ವ್ಯಂಗ್ಯಚಿತ್ರ: ಪಿ.ಮಹಮ್ಮದ್/ಫೇಸ್‍ಬುಕ್
ಪ್ರಧಾನ ಮಂತ್ರಿಗಳ ಈ ತಿಂಗಳ ಮನ್ ಕೀ ಬಾತ್ ಮೊದಲ ಬಾರಿಗೆ ಬಹಳಷ್ಟು ವಿವಾದಗಳಿಗೆ ಒಳಗಾಗಿದೆ, ಅದರೊಳಗಿನ ವಿಚಾರಗಳ ಬಗ್ಗೆ ಅಲ್ಲ, ಅದರಲ್ಲಿ ಇಲ್ಲದ ವಿಷಯಗಳ ಬಗ್ಗೆ, ಸಾಮಾಜಿಕ ಮಾಧ್ಯಮಗಳ ಜೀವಾಳವೆನಿಸಿದ ‘ಡಿಸ್‌ಲೈಕ್’ಗಳಿಗೆ ಸಂಬAಧಪಟ್ಟAತೆ. ದೇಶದಲ್ಲಿ ಲಕ್ಷಾಂತರ ವೃತ್ತಿಪರ ಶಿಕ್ಷಣದ ಕನಸು ಕಾಣುತ್ತಿರುವ ಯುವಜನರು ಜಿಇಇ ಮತ್ತು ಎನ್‌ಇಇಟಿ ಪರೀಕ್ಷೆಗಳ ಬಗ್ಗೆ ಆತಂಕ ಪಡುತ್ತಿದ್ದಾಗ ಪ್ರಧಾನಿಗಳ ಮನಸ್ಸಿಗೆ ಈ ಆತಂಕ ತಟ್ಟಲೇ ಇಲ್ಲ ಎಂದು ಕ್ರುದ್ಧರಾದ ಯುವಜನರಿಂದ ಬಿಜೆಪಿ ಯೂ ಟ್ಯೂಬ್ ಚಾನೆಲ್‌ನಲ್ಲಿ ಅದರ ವೀಡಿಯೋಗೆ 24 ಗಂಟೆಗಳೊಳಗೆ 5 ಲಕ್ಷಕ್ಕೂ ಹೆಚ್ಚು ‘ಡಿಸ್‌ಲೈಕ್’ಗಳು ಬಂದವು ಎಂದು ಇಂಡಿಯನ್ ಎಕ್ಸ್ಪ್ರೆಸ್ (ಆಗಸ್ಟ್ 31)ವರದಿ ಮಾಡಿದೆ. ‘ಲೈಕ್’ಗಳ ಸಂಖ್ಯೆ ಕೇವಲ 79,000. ಇದು ಬಿಜೆಪಿಯ ಈ ಚಾನೆಲ್‌ನಲ್ಲಿ ಅತ್ಯಂತ ಹೆಚ್ಚು ‘ಡಿಸ್‌ಲೈಕ್’ಗಳಿಗೆ ಒಳಗಾದ ಭಾಷಣ ಎನ್ನಲಾಗಿದೆ. ‘ಪಿಎಂಒ ಇಂಡಿಯ’ ದಲ್ಲೂ ಡಿಸ್‍ಲೈಕ್ ಗಳ ಸಂಖ್ಯೆ 85 ಸಾವಿರವಾದರೆ, ಲೈಕ್‍ಗಳ ಸಂಖ್ಯೆ 39,000.
# ‘ಮನ್ ಕೀ ನಹೀಂ ಸ್ಟೂಡೆಂಟ್ ಕೀ ಬಾತ್’ ಎಂಬ ಟ್ವಿಟರ್ ಟ್ರೆಂಡ್ ಆಗಲಾರಂಭಿಸಿತು.
“ಅವರು ಉದ್ಯೋಗ, ಸಣ್ಣ ಉದ್ದಿಮೆಗಳು, ಶಿಕ್ಷಣದ ಬಗ್ಗೆ ಮಾತಾಡುವುದಿಲ್ಲ. ನೀವು ಭಾರತದ ಪ್ರಧಾನಿ, ನಮಗೆ ಮನದ ಮಾತು ಬೇಕಿಲ್ಲ, ನಿಮ್ಮನ್ನು ಯಾವುದಕ್ಕಾಗಿ ಆರಿಸಿದೇವೆಯೋ ಆ ಕರ್ತವ್ಯವನ್ನು ಮಾಡಿ’ ಎಂದೊಬ್ಬರು ಟಿಪ್ಪಣಿ ಮಾಡಿದ್ದಾರೆ.
“ವಿದ್ಯಾರ್ಥಿಗಳ ಬಗ್ಗೆ ಮಾತನಾಡ ಬೇಕಾದ ಸಮಯದಲ್ಲಿ ಅವರು ನಾಯಿಗಳ ತಳಿಗಳು ಮತ್ತು ಆಟಿಕೆಗಳ ಬಗ್ಗೆ ಮಾತಾಡುತ್ತಾರೆ” ಎಂದು ಇನ್ನೊಬ್ಬರು ಟಿಪ್ಪಣಿ ಮಾಡಿದ್ದಾರಂತೆ.
ಕ್ರುದ್ಧರಾದ ಬಿಜೆಪಿ ಐಟಿ ಸೆಲ್ ಮಂದಿ ಇದೆಲ್ಲ ಕಾಂಗ್ರೆಸ್‌ನ ಕುತಂತ್ರ ಎಂದಿದ್ದಾರೆ.
ಸಾಕುಪ್ರಾಣಿಗಳ, ಅದರಲ್ಲೂ ಶ್ವಾನತಳಿಗಳ ಮಾತು ಬಂದಾಗ ಪಂಜು ಗಂಗೊಳ್ಳಿಯವರಿಗೆ ದೇಶದ ಮಾಧ್ಯಮಗಳೇ ನೆನಪಿಗೆ ಬಂದಿವೆ.
“ಅವು ಅತ್ಯುತ್ತಮ ಸಾಕುಪ್ರಾಣಿಗಳು; ವಿಧೇಯರು; ತಮ್ಮ ಯಜಮಾನರುಗಳನ್ನು ಅತ್ಯಂತ ಜತನದಿಂದ ಕಾಯುವವರು”
ವ್ಯಂಗ್ಯಚಿತ್ರ: ಪಂಜು ಗಂಗೊಳ್ಳಿ/ಫೇಸ್‍ಬುಕ್
ಇನ್ನು ಪ್ರಧಾನಿಗಳಿಗೆ ವಿದ್ಯಾರ್ಥಿಗಳ ಬದಲು ಆಟಿಕೆಗಳ ಬಗ್ಗೆಯೇ ಏಕೆ ಮಾತನಾಡಬೇಕು ಎನಿಸಿತು ಎಂಬ ಗಹನ ಪ್ರಶ್ನೆಗೆ ಇನ್ನೊಬ್ಬ ವ್ಯಂಗ್ಯ ಚಿತ್ರಕಾರರಿಗೆ ಹೊಳೆದ ಉತ್ತರ ಹೀಗಿದೆ:
ಮಾತನಾಡಲು ಏನೂ ಇರಲಿಲ್ಲ. ಆಗ ನಿನ್ನನ್ನು ನೋಡಿದೆ ಎಂದು ತನ್ನ ಮನದ ಮಾತಿಗೆ ಪ್ರೇರಕನಾದ ‘ಭಕ್ತ’ನಿಗೆ ಹೇಳುತ್ತಾರೆ, ತನ್ನ ಮನದ ಮಾತಿನ ಮೂಲವನ್ನು ಬಿಚ್ಚಿಡುತ್ತಾರೆ!
(ವ್ಯಂಗ್ಯಚಿತ್ರ ಕೃಪೆ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ನಿಜ, ಕೊವಿಡ್ ಸೋಂಕಿತರ ಸಂಖ್ಯೆ 5 ಮಿಲಿಯ ಸಮೀಪಿಸುತ್ತಿದೆ. ಆದರೆ ಇದು ಕೊವಿಡ್ ಕೇಸ್‍ಗಳ ಗ್ರಾಫ್ ಅಲ್ಲ, ಮನ್‍ಕಿ ಬಾತ್‍ಗೆ ಡಿಸ್‍ಲೈಕ್‍ಗಳ ಸಂಖ್ಯೆ- ಇದೂ ಒಂದು ಮಿಲಿಯದ ಹತ್ತಿರ ಬಂದಿದೆ ಎಂದು ಪುಣೆಮಿರರ್. ಇಂಡಿಯ ಟೈಮ್ಸ್ (ಸಪ್ಟಂಬರ್ 3) ಹೇಳುತ್ತದೆ.
ವ್ಯಂಗ್ಯಚಿತ್ರ: ಅಲೋಕ್/ಫೇಸ್‍ಬುಕ್
ವಾಸ್ತವವಾಗಿ ಇದು ಮನದ ಮಾತೇ ಅಲ್ಲ, ಮನದ ಬೊಗಳೆ (ಬಕ್ವಾಸ್) ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರ.
ಇದು ಮನವರಿಕೆಯಾದಾಗ ಹೀಗೇ ಆಗುವುದು!