ಬಳ್ಳಾರಿ : ಆರೋಗ್ಯ ಇಲಾಖೆ ಖಾತೆಯನ್ನುಸಚಿವ ಡಾ. ಸುಧಾಕರ್ ಹಾಗೂ ಆರೋಗ್ಯ ಇಲಾಖೆ ಬದಲಾಗಿ ಸಚಿವ ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಿರುವುದಾಗಿ ರಾಜ್ಯಪಾಲರು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.
ಈ ಘೋಷಣೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ವಿರುದ್ದ ವಾಲ್ಮೀಕಿ ಸಮುದಾಯ ಘರಂ ಆಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಿಡಾಗಿದೆ. ಶ್ರೀ ರಾಮುಲುಗೆ ಆರೋಗ್ಯ ಖಾತೆ ಬದಲಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಮೀಕಿ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಎಂ ಯಡಿಯೂರಪ್ಪಗೆ ಸರಿಯಾಗಿ ಪಾಠ ಕಲಿಸಬೇಕು, ಪ್ರತಿಬಾರಿ ಇದೇ ರೀತಿ ಅನ್ಯಾಯ ಮಾಡಲಾಗುತ್ತಿದೆ. ಸಿಎಂ ಯಡಿಯೂರಪ್ಪಗೆ ಬಿಸಿ ಮುಟ್ಟಿಸಬೇಕು, ಶ್ರೀ ರಾಮುಲುರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತೀವೆ.
ಶ್ರೀ ರಾಮುಲುರನ್ನು ಯಾಕೆ ಬದಲಾವಣೆ ಮಾಡಿದ್ದಿರಿ ಎಂದು ಸ್ಪಷ್ಟನೆ ಕೊಡಬೇಕು ಜೊತೆಗೆ ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಕೆಲಸ ಮಾಡಿದ ಶ್ರೀ ರಾಮುಲುಗೆ ಡಿಸಿಎಂ ಪಟ್ಟನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಮೀಕಿ ಸಮುದಾಯವದರು ಆಗ್ರಹಿಸಿದ್ದಾರೆ.
ಇದನ್ನ ಓದಿ :ಖಾತೆ ಬದಲಾವಣೆ: ರಾಮುಲುಗೆ ಹಿನ್ನಡೆ; ಸುಧಾಕರ್ ಗೆ ಬಲ! ಯಡಿಯೂರಪ್ಪ ತಂತ್ರದ ಮರ್ಮವೇನು?
ಆದರೆ ಸಾರ್ವಜನಿಕ ವಲಯದಲ್ಲಿ ಪರವಿರೋಧದ ಚರ್ಚೆಗಳು ನಡೆಯುತ್ತಿವೆ. ರಾಮುಲುರವರು ಆರೋಗ್ಯ ಖಾತೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದು, ಆರೋಗ್ಯ ಸಚಿವರು ಅಸಮರ್ಥರು ಎಂಬುದು ಬಯಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಕುಟುಕಿದ್ದಾರೆ. ಖಾತೆ ಬದಲಾವಣೆ ಮಾಡಿದ್ದು ಸರಿ ಇದೆ ಎಂದು ಸಿಎಂ ಆಪ್ತವಲಯದಲ್ಲಿ ಕೇಳಿ ಬರುತ್ತಿದೆ. ಇನ್ನೊಂದೆಡೆ ಶ್ರೀರಾಮುಲು ವಾಲ್ಮೀಕಿ ಸಮುದಾಯದ ಮುಖಂಡರನ್ನು ಮುಂದೆ ಬಿಟ್ಟು ಉಪಮುಖ್ಯಮಂತ್ರಿ ಖಾತೆ ಪಡೆಯಲು ರಣತಂತ್ರ ಹೆಣೆದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.