ಜನಶಕ್ತಿ ಮಿಡಿಯಾ ವೆಬ್ ಪತ್ರಿಕೆ ಲೋಕಾರ್ಪಣೆ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ

“ಕರ್ನಾಟಕ 2020 : ಕೊರೊನಾ ಕಾಲದಲ್ಲಿ ಮತ್ತು ನಂತರ” ಕುರಿತ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ

 ಜನಶಕ್ತಿ ಮೀಡಿಯಾ ವೆಬ್, ಫೇಸ್ ಬುಕ್, ಪಾಡ್ಕಾಸ್ಟ್ ಮತ್ತು ಯೂ ಟ್ಯೂಬ್ ಚಾನೆಲುಗಳು ಈಗಾಗಲೇ ಸಕ್ರಿಯವಾಗಿವೆ. ಜನಶಕ್ತಿ ಮಿಡಿಯಾ ವೆಬ್ ಪತ್ರಿಕೆಯನ್ನು ಹೊಸ ವಿನ್ಯಾಸದೊಂದಿಗೆ ಪ್ರಕಟಿಸುವ ಸಿದ್ಧತೆ ನಡೆದಿದೆ. ವೆಬ್ ಪತ್ರಿಕೆಯಲ್ಲಿ ಪ್ರಸಕ್ತ ವಿದ್ಯಮಾನಗಳ ವಸ್ತುನಿಷ್ಠ ವರದಿ, ಟೀಕೆ ಟಿಪ್ಪಣಿ ವಿಮರ್ಶೆಗಳಿರುತ್ತವೆ. ಇದು ರಾಜ್ಯ, ರಾಷ್ಟ್ರ ಮತ್ತು ಅಂರ‍್ರಾಷ್ಟ್ರೀಯ ಮಟ್ಟದ ಚಿಂತಕರ, ಪರಿಣಿತರ, ಬರಹಗಾರರ, ಪತ್ರಕರ್ತರ ವೈವಿಧ್ಯಮಯ ಅಭಿಪ್ರಾಯಗಳಿಗೆ ವೇದಿಕೆಯಾಗಿರುತ್ತದೆ. ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವಿಜ್ಙಾನ-ತಂತ್ರಜ್ಙಾನ ಇತ್ಯಾದಿ ವಿಷಯಗಳ ಕುರಿತು ವಿಶ್ಲೇಷಣಾತ್ಮಕ ಲೇಖನಗಳಿಗೂ ಇದೊಂದು ತಾಣವಾಗಲಿದೆ.. ಕತೆ, ಕವಿತೆ, ಸಿನಿಮಾ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿ ಅಥವಾ ಅವುಗಳ ವಿಮರ್ಶೆಗೂ ಇದು ತೆರೆದಿರುತ್ತದೆ.

ಸರಕಾರಗಳ, ಆಳುವವರ ದಮನಕಾರಿ ನೀತಿಗಳಿಗೆ ಪ್ರತಿರೋಧ ಒಡ್ಡುತ್ತಿರುವ ರೈತ, ಕೂಲಿಕಾರ, ಕಾರ್ಮಿಕ, ಮಹಿಳೆ, ವಿದ್ಯಾರ್ಥಿ, ಯುವಜನರ, ಎಲ್ಲ ಜನರ ಚಳುವಳಿಗಳ ವರದಿಗಳಿಗೆ ಇಲ್ಲಿ ವಿಶೇಷ ಅವಕಾಶಗಳಿರುತ್ತವೆ. ಕೊರೊನಾ ಕಾಲದಲ್ಲಿ (ಪ್ರಮುಖವಾಗಿ ‘ಮುಖ್ಯವಾಹಿನಿ’) ಮಾಧ್ಯಮಗಳ ಪಾತ್ರದ ಕುರಿತು ವ್ಯಾಪಕವಾಗಿ ತೀಕ್ಷ್ಣ ವಿಮರ್ಶೆ ಕೇಳಿ ಬಂದಿದೆ.  ಮುಖ್ಯವಾಹಿನಿ ಮತ್ತು ಗಟರ್ ಸಾಮಾಜಿಕ ಮಾಧ್ಯಮಗಳು ಆಳುವವರ ಪರವಾದ – ಸಹಮತ, ಬದಲಿ ಸತ್ಯ, ಬದಲಿ ವಾಸ್ತವ – ಇವುಗಳ ಸಾಮೂಹಿಕ ಉತ್ಪಾದನೆಯಲ್ಲಿ ತೊಡಗಿವೆ. ಆಳುವವರ ಯಜಮಾನಿಕೆಯನ್ನು ಬಲಪಡಿಸುವ ಮತ್ತು ಜನವಿರೋಧಿಯಾದ ಫೇಕ್ ಪ್ರಚಾರವನು ಇವು ನಡೆಸುತ್ತವೆ ಎಂಬ ಟೀಕೆಗೆ ಒಳಗಾಗಿವೆ. ಹಾಗಾಗಿ ಪರ್ಯಾಯ ಮಾಧ್ಯಮವನ್ನು ರೂಪಿಸಬೇಕೆಂಬ ಕೂಗು ಕೇಳಿಬಂದಿದೆ. ಇಂತಹ ಪರ್ಯಾಯ ಮಾಧ್ಯಮದ ಪಾತ್ರವನ್ನು ನಿರ್ವಹಿಸಲು ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆ ಮತ್ತು ಅದರ ಇತರ ವಾಹಿನಿಗಳು ಮುಂದಾಗಿವೆ.

            ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆಯು ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15 ವರೆಗಿನ ಅವಧಿಯಲ್ಲಿ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ 2020 : ಕೊರೊನಾ ಕಾಲದಲ್ಲಿ ಮತ್ತು ನಂತರ”  ಈ ಲೋಕಾರ್ಪಣೆ ಸರಣಿ ಕಾರ್ಯಕ್ರಮಗಳ ಸಾಮಾನ್ಯ ಥೀಮ್ ಆಗಿರುತ್ತದೆ.    ಈ ಥೀಮ್ ಮತ್ತು ಈ ಕೆಳಗಿನ ಉಪ-ಥೀಮ್ ಗಳ ಸುತ್ತ ಬರಹಗಳನ್ನು ಪ್ರಕಟಿಸಲಾಗುತ್ತದೆ, ವೆಬಿನಾರ್ ನಡೆಸಲಾಗುತ್ತದೆ.

ಸಾರ್ವಜನಿಕ ಆರೋಗ್ಯ : ಕೊರೊನಾ ಕಾಲದಲ್ಲಿ ಮತ್ತು ನಂತರ
ವೈಜ್ಞಾನಿಕ ಮನೋವೃತ್ತಿ : ಕೊರೊನಾ ಕಾಲದಲ್ಲಿ ಮತ್ತು ನಂತರ
ಪ್ರದರ್ಶನ ಕಲೆಗಳು (ನಾಟಕ, ಸಿನಿಮಾ, ಸಂಗೀತ, ನೃತ್ಯ, ಜಾನಪದ) : ಕೊರೊನಾ ಕಾಲದಲ್ಲಿ ಮತ್ತು ನಂತರ
ಮಾನವ ಹಕ್ಕು/ಸ್ವಾತಂತ್ರ್ಯ : ಕೊರೊನಾ ಕಾಲದಲ್ಲಿ ಮತ್ತು ನಂತರ
ಸಾಮಾಜಿಕ ಭದ್ರತೆ : ಕೊರೊನಾ ಕಾಲದಲ್ಲಿ ಮತ್ತು ನಂತರ

‘ಪರ್ಯಾಯ ಮಾಧ್ಯಮ ಏಕೆ? ಹೇಗೆ?’

ಇವಲ್ಲದೆ
ಕೊರೊನಾ ಕಾಲದಲ್ಲಿ ಕಾಡಿದ
* ಕವನ/ಹಾಡುಗಳು * ಫೊಟೊಗಳು * ಕಾರ್ಟೂನುಗಳು

ಕೊರೊನಾ ಕಾಲದ ಮರೆಯಲಾಗದ ಅನುಭವ ಕಥನ – ಓದುಗರ ಬರಹಗಳು

ಕೊರೊನಾ ಕಾಲಕ್ಕೆ ಸೃಜನಶೀಲ ಸ್ಪಂದನ – ಸ್ಪರ್ಧೆಗಳು
* ಯುವಜನರಿಗೆ ಕತೆ /ಕವನ ಸ್ಪರ್ಧೆ * ಫೊಟೊ ಸ್ಪರ್ಧೆ * ವಿಡಿಯೊ ಸ್ಪರ್ಧೆ

ಇವುಗಳನ್ನು ಲೋಕಾರ್ಪಣೆ ಸರಣಿ ಕಾರ್ಯಕ್ರಮಗಳ  ಭಾಗವಾಗಿ ನಡೆಸಲಾಗುತ್ತದೆ

 

 

 

 

 

 

Donate Janashakthi Media

Leave a Reply

Your email address will not be published. Required fields are marked *