ಸಂಪುಟ ವಿಸ್ತರಣೆ – ಬಿಜೆಪಿಯಲ್ಲಿ ಅಸಮಧಾನ ಸ್ಪೋಟ

ಸಚಿವ ನಾಗೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡದಿದ್ದರೆ ವಜಾಗೊಳಿಸುವ ಎಚ್ಚರಿಕೆ ನೀಡಿದ ಸಿಎಂ

ಬೆಂಗಳೂರು;ಜ,13  : ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಶಾಸಕ ಮುನಿರತ್ನ, ರೇಣುಕಾಚಾರ್ಯ,  ಸುನೀಲ್ ಕುಮಾರ್ , ವಿಶ್ವನಾಥ್  ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಚುನಾಯಿತ 7 ಜನಪ್ರತಿನಿಧಿಗಳ ಹೆಸರುಗಳ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಇದರ ಬೆನ್ನಲ್ಲೆ ಸಚಿವ ಸ್ಥಾನ ವಂಚಿತರಾದ ಬಿಜೆಪಿ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಅಸಮಧಾನ ಹೊರಹಾಕಿದ್ದಾರೆ. ಯಡಿಯೂರಪ್ಪನವರು ಕೊಟ್ಟ ಮಾತು ತಪ್ಪಿದ್ದಾರೆ, ಅವರನ್ನು ಸಿಎಂ ಮಾಡಿದ್ದುಈ 17 ಜನರು. ಇವರಿಂದ ಇತಂಹ ನೀರಿಕ್ಷೆ ಮಾಡಿರಲಿಲ್ಲ. ಯೋಗೇಶ್ವರ ವಿರುದ್ಧ 420 ಕೇಸ್ ಗಳಿವೆ. ಅವನೊಬ್ಬ ಫ್ರಾಡ್, ಸಾಕಷ್ಟು ಜನರಿಗೆ ಅವನು ವಂಚನೆ ಮಾಡಿದ್ದಾನೆ ಅಂತವರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವಿಶ್ವನಾಥ ಕೆಂಡಮಂಡರಾಗಿದ್ದಾರೆ.

ಇದನ್ನು ಓದಿ : ಸಚಿವ ಸಂಪುಟ ವಿಸ್ತರಣೆ ಜೊತೆಗೆ ಖಾತೆಯಯಲ್ಲಿ ಬದಲಾವಣೆ ಸಾಧ್ಯತೆ!?

ಸಚಿವ ನಾಗೇಶ್

ಸಚಿವ ಸ್ಥಾನಗಳು ಕೈ ತಪ್ಪಿದ್ದಕ್ಕೆ ಹೊನ್ನಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕೂಡ ಅಸಮಧಾನ ಹೊರಹಾಕಿದ್ದಾರೆ. ಸಚಿವ ಸ್ಥಾನ ಪಟ್ಟಿಯಲ್ಲಿ ತಮ್ಮಗೆ ಸ್ಥಾನ ಗಿಟ್ಟಿಲ್ಲವೆಂದು ತಿಳಿದ ಕೂಡಲ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಅಸಮಾಧಾನ ಹೊರಹಾಕಿದ್ದಾರೆ.  ಕಾರ್ಕಳ ಶಾಸಕ  ಸುನೀಲ್ ಕುಮಾರ ಕೂಡಾ ಅಸಮಧಾನ ವ್ಯಕ್ತಪಡಿಸಿದ್ದು,  ಪಕ್ಷನಿಷ್ಠೆ,  ಹಿಂದುತ್ವ ಅಜೆಂಡದಲ್ಲಿ ನಾನು ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ನನಗೆ ಸಚಿವ ಸ್ಥಾನದ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿರುವುದು ಬೇಸರ ತಂದಿದೆ ಎಂದಿದ್ದಾರೆ. ಅಬಕಾರಿ ಸಚಿವ ನಾಗೇಶ್ ರೆಡ್ಡಿ ಯವರಿಗೆ ರಾಜಿನಾಮೆ ನೀಡುವಂತೆ  ಸಚಿವ ಸಂಪುಟದಲ್ಲಿ ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.  ಸಂಜೆಯೊಳಗೆ ರಾಜಿನಾಮೆ ನೀಡದೆ ಇದ್ದರೆ ಸಚಿವ ಸ್ಥಾನದಿಂದ ವಜಾ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.  ನಾಗೇಶ್ ರವರು ಸಿಎಂ ಯಡಿಯೂರಪ್ಪ ನವರಿಗೆ ಟ್ವೀಟ್ ಮಾಡುವುದರ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಸಚಿವ ಸ್ಥಾನಕ್ಕೆ ಸಮಾನಾಂತರ ಸ್ಥಾನಗಳನ್ನು ಕೊಡುವ ಭರವಸೆ ನೀಡಿದ್ದರು.  ಆದರೆ ಯಾವುದು ಆಗಿಲ್ಲ.  ಎಲ್ಲ ಬೆಳವಣಿಗೆ ಗಮನಿಸಿ ಗುರುವಾರ ನಿರ್ಧಾರ ಪ್ರಕಟಿಸುವುದಾಗಿ  ನಾಗೇಶ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *