ನೊಬೆಲ್-2020: ಭೌತಶಾಸ್ತ್ರ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್‌ ಪ್ರಶಸ್ತಿ

  • ಕಪ್ಪು ಕುಳಿ(black hole) ಸಂಬಂಧಿಸಿದ ಸಂಶೋಧನೆಗಳಿಗಾಗಿ ನೊಬೆಲ್‌ ಪ್ರಶಸ್ತಿ 

ಸ್ಟಾಕ್‌ಹೋಮ್‌: 2020ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ಪ್ರಕಟವಾಗಿದ್ದು, ಮಹಿಳಾ ವಿಜ್ಞಾನಿ ಸೇರಿ ಮೂವರು ಸಾಧಕರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಪ್ಪು ಕುಳಿಗೆ(black hole) ಸಂಬಂಧಿಸಿದ ಸಂಶೋಧನೆಗಳಿಗಾಗಿ ರೋಜರ್ ಪೆನ್ರೋಸ್‌ ಮತ್ತು ರೈನ್‌ಹಾರ್ಡ್ ಗೆಂಜೆಲ್‌ ಹಾಗೂ ಆ್ಯಂಡ್ರಿಯಾ ಘೆಂಜ್ ಅವರಿಗೆ ಜಂಟಿಯಾಗಿ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ: ನೊಬೆಲ್ 2020: ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ವಿಭಾಗದ ಪ್ರಶಸ್ತಿ

ಪ್ರಶಸ್ತಿಯ ಅರ್ಧ ಮೊತ್ತ ರೋಜರ್‌ ಪೆನ್ರೋಸ್‌ ಹಾಗೂ ಉಳಿದ ಅರ್ಧ ಭಾಗವನ್ನು ರೈನ್‌ಹಾರ್ಡ್ ಗೆಂಜೆಲ್‌ ಮತ್ತು ಆ್ಯಂಡ್ರಿಯಾ ಘೆಂಜ್ ಅವರಿಗೆ ಹಂಚಿಕೆಯಾಗಲಿದೆ.

ಇದನ್ನೂ ಓದಿ: ನೊಬೆಲ್‌-2020: ‘ಹೆಪಟೈಟಿಸ್ ಸಿ ವೈರಸ್’ ಪತ್ತೆ ಮಾಡಿದ ಮೂವರು ಸಾಧಕರಿಗೆ ವೈದ್ಯಕೀಯ ನೊಬೆಲ್‌

ಕಪ್ಪು ಕುಳಿಗಳು ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಸಾಪೇಕ್ಷ ಸಿದ್ಧಾಂತದ ನೇರ ಫಲಿತಾಂಶವಾಗಿರುವುದನ್ನು ಗಣಿತದ ವಿಧಾನಗಳಿಂದ ಪ್ರಮಾಣೀಕರಿಸಿದ್ದಾರೆ. ಕಪ್ಪು ಕುಳಿಗಳ ಇರುವಿಕೆಯನ್ನು ಸ್ವತಃ ಐನ್‌ಸ್ಟೀನ್‌ ಸಹ ನಂಬಿರಲಿಲ್ಲ. ದೈತ್ಯ ಮತ್ತು ಘನವಾದ ಕಪ್ಪು ಕುಳಿಗಳು ಅದರತ್ತ ಸಾಗುವ ಎಲ್ಲವನ್ನೂ ಸೆಳೆದುಕೊಂಡು ಬಿಡುತ್ತವೆ. ಬೆಳಕೂ ಸಹ ಕಪ್ಪು ಕುಳಿಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

1965ರಲ್ಲಿ ರೋಜರ್‌ ಅವರು ಕಪ್ಪು ಕುಳಿಗಳು ನಿಜಕ್ಕೂ ಸೃಷ್ಟಿಯಾಗಬಹುದೆಂದು ನಿರೂಪಿಸಿದರು ಹಾಗೂ ಆ ಬಗ್ಗೆ ವಿವರವಾಗಿ ಉಲ್ಲೇಖಿಸಿದರು.

Donate Janashakthi Media

Leave a Reply

Your email address will not be published. Required fields are marked *