ಬೆಂಗಳೂರು : ಬೆಂಗಳೂರಿನ ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಹಾಗೂ ಶ್ರೀನಿವಾಸ್ ಮನೆ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ನನ್ನು ಇಂದು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕಾಗಿ ಸಿಸಿಬಿ ಐದು ತಂಡಗಳನ್ನು ರಚಿಸಿತ್ತು, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಕೂಡ ಕಾರ್ಯಚರಣೆ ನಡೆಸಿತ್ತು. ಮಂಗಳವಾರವಷ್ಟೆ ಸಂಪತ್ ರಾಜ್ ನ ಆಪ್ತ ರಿಯಾಜುದ್ದೀನ್ ಬಂಧಿಸಲಾಗಿತ್ತು. ಆತ ನೀಡಿದ ಸುಳಿವಿನಿಂದ ಅಂತಿಮವಾಗಿ ಸಿಸಿಬಿ ಪೊಲೀಸರ ಸಂಪತ್ ರಾಜ್ ನನ್ನು ಬಂಧಿಸಿದ್ದಾರೆ.
ಇದನ್ನು ಓದಲು ಲಿಂಕ್ ಕ್ಲಿಕ್ ಮಾಡಿ : ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಆರೋಪಿ ಸಂಪತ್ ರಾಜ್ ನಾಪತ್ತೆ
ಸಂಪತ್ ರಾಜ್ ಬಂಧನ ಬಾರೀಕೂತುಹಲ ಕೆರಳಿಸಿದೆ. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮನಗೆ ಬೆಂಕಿ ಹಚ್ಚಿದ ಆರೋಪ ಸಂಪತ್ ರಾಜ್ ಮೇಲಿದೆ. ಇವರು ಕೂಡಾ ಕಾಂಗ್ರೆಸ್ ನಿಂದ ಬಿಬಿಎಂಪಿ ಮೇಯರಾಗಿದ್ದವರು ಪೊಲೀಸರ ಮುಂದೆ ಸಂಪತ್ ರಾಜ್ ಹೇಳಿಕೆ ಏನಿರಬಹುದು? ಎಂಬ ಚರ್ಚೆಗಳು ಆರಂಭವಾಗಿವೆ.