ಅ.15ರಿಂದ ಶಾಲಾ-ಕಾಲೇಜು, ಚಿತ್ರಮಂದಿರ  ಆರಂಭ; ಷರತ್ತು ಪಾಲನೆ ಕಡ್ಡಾಯ

 

ಬೆಂಗಳೂರು: ನವೆಂಬರ್‍ನಲ್ಲಿ ಕೊರೊನಾ ಹೆಚ್ಚಳವಾಗುತ್ತದೆ ಂಬ ವರದಿ ನಡುವೆಯೇ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಿದೆ.

ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು ಮತ್ತು ಈಜುಕೊಳಗಳನ್ನು ತೆರೆಯಲು ಷರತ್ತಗಳನ್ನು ವೀಧಿಸಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ. ಶಾಲೆಗಳನ್ನು ತೆರೆದರೂ ವಿದ್ಯಾರ್ಥಿಗಳು ಶಾಲೆಗೆ ಹಾಜರಿ ಕಡ್ಡಾಯವಲ್ಲ, ಹಾಜರಾಗುವುದಾದರೆ ಪೋಷಕರ ಅನುಮತಿ ಕಡ್ಡಾಯ. ಹಾಗೆಯೇ ಆನ್‍ಲೈನ್‍ ತರಗತಿಗಳನ್ನೂ ನಡೆಸಬೇಕು ಎಂದು ಹೇಳಲಾಗಿದೆ.

ಈ ಹಿಂದೆ ಸೆಪ್ಟೆಂಬರ್​ 21ರಿಂದ ಶಾಲಾ-ಕಾಲೇಜ್​ ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಕೋವಿಡ್​ ಪ್ರಕರಣ ಹೆಚ್ಚಾದ ಹಿನ್ನಲೆ ಈ ಆದೇಶವನ್ನು ಹಿಂಪಡೆಯಲಾಗಿತ್ತು. ಇಂದು ಅನ್​ಲಾಕ್​ ಮಾರ್ಗ ಸೂಚಿ ಪ್ರಕಟಿಸಿರುವ ರಾಜ್ಯ ಸರ್ಕಾರ  ಆಯಾ ಶಿಕ್ಷಣ ಸಂಸ್ಥೆಗಳೊಡನೆ ಚರ್ಚೆ ನಡೆಸಿ ಶಾಲಾ-ಕಾಲೇಜು ಆರಂಭಕ್ಕೆ ಮುಂದಾಗಿದೆ.  ಇದೇ ವೇಳೆ ಆನ್​ಲೈನ್​ ತರಗತಿಗೂ ಕೂಡ ಅದು ಒತ್ತು ನೀಡಿದ್ದು, ಇದನ್ನೇ ಮುಂದುವರೆಸಲು ಶಿಕ್ಷಣ ಸಂಸ್ಥೆಗಳು ಇಚ್ಚಿಸಿದರೆ ಇದಕ್ಕೆ ಅವಕಾಶ ಇದೆ ಎಂದಿದೆ.

ಶಾಲೆಗಳು ಆನ್​ಲೈನ್​ ತರಗತಿ ಮೊರೆಹೋಗಿದ್ದು, ಅದನ್ನೇ ಅನುಸರಿಸಲು ಇಚ್ಛಿಸಿದರೆ ಅದಕ್ಕೆ ಅನುಮತಿ ನೀಡಬಹುದು.

ಒಂದು ವೇಳೆ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಬಯಸಿದ್ದರೆ, ಅದಕ್ಕೆ ಅವರ ಪೋಷಕರಿಂದ ಅನುಮತಿ ಪತ್ರ ಕಡ್ಡಾಯವಾಗಿದೆ.

ಹಾಜರಾತಿ ಕಡ್ಡಾಯವಲ್ಲ. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಕುರಿತು ಪೋಷಕರದ್ದೇ ಅಂತಿಮ ತೀರ್ಮಾನ.

ಶಿಕ್ಷಣ ಸಂಸ್ಥೆ ತೆರೆಯಲು ಮುಂದಾದರೆ ಆರೋಗ್ಯ ಮತ್ತು ಸುರಕ್ಷಾ ದೃಷ್ಟಿಕೋನ ಅನುಸರಿಸಬೇಕು. ಇದನ್ನು ಶಿಕ್ಷಣ ಇಲಾಖೆ ಆಧಾರದ ಮೇಲೆ ಈ ನಿಯಮಗಳ ಪಾಲನೆ ಮಾಡಬೇಕು

ಪುನರ್​ಆರಂಭವಾದ ಶಾಲೆಗಳು ಈ ಸುರಕ್ಷಾ ನಿಯಮ ಪಾಲಿಸುವುದು ಕಡ್ಡಾಯ

ಉನ್ನತ ಶಿಕ್ಷಣ ಇಲಾಖೆ ಕಾಲೇಜು ಆರಂಭ ಕುರಿತು ಪರಿಸ್ಥಿತಿ ಅವಲೋಕಿಸಿ ಸಮಯ ನಿಗದಿಸಬಹುದು. ಆನ್​ಲೈನ್​/ ದೂರ ಶಿಕ್ಷಣ ಕಲಿಕೆ ಉತ್ತೇಜನಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕು.

ಅದಾಗ್ಯೂ, ಉನ್ನತ ಶಿಕ್ಷಣ ಸಂಸ್ಥೆಗಳು ಅದರಲ್ಲಿಯೂ ಸಂಶೋಧನ ವಿದ್ಯಾರ್ಥಿ (ಪಿಎಚ್​ಡಿ) ಹಾಗೂ ವಿಜ್ಞಾನ ಹಾಗೂ ತಂತ್ರಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  ಲ್ಯಾಬೋರೇಟರಿ ಅವಶ್ಯಕವಾಗಿದೆ. ಈ ಹಿನ್ನಲೆ ಅಕ್ಟೋಬರ್​ 15ರಿಂದ ಇದನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕೆ  ಅನುಮತಿ ಕಡ್ಡಾಯ.

ಸಿನಿಮಾ ಮಂದಿರ ತೆರೆಯಲು ಅನುಮತಿ
ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್​ಗಳು ಕಾರ್ಯರಂಭಕ್ಕೆ ಅವಕಾಶ ನೀಡಲಾಗಿದೆ. ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಪ್ರಕಟಣೆ ತಿಳಿಸಿದೆ.  ಅಕ್ಟೋಬರ್​ 15ರಿಂದ ಕಂಟೈನ್ಮೆಟ್ ಪ್ರದೇಶ ಹೊರತು ಪಡಿಸಿ ಬೇರೆ ಎಲ್ಲಾಕಡೆ ಇವುಗಳ ಕಾರ್ಯಚಾರಣೆಗೆ ಅವಕಾಶ ಕಲ್ಪಿಸಲಾಗಿದೆ

ಕ್ರೀಡಾಪಟುಗಳ ತರಬೇತಿಗಾಗಿ ಬಳಸುವ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಕ್ರೀಡಾ ಸಚಿವಾಲಯದ ಮಾರ್ಗದರ್ಶನದಂತೆ ಕಾರ್ಯಚರಣೆ  ನಡೆಸಬೇಕು

ಕಂಟೈನ್ಮೆಂಟ್​ಗಳಲ್ಲಿ ಅಕ್ಟೋಬರ್​ ಅಂತ್ಯದವರೆಗೆ ಸೀಮಿತ ಲಾಕ್​ಡೌನ್​ ಜಾರಿಯಲ್ಲಿರಲಿದ್ದು, ಅತ್ಯವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *