ಲಾಠೀ ಪ್ರಹಾರ, ಜಲಫಿರಂಗಿ , ಕೊನೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಅಗೆದುಹಾಕಿಯಾದರೂ ರೈತರು, ನವಂಬರ್ 26 ರ ಕಾರ್ಮಿಕರ ಸಾರ್ವತ್ರಿಕ ಮುಷ್ಕರದ ಜತೆಗೆ , ನವಂಬರ್ 26-27ರ ‘ದಿಲ್ಲಿ ಚಲೋ’ ಕಾರ್ಯಕ್ರಮಕ್ಕೆ ದಿಲ್ಲಿಯತ್ತ ಬರದಂತೆ ತಡೆಯುವಲ್ಲಿ ಹರ್ಯಾಣದ ಬಿಜೆಪಿ ಸರಕಾರ ವಿಫಲವಾಯಿತು. ಮೋದಿ ಸರಕಾರದ ದಿಲ್ಲಿ ಪೋಲೀಸರು ಕಾಂಕ್ರೀಟ್ ತಡೆಗಟ್ಟುಗಳು, ಮುಳ್ಳುತಂತಿಗಳು, ಮರಳುತುಂಬಿದ ಲಾರಿಗಳನ್ನು ಮತ್ತು ಜಲಫಿರಂಗಿ ವಾಹನಗಳನ್ನು ನಿಲ್ಲಿಸಿ ಅವರನ್ನು ಟಿಕ್ರಿ ಮತ್ತು ಸಿಂಘು ಗಡಿಗಳಲ್ಲಿ ತಡೆದರು. ಹೆದರದ ರೈತರು ಅಲ್ಲೇ ಕೂತು ಬಿಟ್ಟರು. ಐದು ದಿನಗಳಾದರೂ ಕದಲದಿದ್ದಾಗ ಆರನೇ ದಿನ ಮೋದಿ ಸರಕಾರ ಡಿಸೆಂಬರ್ 1ರಂದು ರೈತ ಸಂಘಟನೆಗಳ ಮುಖಂಡರನ್ನು ಮಾತುಕತೆಗೆ ಕರೆಯಲೇ ಬೇಕಾಗಿ ಬಂತು.
ಇದಕ್ಕೆ ಮೊದಲು ಸಂಸತ್ತಿನಲ್ಲಿ ಯೇನಕೇನ ಪ್ರಕಾರೇಣ ಮೂರು ಕೃಷಿ ಕಾಯ್ದೆಗಳನ್ನು ಪಾಸು ಮಾಡಿಸಿಕೊಂಡ ಕೂಡಲೇ ಪಂಜಾಬಿನಲ್ಲಿ ರೈತರು ಆರಂಭಿಸಿದ್ದ ರಾಸ್ತಾರೋಕೋ, ರೈಲ್-ರೋಕೋ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಕ್ಟೋಬರ್ ನಲ್ಲಿ ಮತ್ತು ನವಂಬರಿನಲ್ಲಿ ನಡೆದ ಮಾತುಕತೆಗಳು ವಿಫಲವಾಗಿದ್ದವು.
***
ಡಿಸೆಂಬರ್ 1ರ ಮಾತುಕತೆಯೂ ಏನೂ ಫಲ ನೀಡದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ.
ಸರಕಾರವೇ ಅಗೆದು ಕಂದರ ನಿರ್ಮಿಸಿದ್ದಾಗ ಇನ್ನೇನಾಗಲು ಸಾಧ್ಯ?
ವ್ಯಂಗ್ಯಚಿತ್ರ: ಪಿ.ಮಹಮ್ಮದ್, ಆಂದೋಲನ ಡಿಸೆಂಬರ್ 2, 2020,
***
ಡಿಸೆಂಬರ್ 3 ಮತ್ತು 5 ರಂದು ಇನ್ನೆರಡು ಸುತ್ತಿನ ಮಾತುಕತೆಗಳು ನಡೆದವು. ಅವುಗಳಲ್ಲೂ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂಬ ರೈತರ ಮುಖ್ಯ ಬೇಡಿಕೆಯನ್ನು ಪರಿಶೀಲಿಸಲು ಸರಕಾರ ನಿರಾಕರಿಸಿತು. ನಿರಾಕರಿಸಲು ಅದರ ಮೇಲಿದ್ದ ಒತ್ತಡ ಏನು ಎಂಬುದು ರೈತರಿಗೂ ಗೊತ್ತಿತ್ತು.
ರೈತರು, ಕೃಷಿಕಾಯ್ದೆಗಳು, ಮಾತುಕತೆಗಳು ಮತ್ತು ಕಾರ್ಪೊರೇಟ್ಗಳು
ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್ ಕ್ರಾನಿಕಲ್, ಡಿಸೆಂಬರ್ 6, 2020
***
“ಕೇವಲ ಮಾತುಕತೆಯಿಂದ ‘ಹಲ್’(ನೇಗಿಲು)
ಮೇಲೆತ್ತಲು ಸಾಧ್ಯ ಎಂದು ನನಗನಿಸುವುದಿಲ್ಲ”
ಕಾರ್ಟೂನಿಸ್ಟ್ ನಖ್ವಿ, ಫೇಸ್ಬುಕ್, ಡಿಸೆಂಬರ್ 7, 2020
***
ಈ ವೇಳೆಗೆ ದಿಲ್ಲಿಯ ಇನ್ನೂ ಮೂರು ಗಡಿಪ್ರದೇಶಗಳಲ್ಲಿ ತಡೆಯಲ್ಪಟ್ಟ ರೈತರೂ ಧರಣಿ ಸತ್ಯಾಗ್ರಹವನ್ನು ಸೇರಿಕೊಂಡು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದರು. ಡಿಸೆಂಬರ್ 8ರಂದು ಭಾರತ ಬಂದ್ ನಡೆಯಿತು . ಈ ಬಾರಿ ಸ್ವತಃ ಗೃಹಮಂತ್ರಿಗಳೇ ರೈತ ಮುಖಂಡರನ್ನು ಮಾತುಕತೆಗೆ ಕರೆದರೂ ಏನೂ ಆಗಲಿಲ್ಲ.
