- ಪಶ್ಚಿಮ ಬಂಗಾಳದ ದೆಬ್ರಾ ಕ್ಷೇತ್ರದ ಬಿಜೆಪಿ ಶಾಸಕ ಸುಭಾಷಿಶ್ ಓಂ ಮೇಲೆ ಹಲ್ಲೆ ಆರೋಪ
- ಸಿಸಿಟಿವಿ ಸಾಕ್ಷ್ಯಾಧಾರದ ಮೇಲೆ ತನಿಖೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ತನ್ಮಯ್ ದಾಸ್ ಆಗ್ರಹ
- ಬಂಗಾಳದಲ್ಲಿ ವಸೂಲಿ ಮತ್ತು ಕೆಲವು ನಾಯಕರು ದಿಢೀರ್ ಹಣವಂತರಾಗಿರುವ ಬಗ್ಗೆ ಘರ್ಷಣೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ‘ವಸೂಲಿ’ ಮತ್ತು ಕೆಲವು ನಾಯಕರು ದಿಢೀರ್ ಶ್ರೀಮಂತರಾಗುತ್ತಿರುವ ವಿಚಾರವಾಗಿ ಬಿಜೆಪಿ ಕಾರ್ಯಕರ್ತರ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಈ ಹೊತ್ತಲ್ಲೇ ಮತ್ತೊಂದು ಸಮಸ್ಯೆ ತಲೆದೋರಿದೆ. ದೆಬ್ರಾ ಕ್ಷೇತ್ರದ ಬಿಜೆಪಿ ಶಾಸಕ ಸುಭಾಶಿಶ್ ಓಂ ಅವರ ಮೇಲೆ ಸ್ವಪಕ್ಷದವರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಅವರು ಆಸ್ಪತ್ರೆಗೆ ದಾಖಲಾಗಿರುವುದು ಆಂತರಿಕ ಕಲಹಕ್ಕೆ ತಾಜಾ ಉದಾಹರಣೆಯಾಗಿದೆ. ಬಿಜೆಪಿ ಬಿಜೆಪಿ
ಪಶ್ಚಿಮ ಬಂಗಾಳದ ದೆಬ್ರಾ ಕ್ಷೇತ್ರದ ಬಿಜೆಪಿ ಶಾಸಕ ಸುಭಾಷಿಶ್ ಓಂ ಅವರು ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದು, ತಮ್ಮದೇ ಪಕ್ಷದ ಆರು ಜನ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಇತರ ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದವರನ್ನು ತಡೆಯಲು ಹೋದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ. “ಪಕ್ಷದ ಮನ್ಸುಕುಗಳನ್ನು ಸಾರ್ವಜನಿಕವಾಗಿ ತೊಳೆಯಬಾರದು, ಇದು ಆಂತರಿಕ ವಿಷಯವಾಗಿರಬೇಕು ಹೊರತು ಪೊಲೀಸ್ ಠಾಣೆ ಮೆಟ್ಟಿಲೇರಬಾರದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಹಿಂದೆ ರಾಜ್ಯದಲ್ಲಿದ್ದ ಸುಲಿಗೆ ಸಂಸ್ಕೃತಿಯನ್ನು ಬಿಜೆಪಿ ಮುಗಿಸಲು ಹೊರಟಿರುವುದರಿಂದಲೇ ಪಕ್ಷದ ಒಳಗಿನ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಬ್ಬಿಗೆ ಟನ್ಗೆ ₹5,500 ಬೆಲೆ ನಿಗದಿಗೆ ರೈತರ ಪಟ್ಟು: ಬೇಡಿಕೆ ಈಡೇರದಿದ್ದರೆ ಬೃಹತ್ ಜೈಲ್ ಭರೋ ಹೋರಾಟ
ಸಿಸಿಟಿವಿ ಪರಿಶೀಲನೆಗೆ ಜಿಲ್ಲಾ ಅಧ್ಯಕ್ಷರ ಆಗ್ರಹ
ಬಿಜೆಪಿ ಶಾಸಕ ಸುಭಾಷಿಶ್ ಓಂ ಮಾಡಿರುವ ಆರೋಪದ ವಿರುದ್ಧ ಘಟಲ್ ಜಿಲ್ಲಾ ಬಿಜೆಪಿ ಅಧ್ಯಕ್ಷ ತನ್ಮಯ್ ದಾಸ್ ಹೀಗೆಳೆದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ, ಶಾಸಕರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಶಾಸಕರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಶಾಸಕರು ಆಸ್ಪತ್ರೆಗೆ ಬಂದಾಗ ಅವರ ತಲೆಗೆ ಯಾವುದೇ ಬ್ಯಾಂಡೇಜ್ ಇರಲಿಲ್ಲ, ಮಾಧ್ಯಮದವರು ಬರುವಷ್ಟರಲ್ಲಿ ಅವರು ಬೆಡ್ ಮೇಲೆ ಮಲಗಿ, ತಲೆಗೆ ಬ್ಯಾಂಡೇಜ್ ಹಾಕಿಕೊಂಡಿದ್ದರು ಎಂದು ದಾಸ್ ಲೇವಡಿ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ಅವರ ಮೇಲೆ ಯಾರು ಹಲ್ಲೆ ಮಾಡಿಲ್ಲ. ಪ್ರಾದೇಶಿಕ ಕಚೇರಿ, ದೆಬ್ರಾ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಎಂದು ಆಗ್ರಹಿಸಿದ್ದಾರೆ. ಇದರಿಂದ ನಿಜವಾಗಿಯೂ ಅಲ್ಲಿ ಏನಾಗಿದೆ ಎನ್ನುವ ಸತ್ಯಾಂಶ ಹೊರಬರಲಿದೆ.
