ಬೆಳಗಾವಿಯ ‘ಜನಸೇವಕ’ ಸಮಾವೇಶ ರದ್ದುಗೋಳಿಸಲು ಸಾರ್ವಜನಿಕರ ಮನವಿ

ಬೆಳಗಾವಿ;ಜ,15 : ಬೆಳಗಾವಿಯಲ್ಲಿ ಜನವರಿ 17 ರಂದು ನಡೆಯುತ್ತಿರುವ ಬಿಜೆಪಿಯ ‘ಜನಸೇವಕ’ ಸಮಾವೇಶಕ್ಕೆ ತೀವ್ರ ವಿರೋಧ ವ್ಯಕ್ತತವಾಗುತ್ತಿದ್ದು, ಈ ಸಮಾವೇಶ ರದ್ದು ಮಾಡಬೇಕು ಎಂದು ಒತ್ತಾಯಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಪತ್ರ ಬರೆದಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿಯ ಈ ಸಮಾವೇಶಕ್ಕೆ ಅಮಿತ್ ಶಾ ಪಾಲ್ಗೊಳಲಿದ್ದು, 3 ಲಕ್ಷ ಜನಸೇರುತ್ತಾರೆಂದು ಬಿಜೆಪಿಯವರೇ ಹೇಳಿಕೆಯನ್ನು ನೀಡಿದ್ದಾರೆ. ಅದು ಈಗ ಬೆಳಗಾವಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಿಭಾಯುತ್ತಿರುವ ಬಿಜೆಪಿ ಸರ್ಕಾರವು, ಕೊವೀಡ್ ಕಾರಣವನ್ನು ಮುಂದೆ ಮಾಡಿ  ಹಲವು ಜಿಲ್ಲೆಗಳ ಪ್ರಮುಖ ಜಾತ್ರೆಗಳನ್ನು ನಡೆಸದಂತೆ ಆದೇಶ ಹೊರಡಿಸಿದೆ.

ಪ್ರಮುಖವಾಗಿ ಕೋವಿಡ್ ನಿಯಮಗಳನ್ನು ಪಾಲಿನೆಮಾಡಿಯೂ ಕೂಡ ಜನರ ಸಹಾಯದಿಂದ ಜಾತ್ರೆಗಳನ್ನು ನಡೆಸಬಹುದಿತ್ತು. ಆದರೆ ಜನರ ಹಿತದೃಷ್ಠಿಯಿಂದ ಸರ್ಕಾರದ ಆದೇಶಕ್ಕೆ ಬೆಲೆಕೊಟ್ಟು ಜಾತ್ರೆಗಳನ್ನು ರದ್ದುಮಾಡಿದ್ದಾರೆ.  ಇತರರು ಸರಕಾರದ ನಿಯಮ ಪಾಲನೇ ಮಾಡುತ್ತಿರುವಾಗ ಸರಕಾರವೂ ಕೋಡಾ ತಾನೇ ಜಾರಿ ಮಾಡಿದ ನಿಯಮಗಳನ್ನು ಜಾರಿ ಮಾಡುವುದು ಮೊದಲ ಆಧ್ಯತೆಯನ್ನಾಗಿ ತೆಗೆದುಕೊಳ್ಳಬೇಕು.ಇಂತಹ ಸಮಯದಲ್ಲಿ ಸುಮಾರು 3 ಲಕ್ಷ ಜನ ಈ ಸಮಾವೇಶದಲ್ಲಿ ಭಾಗವಹಿಸಿದರೆ ಸರ್ಕಾರ ಕೋವಿಡ್ ನಿಯಮ ಪಾಲನೇ ಹೇಗೆ ಪಾಲನೆ ಮಾಡುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ದ ಮೂಲಕ ಪ್ರಶ್ನಿಸಿದ್ದಾರೆ.

ಸರ್ಕಾರವು ತನ್ನ ಆದೇಶದಂತೆ ತಾನೇ ನಡೆದುಕೊಳ್ಳಲು ಸಿದ್ದವಿಲ್ಲ, ಹಾಗಾಗಿ ಈ ಕೋವಿಡ್ ನಿಯಮ ರದ್ದುಗೊಳಿಸಿ ಇಲ್ಲವಾದರೆ ಸಮಾವೇಶ ರದ್ದುಗೊಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  ಈ ಹಿಂದೆ ಬಿಜೆಪಿ ಸರ್ಕಾರ ಕೋವಿಡ್ ಹರಡಲು ತಬ್ಲೀಗ್ ಜಮತಾ ಕಾರಣವೆಂದು ಪುಂಕಾನುಪುಂಕ ಊದಿತ್ತು. ಆದರೆ ಈಗ ರೂಪಾಂತರಿ ಕೋವಿಡ್ ಹರಡಲು ಯಾವ ಕ್ರಮಗಳನ್ನು ಅನುಸರಿಸುತ್ತಿದೆ? ಜನತೆಯ ಹಿತದೃಷ್ಠಿಗಿಂತ ಸಮಾವೇಶ ದೊಡ್ಡದೆ? ಎಂದು ಸಾರ್ವಜನಕ ವಲಯದಲ್ಲಿ ಹಲವು ಪ್ರಶ್ನಗಳು ಉದ್ಭವಿಸಿವೆ.

Donate Janashakthi Media

Leave a Reply

Your email address will not be published. Required fields are marked *