ವ್ಯಂಗ್ಯಚಿತ್ರ: ಸುರೇಂದ್ರನ್, ದಿ ಹಿಂದು , ಡಿಸೆಂಬರ್ 9, 2020
***
ರೈತರ ಹೋರಾಟ ಮತ್ತಷ್ಟು ತೀವ್ರಗೊಂಡಿತು.
ಒಂದು ತಿಂಗಳು ಕಳೆದರೂ ದೇಶದ ರಾಜಧಾನಿಯನ್ನು ಐದು ಕಡೆಗಳಿಂದ ಸುತ್ತುವರೆದು ಕಾಯುತ್ತಿರುವ ರೈತರು ಕೊರೆಯುವ ಚಳಿಯಲ್ಲೂ ಕದಲದಿರುವುದನ್ನು ಕಂಡ ಸರಕಾರ ಮತ್ತೆ ಡಿಸೆಂಬರ್ 30ರಂದು ಮಾತುಕತೆಗೆ ಕರೆಯಿತು, ಅದು ಅಪೂರ್ಣವಾಗುಳಿದು, ಮತ್ತೆ ಜನವರಿ 4ರಂದು ಮಾತುಕತೆ ಎಂಬುದನ್ನು ನಡೆಸಿತು. ಈ ಎರಡು ಸಭೆಗಳೂ ಈ ಕಾಯ್ದೆಗಳು ರೈತರ ಒಳಿತಿಗೆಂದೇ ತಂದವುಗಳು ಎಂದು ರೈತರನ್ನು ನಂಬಿಸುವಲ್ಲಿ ವಿಫಲವಾದವು.
ಈ ನಡುವೆ ಕೊರೆಯುವ ಚಳಿಯೊಂದಿಗೆ ಮಳೆಯನ್ನೂ ರೈತರು ಎದುರಿಸಬೇಕಾಯಿತು, ಎದುರಿಸಿದರು.
***
“.. ಆದರೆ ಅವರ ಕಣ್ಣಲ್ಲಿ ಒಂದು ಹನಿಯೂ ಇಲ್ಲ..”
ವ್ಯಂಗ್ಯಚಿತ್ರ: ಅಲೋಕ್ ನಿರಂತರ್, ಜನವರಿ 6, 2021
***
ಈ ಪರಿಯ ಮಾತುಕತೆ!
ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಜನವರಿ 7, 2021
***
ಜನವರಿ 8ರ 8ನೇ ಸುತ್ತಿನಲ್ಲೂ ಮೋದಿ ಸರಕಾರದ ಕೃಷಿ, ಸಾರ್ವಜನಿಕ ವಿತರಣೆ ಮತ್ತು ವಾಣಿಜ್ಯ ಇಲಾಖೆಗಳ ಮಂತ್ರಿಗಳಿಂದ ಅದೇ ಹಳೆಯ ರಾಗ, ಮತ್ತೆ ಜನವರಿ 15ರಂದು 9ನೇ ಸುತ್ತಿಗೆ ಆಹ್ವಾನ
“ಸಭೆಗಳಿಗೆ ನೀವು ಮೂವರು ಏಕೆ ಬರುತ್ತಿದ್ದೀರಿ?
ನಿರ್ಧಾರವೇನೂ ನಿಮ್ಮ ಕೈಗಳಲ್ಲಿಲ್ಲವಲ್ಲ..”
“ಅದರಿಂದಾಗಿಯೇ ತಾನೇ ನಾವು ಮೂವರು ಸಭೆಗಳಿಗೆ ಬರುತ್ತಿರುವುದು!”
ವ್ಯಂಗ್ಯಚಿತ್ರ: ಅಲೋಕ್ ನಿರಂತರ್, ಜನವರಿ 8, 2021
***
ಇದೀಗ ಈ ಮಾತುಗಳ ‘ಕತೆ’! ಈ ವೇಳೆಗೆ ಅರವತ್ತಕ್ಕೂ ಹೆಚ್ಚು ರೈತ ಪ್ರತಿಭಟನಾಕಾರರು ಪ್ರಾಣ ಕಳಕೊಂಡಿದ್ದಾರೆ. ನಿರ್ಧಾರ ಕೈಗೊಳ್ಳಬಹುದಾದವರು ಏನು ಮಾಡುತ್ತಿದ್ದಾರೆ?
ವ್ಯಂಗ್ಯಚಿತ್ರ: ಪಿ.ಮಹಮ್ಮದ್, ವಾರ್ತಾಭಾರತಿ, ಜನವರಿ 8,2021
ನಿಜವಾದ ಹೋರಾಟಗರರನ್ನು ಮರೆತು ತಾನು ರೈತರನ್ನು ಅಹಿಂಸಾತ್ಮಕ ಹೋರಾಟವನ್ನು ಮರೆತು ಅರಿವಲ್ಲದವನಂತೆ ಅಮೆರಿಕಕ್ಕೆ ಸಲಹೆ ಕೊಡುವ ಪ್ರಧಾನಿಗೆ ಗೌರವವನ್ನು ಹೇಗೆ ಕಾಪಾಡಿಕೊಳ್ಳಲು ಸಾಧ್ಯ