ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 91,339 ಸ್ಥಾನಗಳ ಪೈಕಿ 54,041 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ರಾಜ್ಯದ ಒಟ್ಟು 5,728 ಗ್ರಾಮ ಪಂಚಾಯಿತಿಗಳ ಒಟ್ಟು 91,339 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಒಟ್ಟು 91,339 ಸ್ಥಾನಗಳ ಪೈಕಿ ಈ ವರೆಗೂ 54,041 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಬ್ಯಾಲೇಟ್ ಪೇಪರ್ ಎಣಿಕೆ ನಿಧಾನವಾದ ಹಿನ್ನಲೆ ಹಾಗೂ ಕೆಲವೆಡೆ ಒಂದು – ಎರಡು ಮತ ವ್ಯತ್ಯಾಸ ಎನಿಸಿದಾಗ ಮರು ಎಣಿಕೆಗೆ ಅಭ್ಯರ್ಥಿಗಳು ಮನವಿ ಮಾಡಿದ ಘಟನೆ ಅನೇಕ ಕ್ಷೇತ್ರದಲ್ಲಿ ನಡೆದಿತ್ತು. ಈ ಕಾರಣದಿಂದಾಗಿ ಮೊದಲ ದಿನ ಪೂರ್ಣ ಪ್ರಮಾಣದ ಫಲತಾಂಶ ಕೊಡಲಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಾಕಿ ಉಳಿದ 36,781 ಸ್ಥಾನಗಳ ಫಲಿತಾಂಶ ಇಂದು ಘೋಷಣೆ ಮಾಡಲಾಗುತ್ತದೆ, ಮತ ಎಣಿಕೆ ಕೇಂದ್ರದ ಸುತ್ತ ಭದ್ರತೆ ಹಾಗೂ ಮುಂಜಾಗೃತಾ ಕ್ರಮ ವಹಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.