ವಿಸ್ಟ್ರಾನ್ ಕಾರ್ಖಾನೆಯ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಮತ್ತು ಮಾಲೀಕರ ವೈಫಲ್ಯದಿಂದ ಇಂತಹ ಘಟನೆ ನಡೆದಿದ್ದು ವಿನಾಕಾರಣ ಎಸ್ಎಫ್ಐ ಸಂಘಟನೆಯ ಮೇಲೆ ಗೂಬೆಕೂರಿಸಿದ್ದಾರೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವಾರೆಡ್ಡಿ ಗಂಭೀರ ಆರೋಪ ಮಾಡಿದರು
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಘಟನೆ ನಡೆದು ತನಿಖೆ ಪ್ರಾರಂಭಿಕ ಹಂತದಲ್ಲಿ ಇರುವಾಗ ಜವಾಬ್ದಾರಿ ಸ್ಥಾನದಲ್ಲಿ ಇರುವ ಕ್ಷೇತ್ರದ ಸಂಸದ ಎಸ್ಎಫ್ಐ ಸಂಘಟನೆಯ ಕೈವಾಡವಿದೆ ಎಂದು ತನಿಖೆಯನ್ನು ದಿಕ್ಕು ತಪ್ಪಿಸುತ್ತಾ ಇದ್ದು ಕೂಡಲೇ ಸಂಸದರು ಹೇಳಿಕೆಯನ್ನು ವಾಪಸು ಪಡೆಯಬೇಕು ಎಂದು ಒತ್ತಾಯಿಸಿದರು
ಅವಿಭಜಿತ ಕೋಲಾರ ಜಿಲ್ಲೆಯ ಅಭಿವೃದ್ಧಿಯ ಪಾತ್ರದಲ್ಲಿ ಭಾರತ ವಿಧ್ಯಾರ್ಥಿ ಫೆಡರೇಶನ್ ಪಾತ್ರ ಬಹುಮುಖ್ಯವಾಗಿದೆ ಶಾಶ್ವತ ನೀರಾವರಿ ಯೋಜನೆಗಳು ಜಾರಿಗೆ ಸ್ಥಳೀಯರಿಗೆ ಉದ್ಯೋಗ ವಿಷಯದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಯಾಗಬೇಕು ಎಂಬ ಅನೇಕ ಯೋಜನೆಗಳ ಜಾರಿಗಾಗಿ ಮುಂಚೂಣಿಯಾಗಿ ಸಂಘಟನೆ ಕೆಲಸ ಮಾಡಿದೆ ದೇಶದಲ್ಲಿ ಕೋಮುವಾದ ಬಂಡವಾಳಶಾಹಿ ವ್ಯವಸ್ಥೆಯ ಮತ್ತು ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳ ವಿರುದ್ದವಾಗಿದೆ ಎಂಬ ಕಾರಣಕ್ಕೆ ಸಂಘಟನೆಗೆ ಕಪ್ಪು ಚುಕ್ಕೆ ತರಲು ಹೊರಟಿದೆ ಎಂದರು.
ಕೈಗಾರಿಕೆ ಸ್ಥಾಪನೆಯಾದ ಮೇಲೆ ಕಾರ್ಮಿಕರಿಗೆ ಗುತ್ತಿಗೆ ಏಜೆನ್ಸಿ ಪಡೆದವರು ತಿಂಗಳ ತಿಂಗಳ ಸರಿಯಾಗಿ ಸಂಬಳ ಮೂಲಭೂತ ಸೌಕರ್ಯಗಳನ್ನು ನೀಡಿದ್ದಾರೆ ಕಾರ್ಮಿಕ ಕಾನೂನು ಉಲ್ಲಂಘನೆಯಾಗಿದೆಯೇ ದಿನದ 12 ಗಂಟೆಗಳ ಕಾಲ ದುಡಿಸಿಕೊಂಡರು ಯಾಕೆ ಸಂಬಳ ನೀಡಿಲ್ಲ ಎಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ವಿನಾಕಾರಣ ಅಮಾಯಕ ಕಾರ್ಮಿಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು
ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಘಟನೆಗೆ ಎಸ್.ಎಫ್.ಐ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ್ ಪಾತ್ರ ಏನು ಇಲ್ಲ ಪೋಲೀಸರು ವಿಚಾರಣೆಗೆ ಕರೆದೊಯ್ಯಲಾಗಿತ್ತು ವಿಚಾರಣೆ ಮುಗಿದ ನಂತರ ಬಿಡಲಾಗಿದೆ ಎಸ್.ಎಫ್.ಐ ಗು ಹಾಗೂ ವಿಸ್ಟ್ರಾನ್ ಕಂಪನಿಯಲ್ಲಿ ನಡೆದಿರುವ ದಾಂದಲೆಗೂ ಯಾವುದೇ ಸಂಭಂದವಿಲ್ಲ ವಿಸ್ಟ್ರಾನ್ ಕಂಪನಿಯ ಘಟನೆಯಿಂದ ಅಮಾಯಕ ಕಾರ್ಮಿಕರನ್ನು ಬಂದಿಸಲಾಗಿದೆ ಬಂದಿಸಿರುವ ಕುಟುಂಬಸ್ಥರು ಕಡು ಬಡವರಾಗಿದ್ದು ಕಾರ್ಮಿಕರು ಯಾವ ಜೈಲಿನಲ್ಲಿದ್ದಾರೆ ಎನ್ನುವ ಮಾಹಿತಿಯೂ ಸಹ ಪೋಷಕರಲ್ಲಿ ಇಲ್ಲ ಹಾಗಾಗಿ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಎಸ್.ಎಫ್.ಐ ಸಂಘಟನೆ ವತಿಯಿಂದ ಹಾಗು ನೊಂದ ಪೋಷಕರನ್ನು ಜೊತೆಗೂಡಿಸಿಕೊಂಡು ಡಿಸೆಂಬರ್ 19 ರಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರತಿಭಟನೆ ನಡೆಯಲಿದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಎಸ್ಎಫ್ಐ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗಾಯತ್ರಿ, ತಾಲ್ಲೂಕು ಕಾರ್ಯದರ್ಶಿ ಅಂಕಿತಾ, ಜಿಲ್ಲಾ ಸಹ ಕಾರ್ಯದರ್ಶಿ ಆನಂದ್, ಬಾಲಾಜಿ, ಉದಯಕುಮಾರ್, ಜೆಎಂಎಸ್ ವಿಜಯಕುಮಾರಿ ಇದ್ದರು.