ನ್ಯಾಯಾಲಯ ಆವರಣದ ಗೋಡೆಯಲ್ಲಿ ಪ್ರಚೋದನಾಕಾರಿ ಬರಹ

 

 

  • ಎರಡು ದಿನಗಳ ಹಿಂದೆಯೂ ಬರೆಯಲಾಗಿತ್ತು ಪ್ರಚೋದನಾಕಾರಿ ಬರಹ

ಮಂಗಳೂರು: ನಗರದ ಮತ್ತೊಂದು ಕಡೆ ಪ್ರಚೋದನಾಕಾರಿ ಗೋಡೆ ಬರಹವು ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿದೆ.

ನಗರದ ಪಿವಿಎಸ್ ವೃತ್ತ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಈ ಬರಹ ಕಂಡುಬಂದಿದೆ.

ಗೋಡೆಯ ಮೇಲೆ ‘Gustak e rasool ek hi saza tan say juda’ ಎಂದು ಬರೆಯಲಾಗಿದೆ. ಬರಹದಲ್ಲಿರುವುದು ‘ಪ್ರವಾದಿಗೆ ಕೋಪ‌ ಬಂದರೆ ಒಂದೇ‌ ಶಿಕ್ಷೆ; ಅದು ದೇಹದಿಂದ ತಲೆ‌ ಬೇರ್ಪಡಿಸುವುದು’ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಲಷ್ಕರ ಪರ ಗೋಡೆ ಬರಹ : ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಕದ್ರಿ ಸರ್ಕ್ಯೂಟ್ ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಕಾಂಪೌಡ್ ಗೋಡೆಯೊಂದರಲ್ಲಿ ಲಷ್ಕರ್ ಪರ ಗೋಡೆ ಬರಹ ಕಾಣಿಸಿಕೊಂಡಿತ್ತು.

ಮಂಗಳೂರು ನಗರದ ಹೃದಯ ಭಾಗದಲ್ಲಿ ಎರಡೇ ದಿನದ ಅವಧಿಯಲ್ಲಿ ಮತ್ತೊಂದು ಪ್ರಚೋದನಾಕಾರಿ ಗೋಡೆ ಬರಹ ಪ್ರತ್ಯಕ್ಷಗೊಂಡಿದೆ. ಬಿಜೆಪಿ ಆಡಳಿತದಲ್ಲಿ ಕ್ರಿಮಿನನಲ್ ಗಳಿಗೆ, ಸಮಾಜದ್ರೋಹಿಗಳಿಗೆ ಯಾರ ಭಯವೂ ಇಲ್ಲದಂತಾಗಿದೆ. ಇದು ಆಡಳಿತದ ದಯನೀಯ ವೈಫಲ್ಯ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಮೀಷನೆರೇಟ್ ಪೊಲೀಸರು ವಿಫಲಗೊಂಡಿರುವುದು ಬಟ್ಟಾಬಯಲಾಗಿದೆ. ಕನಿಷ್ಟ ಹಿರಿಯ ಪೊಲೀಸ್ ಅಧಿಕಾರಿಗಳನ್ನಾದರು ಬದಲಾಯಿಸಿ ದಕ್ಷ ಅಧಿಕಾರಿಗಳ ಕೈಗೆ ಅಧಿಕಾರ ಕೊಡಲಿ ಎಂದು ಸ್ಥಳೀಯ ಹೋರಾಟಗಾರ,  ಡಿವೈಎಫ್‍ಐ ರಾಜ್ಯ ಅಧ್ಯಕ್ಷ ಮುನೀರ್‍ ಕಾಟಿಪಳ್ಳ ಪ್ರತಿಕ್ರಿಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *