- ರಾಯಚೂರಿನ ಜನಪರ, ಎಡ ಚಳವಳಿಗಳ ಮುಂಚೂಣಿ ಹೋರಾಟಗಾರ
ರಾಯಚೂರು: ಹೋರಾಟಗಾರ, ಹಿರಿಯ ಕಾರ್ಮಿಕ ಮುಖಂಡ ಪುರುಷೋತ್ತಮ ಕಲಾಲಬಂಡಿ ಅವರು ಹೃದಯಘಾತದಿಂದು ಇಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಎಡಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಪುರುಷೋತ್ತಮ ಕಲಾಲಬಂಡಿಯವರು 1978ರಲ್ಲಿ ಎಸ್ ಎಫ್ ಐ ರಾಯಚೂರು ಜಿಲ್ಲಾ ಸಂಸ್ಥಾಪಕ ಅಧ್ಯಕ್ಷರಾಗಿ ಹೋರಾಟಕ್ಕೆ ಧುಮುಕಿದವರು.
ಸಿಐಟಿಯು, ಟಿಯುಸಿಐ ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಂದಾಳತ್ವದಲ್ಲಿ ಕಾರ್ಮಿಕರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದವರು. ರಾಯಚೂರು ಜಿಲ್ಲೆಯಲ್ಲಿ ಅನೇಕ ಹೋರಾಟಗಳನ್ನು ಕಟ್ಟಿ ಬೆಳೆಸಿದ್ದಾರೆ.ಈ ಭಾಗದ ನಿರುದ್ಯೋಗ ಯುವಕರಿಗೆ ಕೆಪಿಸಿಯಲ್ಲಿ ಉದ್ಯೋಗ ಕೊಡಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವಲ್ಲಿಯಶಸ್ವಿಯಾದವರು.ನೂರಾರು ಯುವಕರಿಗೆ ಹೋರಾಟದ ಮನೋಭಾವವನ್ನು ಬೆಳೆಸಲು ಕಾರಣರಾದವರು.
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಅಲ್ಲಿಯೂ ಜನ ಸಂಘಟನೆಯಲ್ಲಿ ತೊಡಗಿದ್ದರು. ಮೃತರು ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ.
ಸಂತಾಪ: ಹೋರಾಟಗಾರ ಪುರುಷೋತ್ತಮ ಕಲಾಲಬಂಡಿ ನಿಧನಕ್ಕೆ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಜನಸಂಗ್ರಾಮ ಪರಿಷತ್ ನ ರಾಘವೇಂದ್ರ ಕುಷ್ಟಗಿ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್, ಸೂರ್ಯೋದಯ ವಾಕಿಂಗ್ ಕ್ಲಬ್ ಅಧ್ಯಕ್ಷ ಬಿ.ಬಸವರಾಜ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ವಿವಿಧ ಸಂಘಟನೆಗಳ ಮುಖಂಡರಾದ ಗಂಗಾಧರ ಕುಷ್ಟಗಿ, ಮಲ್ಲಯ್ಯ ಜಾಲಹಳ್ಳಿ, ಸಿಪಿಐಎಂ ದೇವದುರ್ಗ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ, ನರಸಣ್ಣ ನಾಯಕ,ಲಿಂಗಣ್ಣ ಮಕಾಶಿ, ಸಿಐಟಿಯು ದೇವದುರ್ಗ ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಬಾಳೆ, ಕರಿಯಪ್ಪ ಅಚ್ಚೊಳ್ಳಿ, ಡಿ.ಎಸ್. ಶರಣಬಸವ, ಕೆ.ಜಿ.ವಿರೇಶ್, ಪರಪ್ಪ ನಾಗೋಲಿ , ಕೆ ಪಂಪಾಪತಿ. ಡಿ.ಜಿ.ಕೇಶವ, ಲಿಂಗಪ್ಪ ಪೂಜಾರಿ , ಆರ್ . ಬಸವರಾಜ , ತಾಯಣ್ಣ ಯಾರಗೇರ, ಎಸ್ .ರಾಮಣ್ಣ, ನಾಗರಾಜ ಮಡ್ಡಿಪೇಟ್ ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.