪಗಳನ್ನು ಪಡೆದುಕೊಂಡಿದೆ. ದೇಶದ ಮೂಲೆ ಮೂಲೆಗಳಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಯುವಜನರು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ.

ದೇಶದ ಹಲವು ಭಾಗಗಳಲ್ಲಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ರೈತರ ಹೋರಾಟಕ್ಕೆ  ಸೌಹಾರ್ಧ ಬೆಂಬಲ ಸೂಚಿಸುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್ ನಲ್ಲಿ ” ಯಂಗ್ ವರ್ಕರ್ಸ್ ಕಲೆಕ್ಟೀವ್ ನ ಸದಸ್ಯರು  ಸೌಹಾರ್ಧ ಚಿತ್ರಕಲೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ರೈತರ ಹೋರಾಟಕ್ಕೆ ತಮ್ಮದೆ ವಿಭನ್ನ ರೀತಿಯಲ್ಲಿ  ಬೆಂಬಲವನ್ನು ಸೂಚಿಸಿದ್ದಾರೆ.

ಬೆಂಗಳೂರಿನ ನಾಗರಿಕರಿಗೆ ಚಿತ್ರಕಲೆ ಬಿಡಿಸುವ ಮೂಲಕ ರೈತ ಹೋರಾಟದ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ ಎಂದು ಸಂಘಟನೆಯ ಮುಖಂಡರಾದ ಸೂರಜ್ ನಿದಿಯಂಗಾ, ಶಮಿ,  ಚಿತ್ರಾ,  ಅನೂಬ್, ಸೇರಿದಂತೆ ಅನೇಕರಿದ್ದರು.  ಅನೇಕ ಐಟಿ ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

                                                 ಚಿತ್ರಕಲೆ ವೇಳೆ ಕಂಡು ಬಂದ ಆಕರ್ಷಕ ಚಿತ್ರಗಳು

Donate Janashakthi Media

Leave a Reply

Your email address will not be published. Required fields are marked *