ವಾಷಿಂಗ್ಟನ್:ಜ,04 :ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಟ್ರಂಪ್ ಆಪಾದಿಸಿದ್ದು, ಚುನಾವಣಾ ನಿಯಮಗಳನ್ನು ಲೆಕ್ಕಿಸದೆ ‘ಮತ ಎಣಿಕೆ’ ನಿಲ್ಲಬೇಕು. ಇಲ್ಲದಿದ್ದರೆ ನಾನು ಸುಪ್ರೀಂ ಕೋರ್ಟಿಗೆ ಹೋಗುತ್ತೇನೆ’ ಎಂದು ಈ ಹಿಂದೆ ಬೆದರಿಕೆಯೂ ಕೂಡ ಹಾಕಿದ್ದರು. ಅಗತ್ಯ ಬಿದ್ದರೆ ಚುನಾವಣಾ ಎಣಿಕೆಯಲ್ಲಿ ಅಕ್ರಮ ನಿಲ್ಲಿಸಲು ಜನ ಎಣಿಕೆ ಕೇಂದ್ರಗಳಿಗೆ ತೆರಳಬೇಕು ಎಂದು ಹೇಳಿಕೆಯನ್ನು ನೀಡಿದ್ದರು.
ಕೆಲವು ಕಡೆ ಕೋರ್ಟಿಗೆ ಹೋಗಿದ್ದಾರೆ ಆದರೆ ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿದೆ. ಟ್ರಂಪ್ ತಾವು ಸೋತರೂ ಅದನ್ನು ಒಪ್ಪಿಕೊಳ್ಳದ ಅವರು ಜಾರ್ಜಿಯಾದಲ್ಲಿ ಜೋ ಬೈಡೆನ್ ಅವರ ಗೆಲುವನ್ನು ತಿರುಚಲು ಅಲ್ಲಿನ ಚುನಾವಣಾ ಮುಖ್ಯಸ್ಥರಿಗೆ ಟ್ರಂಪ್ ಕರೆ ಮಾಡಿದ್ದು ಇದೀಗ ಭಾರಿ ವಿವಾದ ಕಾರಣವಾಗಿದೆ.
ಫಲಿತಾಂಶ ಬಂದಾಗಿನಿಂದಲ್ಲೂ ಟ್ರಂಪ್ ಒಂದಲ್ಲ ಒಂದು ಹಿಂಸಾಚಾರದ ಮತ್ತು ಆಂತರಿಕ ಯುದ್ಧದ ಬೀತಿ ಹರಡಿದ್ದು, ಸೋತರೂ ಅದನ್ನು ಒಪ್ಪಿಕೊಳ್ಳದ ಅವರು ಬೇಕಾಗಿರುವ ಅಗತ್ಯ ಮತಗಳನ್ನು ಹುಡುಕಲು ಆಗ್ರಹಿಸಿ ಕರೆ ಮಾಡಿರುವುದನ್ನು, ಅಮೆರಿಕದ ಮಾಧ್ಯಮ ವಾಷಿಂಗ್ಟನ್ ಪೋಸ್ಟ್ ಶನಿವಾರ ವರದಿ ಮಾಡಿದೆ.
ಇದು ಸಂವಿಧಾನಿಕ ಬಿಕ್ಕಟ್ಟು ತಲೆದೋರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಟ್ರಂಪ್ ಹೇಳಿಕೆ ಮತ್ತು ಕ್ರಮಗಳನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಜಾಗತಿಕ ನಿರೀಕ್ಷಣಾ ತಂಡ ‘ಅಧಿಕಾರದ ಭಾರೀ ದುರುಪಯೋಗ’ ಎಂದು ಟೀಕಿಸಿದೆ.
ಟ್ರಂಪ್ ತಮ್ಮ ಅಕ್ರ,ಮ ಆರೋಪಗಳ ಸಮರ್ಥನೆಗೆ ಸೇನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರು ಯತ್ನಗಳು ನಿಲ್ಲಿಸಲು 10 ಮಂದಿ ಮಾಜಿ ರಕ್ಷಣಾ ಕಾರ್ಯದರ್ಶಿಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಸಿದ್ದಾರೆ.