https://x.com/diganta_guha/status/2117314207771414611?s=20
ಬಂಗಾಳ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು
ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಶಕಗಳ ನಂತರ ಭರ್ಜರಿ ಗೆಲುವು ಕಂಡುಕೊಂಡು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಈ ಮಧ್ಯೆ ಆಂತರಿಕ ಕಲಹ ಉಂಟಾಗಿರುವುದು ನಾನಾ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು ಮತ್ತು ಶಾಸಕರ ನಡುವಿನ ವಿವಾದಗಳು ಮುನ್ನೆಲೆಗೆ ಬರುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಶಾಸಕರಾದ ಅರ್ಜುನ್ ಸಿಂಗ್ ಮತ್ತು ಕೌಸ್ತುಬ್ ಬಾಗ್ಚಿ ನಡುವಿನ ಸಾರ್ವಜನಿಕ ಜಗಳ ಹಾಗೂ ಪೂರ್ವ ಬರ್ಮಾನ್ನ ಮೆಮಾರಿಯಲ್ಲಿ ವಾಹನ ನಿಲುಗಡೆ ವಿಚಾರವಾಗಿ ಶಾಸಕ ಮಾನಬ್ ಗುಹಾ ಪಕ್ಷದ ನಾಯಕನೊಬ್ಬನನ್ನು ಬೈದಿರುವ ಘಟನೆಗಳು ಪಕ್ಷಕ್ಕೆ ಮುಜುಗರ ತಂದಿವೆ. ಬಿಜೆಪಿ
ಬಿಜೆಪಿ ವರ್ಸಸ್ ಬಿಜೆಪಿ?
ಬಿಜೆಪಿ ವಿರುದ್ಧವೇ ಬಿಜೆಪಿ ವಿರೋಧ ಪಕ್ಷಗಳು ಒಂದು ದಿನ ಬಿಡುವು ತೆಗೆದುಕೊಂಡರೆ, ಪಶ್ಚಿಮ ಬಂಗಾಳ ಬಿಜೆಪಿಯೇ ತನ್ನೊಂದಿಗೆ ಹೋರಾಡಲು ಸಮರ್ಥವಾಗಿರುವಂತೆ ತೋರುತ್ತದೆ!. ದೆಬ್ರಾದಲ್ಲಿ, ಸ್ಥಳೀಯ ವಸೂಲಿ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ಬಿಜೆಪಿ ಶಾಸಕ ಸುಭಾಷಿಶ್ ಓಂ ಮಧ್ಯಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ. ತಲೆಗೆ ಬ್ಯಾಂಡೇಜ್ ಹಾಕಿಕೊಂಡಿದ್ದ ಓಂ ಅವರನ್ನು ನಂತರ ದೆಬ್ರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ನಾಟಕ ಅಲ್ಲಿಗೆ ಮುಗಿಯಲಿಲ್ಲ. ಬಿಜೆಪಿ ಜಿಲ್ಲಾ ಅಧ್ಯಕ್ಷ ತನ್ಮಯ್ ದಾಸ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ತಲೆಯ ಮೇಲಿನ ಬ್ಯಾಂಡೇಜನ್ನು ಪ್ರಶ್ನಿಸಿ, ಪಕ್ಷದ ಆಂತರಿಕ ಕಲಹವನ್ನು ಸಾರ್ವಜನಿಕ ವಲಯಕ್ಕೆ ತಂದಿದ್ದಕ್ಕಾಗಿ ಶಾಸಕರನ್ನು ಟೀಕಿಸಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದಾರೆ
ಇದನ್ನೂ ನೋಡಿ: ಪುಸ್ತಕ ಕಂಡರೆ ಭಯವೇ? ಬಂಗಾಳದಲ್ಲಿ ಬಿಜೆಪಿಯ ದ್ವೇಷ ರಾಜಕಾರಣ! Janashakthi Media
