ಪಶ್ಚಿಮ ಪದವೀಧರರ ಕ್ಷೇತ್ರ: ಬಿಜೆಪಿಯ ಸಂಕನೂರಗೆ ಭರ್ಜರಿ ಜಯ

ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದ ತಿರಸ್ಕೃತ ಮತಗಳು


ಧಾರವಾಡ: ಧಾರವಾಡ  ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿ ಹೊಂದಿದ್ದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ 23,857 ಮತಗಳನ್ನು ಪಡೆದ  ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ 11,409 ಮತಗಳ ಅಂತರದ ಭರ್ಜರಿ ಜಯ ದಾಖಲಿಸಿದ್ದಾರೆ.

ಮತ ಎಣಿಕೆ ಪ್ರಕ್ರಿಯೆ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಲೇ ಬಂದ ಸಂಕನೂರ ಗೆಲುವಿನ ಕೇಕೆ ಹಾಕಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ 12,857 ಮತಗಳನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ತಿರಸ್ಕೃತ (8,772) ಮತಗಳಿವೆ. ಇನ್ನು 6,188 ಮತಗಳನ್ನು ಪಡೆದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಮೊದಲ ಸುತ್ತಿನಲ್ಲಿ 3,849 ಮತಗಳ ಮುನ್ನಡೆ ಪಡೆದ ಸಂಕನೂರ ಪ್ರತಿ ಸುತ್ತಿನಲ್ಲೂ 2ರಿಂದ 3 ಸಾವಿರ ಮತಗಳ ಮುನ್ನಡೆ ಹೆಚ್ಚಿಸುತ್ತಲೇ ಸಾಗಿದರು. ಕುಬೇರಪ್ಪ ಹಾಗೂ ಗುರಿಕಾರ ಅವರ ತವರು ಜಿಲ್ಲೆಯಲ್ಲಿ ಮತಗಳು ಬರಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.


ಎನ್ಪಿಎಸ್ ಬಗ್ಗೆ ಬ್ಯಾಲೆಟ್ನಲ್ಲಿ ಬರಹ
ಪದವೀಧರರ ಮತಕ್ಷೇತ್ರ ಚುನಾವಣೆಯಲ್ಲಿ ತಿರಸ್ಕೃತ ಮತಗಳ ಸಂಖ್ಯೆಯೇ 3ನೇ ಸ್ಥಾನದಲ್ಲಿದೆ ಎಂಬುದು ವಿಷಾದದ ಸಂಗತಿ. ಇಲ್ಲಿ ನಾಲ್ಕನೇ ಅಭ್ಯರ್ಥಿ 6,188 ಮತಗಳನ್ನು ಪಡೆದರೆ ತಿರಸ್ಕೃತಗೊಂಡ ಮತಗಳ ಸಂಖ್ಯೆ 8,772 ಇದೆ. ಇಲ್ಲಿ ಮತದಾರ ಬ್ಯಾಲೆಟ್ ಪೇಪರ್‌ನಲ್ಲಿ ಅನಗತ್ಯ ಬರಹ ಬರೆದಿದ್ದರಿಂದ ಇಷ್ಟೊಂದು ಮತಗಳು ಅಸಿಂಧುಗೊಂಡಿವೆ. ಮತದಾರರ ತಮ್ಮ ಆಯ್ಕೆ ಅಭ್ಯರ್ಥಿ ಕಾಲಂನಲ್ಲಿ ಪ್ರಾಶಸ್ತ್ಯ ಬರೆಯುವಲ್ಲಿ ವಿಫಲರಾಗಿದ್ದಾರೆ. ಅಭ್ಯರ್ಥಿ ಸಂಖ್ಯೆಯನ್ನೇ ಉಲ್ಲೇಖಿಸಿ ತಪ್ಪು ಮಾಡಿದ್ದಾರೆ. ಇನ್ನು ಕೆಲವರು ಎನ್‌ಪಿಎಸ್ (ಹೊಸ ಪಿಂಚಣಿ ಸೌಲಭ್ಯ)ದ ವಿರುದ್ಧ ಎಂದು ಬರೆದಿದ್ದರೆ ಕೆಲವರು ಹಳೇಪಿಂಚಣಿ ಪರ ಎಂಬ ಬರಹ ಬರೆದಿದ್ದಾರೆ. ಕೆಲವರು ಗುರುತಿನ ಚಿಹ್ನೆಗಳನ್ನೂ ಹಾಕಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ಎಸ್‍.ವಿ.ಸಂಕನೂರ, ಚುನಾವಣೆಯಲ್ಲಿ 11ಸಾವಿರಕ್ಕೂ ಅಧಿಕ ಪ್ರಥಮ ಪ್ರಾಶಸ್ತö್ಯದ ಮತಗಳಿಂದ ನನ್ನನ್ನು ಗೆಲ್ಲಿಸಿದ ಮತದಾರರಿಗೆ ನಾನು ಕೃತಘ್ನ. ಇದರ ಶ್ರೇಯಸ್ಸು ಪಕ್ಷದ ಕಾಯಕರ್ತರಿಗೆ ಸಲ್ಲಲಿದೆ. ಎಲ್ಲ ನಮ್ಮ ನಾಯಕರಿಗೆ, ಸಂಸದ, ಶಾಸಕರಿಗೆ ನಾನು ಚಿರಋಣಿ. ಹಳೇ ಪಿಂಚಣಿ ಸೌಲಭ್ಯವನ್ನು ನೌಕರರಿಗೆ ಕೊಡಿಸುವ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುತ್ತೇನೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಯತ್ನಿಸಿ ನಿರುದ್ಯೋಗಿಗಳು ಹಾಗೂ ಸರಕಾರದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುವೆ ಎಂದು ಭರವಸೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *