ಡಿಕೆಶಿಗೆ ಸುಮ್ಮನೆ ಹೇಳಿಕೆ ನೀಡುವ ಚಟ: ಅಶೋಕ್‍

– ಸಂತೋಷ್‍ ಆತ್ಮಹತ್ಯೆ ಪ್ರಕರಣಕ್ಕೂ ಸರ್ಕಾರ ಅಥವಾ ಪಕ್ಷಕ್ಕೆ ಸಂಬಂಧವಿಲ್ಲ

 

ಪೊನ್ನಂಪೇಟೆ (ಕೊಡಗು): ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಯಾವುದೇ ವಿಡಿಯೊ ದಾಖಲೆಗಳಿದ್ದರೂ ಕೊಡಲಿ. ಆದರೆ, ಸುಮ್ಮನೆ ಹೇಳಿಕೆ ಕೊಡುವುದು ಸರಿಯಲ್ಲ. ಅವರಿಗೆ ಹೇಳಿಕೆ ನೀಡುವ ಚಟ ಇರಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು.

ಕೊಡಗಿನ ಪೊನ್ನಂಪೇಟೆ ತಾಲೂಕು ಉದ್ಘಾಟನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಸಂತೋಷ್ ಆತ್ಮಹತ್ಯೆ ಯತ್ನ ಅವರ ವೈಯಕ್ತಿಕ ವಿಚಾರವಾಗಿದ್ದು ಪಕ್ಷ ಅಥವಾ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್ ಅಡಿಯೊ, ವಿಡಿಯೊ ಇದೆ ಎಂದು ಹೇಳಿಕೆ ನೀಡಿ ರಾಜಕೀಯವಾಗಿ ಪ್ರಕರಣವನ್ನು ಪರಿವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂತೋಷ ಅವರು ಅವರ ವೈಯಕ್ತಿಕ ವಿಚಾರಕ್ಕೆ ಹಾಗೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಊಹಪೋಹ ಬೇಡ. ಎರಡು ದಿನ ಸುಮ್ಮನಿದ್ದರೆ  ಆಸ್ಪತ್ರೆಯಿಂದ ಬಂದು ಅವರೇ ಮಾಧ್ಯಮದೊಂದಿಗೆ ಮಾತನಾಡಲಿದ್ದಾರೆ. ಆಗ ವಾಸ್ತವಾಂಶ ೆಲ್ಲರಿಗೂ ತಿಳಿಯುತ್ತದೆ ಎಂದು ಅಶೋಕ್‍ ಹೇಳಿದರು.

ರಾಜ್ಯದಲ್ಲಿ, ಕೇಂದ್ರದಲ್ಲಿ ಎಲ್ಲಿಯೂ ಅವರ ಸರ್ಕಾರವಿಲ್ಲ.  ಅವರ ಪಕ್ಷದಲ್ಲಿ ಇರುವವರೆಲ್ಲಾ ಬಿಜೆಪಿಗೆ ಬರುತ್ತಿದ್ದಾರೆ. ಹೀಗಾಗಿ ಹತಾಶೆಗೊಂಡು  ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.

ಸಚಿವ ನಾರಾಯಣಗೌಡ ಮಾತನಾಡಿ, ಸಂತೋಷ್ ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ. ಔಷಧಿ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಅಸ್ವತ್ಥಗೊಂಡಿದ್ದರು. ಈಗ ಅವರು ಗುಣಮುಖರಾಗುತ್ತಿದ್ದಾರೆ. ನಾನೂ ಸಹ ಅವರ ಆರೋಗ್ಯವನ್ನು ವಿಚಾರಿಸಿದ್ದೇನೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *