‘ಅಮಿತ್ ಶಾ ಅವರೇ, ಚೆಂಡು ನಿಮ್ಮ ಅಂಗಳದಲ್ಲಿದೆ’: ಅಮಿತ್ ಶಾಗೆ ನಾರ್ವೆ ಪತ್ರಕರ್ತೆಯ ನೇರ ಸವಾಲು!

Please follow and like us:
  • ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸ್‌ಗೆ ಭಾರತ ಪ್ರವೇಶ ನಿರಾಕರಣೆ.
  • ವೀಸಾ ನೀಡಿದ್ದರೂ ಕೊನೆಯ ಕ್ಷಣದಲ್ಲಿ ಪ್ರಯಾಣಕ್ಕೆ ತಡೆ.
  • ಅಮಿತ್ ಶಾ ಅವರಿಗೆ ನೇರವಾಗಿ ಮನವಿ ಮಾಡಿದ ಪತ್ರಕರ್ತೆ.
  • ಹೈದರಾಬಾದ್‌ನ ಭಾರತ್ ಶೃಂಗಸಭೆಯಲ್ಲಿ ಭಾಗವಹಿಸಬೇಕಿದ್ದ ಹೆಲ್ಲೆ.
  • ಪತ್ರಕರ್ತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

ನಾರ್ವೆ: ವೀಸಾ ನೀಡಿದ್ದರೂ ಭಾರತಕ್ಕೆ ಪ್ರವೇಶಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೇರವಾಗಿ ಸವಾಲು ಹಾಕಿದ್ದಾರೆ. ‘ಅಮಿತ್ ಶಾ ಅವರೇ, ಈ ಸಂದೇಶ ನಿಮಗಾಗಿಯೇ. ನಿಮಗೆ ಸಂಬಂಧವಿಲ್ಲದಿದ್ದರೆ ಬಿಟ್ಟುಬಿಡಿ‘ ಎಂದು ಹೇಳುವ ಮೂಲಕ ಆರಂಭಿಸಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಹೈದರಾಬಾದ್‌ನಲ್ಲಿ ನಡೆಯಲಿದ್ದ ಭಾರತ್ ಶೃಂಗಸಭೆಯಲ್ಲಿ ಭಾಗವಹಿಸಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಕುರಿತು ಮಾತನಾಡಲು ಹೆಲ್ಲೆ ಭಾರತಕ್ಕೆ ಬರಬೇಕಿತ್ತು. ಬುಧವಾರ ರಾತ್ರಿ ಓಸ್ಲೋದಿಂದ ವಿಮಾನ ಹತ್ತಲು ಸಿದ್ಧರಾಗಿದ್ದ ಅವರಿಗೆ, ವೀಸಾ ಇದ್ದರೂ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಭಾರತ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಇದರಿಂದ ಬೇಸರಗೊಂಡ ಅವರು ಅಮಿತ್ ಶಾ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

http://<blockquote class=”twitter-tweet”><p lang=”en” dir=”ltr”>I got a visa to India and was supposed to leave this morning to attend the Bharat Summit in Hyderabad. I had been invited as a panelist and speaker on the future of media and press freedom. But «orders from above» in the Ministry of Home Affairs have cancelled my visa. Here is my message for @AmitShah</p>&mdash; Helle Lyng (@HelleLyngSvends) <a href=”https://x.com/HelleLyngSvends/status/2120574710245146814?ref_src=twsrc%5Etfw”>November 11, 2026</a></blockquote> <script async src=”https://platform.x.com/widgets.js” charset=”utf-8″></script>

ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಭೇಟಿಯ ಸಂದರ್ಭದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೆಲ್ಲೆ ಪ್ರಶ್ನೆ ಕೇಳಲು ಪ್ರಯತ್ನಿಸಿದ್ದರು. ಮೋದಿ ಮತ್ತು ನಾರ್ವೆ ಪ್ರಧಾನಿ ಸಿದ್ಧಪಡಿಸಿದ ಹೇಳಿಕೆಗಳನ್ನು ಓದಿದ ಬಳಿಕ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ತೆರಳಿದ್ದರು. ಈ ವೇಳೆ ಹೆಲ್ಲೆ ಇಬ್ಬರು ನಾಯಕರನ್ನು ಲಿಫ್ಟ್‌ವರೆಗೂ ಹಿಂಬಾಲಿಸಿ, ಮಾಧ್ಯಮಗಳನ್ನು ಆಹ್ವಾನಿಸಿದ ಬಳಿಕ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದರು.

http://<blockquote class=”twitter-tweet”><p lang=”en” dir=”ltr”>Primeminister of India, Narendra Modi, would not take my question, I was not expecting him to. Norway has the number one spot on the World Press Freedom Index, India is at 157th, competing with Palestine, Emirates &amp; Cuba. It is our job to question the powers we cooperate with.</p>&mdash; Helle Lyng (@HelleLyngSvends) <a href=”https://x.com/HelleLyngSvends/status/2056349011213181063?ref_src=twsrc%5Etfw”>May 18, 2026</a></blockquote> <script async src=”https://platform.x.com/widgets.js” charset=”utf-8″></script>

ಇದನ್ನೂ ನೋಡಿ:  ಬೆಲೆ ಏರಿಕೆ ಬರೆ: ಕಾಂಗ್ರೆಸ್ ಸರ್ಕಾರಕ್ಕೆ CPI(M) ಖಡಕ್ ಎಚ್ಚರಿಕೆ! Janashakthi Media

ಬಳಿಕ ಭಾರತ ಸರ್ಕಾರದ ವಿರುದ್ಧದ ತಮ್ಮ ಟೀಕೆಗಳು, ಪ್ರಧಾನಿ ಮೋದಿ ಅವರ ನೀತಿಗಳ ಕುರಿತ ಬರಹಗಳು ಹಾಗೂ ಉದ್ಯಮಿಗಳೊಂದಿಗಿನ ಸರ್ಕಾರದ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗಳೇ ತಮ್ಮ ಪ್ರವೇಶ ನಿರಾಕರಣೆಗೆ ಕಾರಣವೇ ಎಂದು ಅವರು ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸೋನಿಯಾ ಆತ್ಮಕಥನದಲ್ಲಿ ಎಡಪಕ್ಷಗಳ ಕೊಡುಗೆಗೆ ಮನ್ನಣೆ: ಕೇರಳ ಕಾಂಗ್ರೆಸ್‌ಗೆ ಬ್ರಿಟ್ಟಾಸ್‌ ಕಿವಿಮಾತು

‘ನಿರ್ಧಾರ ಈಗ ನಿಮ್ಮ ಕೈಯಲ್ಲಿದೆ. ನಾವು ಇದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಅವಕಾಶ ನೀಡಿ‘ ಎಂದು ಹೆಲ್ಲೆ ಮನವಿ ಮಾಡಿದ್ದಾರೆ. ಈ ವಿಡಿಯೋ ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *