ಫೇಸ್‍ ಬುಕ್ ಮತ್ತು ಬಿಜೆಪಿ ನಂಟು

 

 

ಜಗತ್ತಿನ ಬಹುದೊಡ್ಡ ಕಂಪನಿಗಳಲ್ಲಿ ಒಂದಾದ ಸಾಮಾಜಿಕ ಮಾಧ್ಯಮ ಕ್ಷೇತ್ರದ ‘ಫೇಸ್‍ಬುಕ್’ ದ್ವೇಷ ಭಾಷಣಗಳನ್ನು ಕುರಿತಂತೆ ತನ್ನದೇ ನಿಯಮವನ್ನು ಭಾರತದಲ್ಲಿ ಅನುಸರಿಸುತ್ತಿಲ್ಲ  ಎಂದು ಅಮೆರಿಕಾದ ವಾಲ್‍ ಸ್ಟ್ರೀಟ್ ಜರ್ನಲ್‍ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ದೇಶದಲ್ಲಿ ಕೋಲಾಹಲ ಎಬ್ಬಿಸಿದೆ. ಭಾರತದಲ್ಲಿನ ಈ ಕಂಪನಿಯ ಮುಖ್ಯ ನಿರ್ವಾಹಕರುಗಳು ಈ ನಿಯಮಗಳನ್ನು ಅನುಸರಿಸಿದರೆ ಇಲ್ಲಿನ ಅಪಾರ ಪ್ರಮಾಣದ ವ್ಯವಹಾರಕ್ಕೆ, ಆಮೂಲಕ ಕಂಪನಿಯ ಲಾಭಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ತಮ್ಮದೇ ನಿಯಮವನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ಪಿ.ಮಹಮ್ಮದ್ ರವರ ಈ  ವ್ಯಂಗ್ಯಚಿತ್ರ(ಮಹಾಪಂಚ್‍, ಆಂದೋಲನ) ‘ಹೆಚ್‍.ಎಂ.ವಿ. ’ಗ್ರಾಮೋಫೋನ್‍ ಕಂಪನಿಯ ಪ್ರಸಿದ್ಧ ಲಾಂಛನ(ಹಿಸ್‍ ಮಾಸ್ಟರ್ಸ್ ವಾಯ್ಸ್ – ತನ್ನೊಡೆಯನ ದನಿ)ವನ್ನು ನೆನಪಿಸುತ್ತ ನಮ್ಮ ಆಳುವ ಪಕ್ಷ ಮತ್ತು ಫೇಸ್‍ಬುಕ್‍ ನಡುವಿನ ನಂಟಿನ ಸ್ವರೂಪದ ಬಗ್ಗೆ ಟಿಪ್ಪಣಿ ಮಾಡಿದೆ.

ಬಿಜೆಪಿ  ದಾಳಿಯೇ ಸ್ವರಕ್ಷಣೆಯ ಅತ್ಯುತ್ತಮ ದಾರಿ ಎಂಬ ತತ್ವಕ್ಕೆ ಅನುಗುಣವಾಗಿ ತನ್ನನ್ನು ಸಮರ್ಥಿಸಿಕೊಳ್ಲಲೋ, ಅಥವ ಪ್ರಶ್ನೆಯ ದಿಕ್ಕು ತಪ್ಪಿಸಲೋ, ಕಾಂಗ್ರೆಸ್‍ನ ಭೂತಕಾಲವನ್ನು ಕೆದಕಲು ಹೋಗಿದೆ, ಆಮೂಲಕ ಎರಡೂ ಪಕ್ಷಗಳ ಭೂತ-ವರ್ತಮಾನಗಳನ್ನು ನೆನಪಿಸಿಕೊಳ್ಳಲು ಅವಕಾಶವಾಗಿದೆ.

‘ಅಯ್ಯೋ ದೇವರೇ, ಇವರಿಬ್ಬರೂ ಒಂದೇ’- ‘ಫಸ್ಟ್ ಪೋಸ್ಟ್’ ನಲ್ಲಿ ಪ್ರಕಟವಾಗಿರುವ  ಮಂಜುಲ್‍ ಅವರ ಈ ಕಾರ್ಟೂನ್ ಇದನ್ನು ಬಿಂಬಿಸಿದೆ.

ಇಲ್ಲ, ಫೇಸ್‍ಬುಕ್‍ ನೊಂದಿಗೆ ಬಿಜೆಪಿ ಯ ಸಂಬಂಧ ಅಥವ ಶಾಮೀಲಿನ ಪ್ರಶ್ನೆಯೆ ಇಲ್ಲ, ಇದ್ದಿದ್ದರೆ ಫೇಸ್‍ ಬುಕ್‍’ನ ಒಡೆಯ ಮಾರ್ಕ್ ಝಕರ್‍ ಬರ್ಗ್ ಸಾಹೇಬರನ್ನು ರಾಜ್ಯಸಭೆಗೆ ಕಳಿಸುವ ಸುದ್ದಿ ಈಗಾಗಲೇ ಬರುತ್ತಿರಲಿಲ್ಲವೇ ?

ಎನ್ನುತ್ತಾರೆ  ಶೇಖರ  ಗುರೆರಾ ಅವರ  ಈ ಕಾರ್ಟೂನಿನ ಬಿಜೆಪಿ ಮುಖಂಡರು.

ರಾಜ್ಯಸಭಾ ಸದಸ್ಯತ್ವ ಎಂದರೆ ನ್ಯಾಯಾಂಗ, ಅದರ ಜತೆಗೇ ಭಾರತದ ಪ್ರಜಾಪ್ರಭುತ್ವದ ಪ್ರಮುಖ ಸ್ಥಂಭಗಳಾದ ಚುನಾವಣಾ ಆಯೋಗ, ಮಾಧ್ಯಮಗಳು ಮುಂತಾದವುಗಳ ನೆನಪಾಗಿ, ಈ ವ್ಯಂಗ್ಯಚಿತ್ರಕಾರರಂತೆ ನಮಗೂ  ಕಳೆದ ಕೇವಲ ಆರು ವರ್ಷಗಳಲ್ಲಿ ಎಂತಹ ಅಮೋಘ ಸಾಧನೆ ಎಂದನಿಸುತ್ತದೆಯೇ?

 

ವ್ಯಂಗ್ಯಚಿತ್ರ ಕೃಪೆ: ಇಂಡಿಯನ್‍ ಕಾರ್ಟೂನ್ ಗ್ಯಾಲರಿ

 

 

Donate Janashakthi Media

Leave a Reply

Your email address will not be published. Required fields are marked *