ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 71 ಸಾಧಕರಿಗೆ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ನವೆಂಬರ್ 1ರಂದು ನಡೆಯಲಿರುವ 71ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಾಜ್ಯೋತ್ಸವ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಕ್ಟೋಬರ್ 30ರಂದು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ಜಾನಪದ, ಸಂಗೀತ, ನೃತ್ಯ, ಚಲನಚಿತ್ರ, ಯಕ್ಷಗಾನ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕೃಷಿ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ, ಸಮಾಜ ಸೇವೆ, ವೈದ್ಯಕೀಯ, ಆಡಳಿತ, ಸಾಹಿತ್ಯ, ಶಿಕ್ಷಣ, ನ್ಯಾಯಾಂಗ ಹಾಗೂ ಕ್ರೀಡಾ ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಬಾರಿಯ ಪ್ರಶಸ್ತಿ ಪುರಸ್ಕೃತರಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಾಹಿತಿ ಡಾ. ಇಂದಿರಾ ಹೆಗಡೆ, ವಿಜ್ಞಾನಿ ಡಾ. ರಾಜಶೇಖರ ಮೂರ್ತಿ, ಪತ್ರಕರ್ತ ಡಿ. ಉಮಾಪತಿ, ಮಾಧ್ಯಮ ಮತ್ತು ಛಾಯಾಚಿತ್ರ ಕ್ಷೇತ್ರದ ವಿಶ್ವನಾಥ್ ಸುವರ್ಣ, ತುಳು ಒಕ್ಕೂಟದ ಎ.ಸಿ. ಭಂಡಾರಿ, ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ ಸೇರಿದಂತೆ ಹಲವು ಗಣ್ಯರು ಸೇರಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರ ಜೊತೆಗೆ ಕೆನಡಾ ಮತ್ತು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೂ ಈ ಬಾರಿಯ ಪ್ರಶಸ್ತಿ ಸಂದಿದೆ.
ಇದನ್ನೂ ಓದಿ : ಹಣದುಬ್ಬರಕ್ಕೆ ಮೋದಿ ಹೊಣೆ, ಡಿ.ಕೆ. ಶಿವಕುಮಾರ್ ಅಲ್ಲ: ಪ್ರಿಯಾಂಕ್ ಖರ್ಗೆ
ಪ್ರಕಟಗೊಂಡಿರುವ ಕ್ಷೇತ್ರವಾರು ಪ್ರಮುಖ ಸಾಧಕರು ಮತ್ತು ಅವರ ಜಿಲ್ಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ
-
- ಶ್ರೀ ದಾವಲಸಾಬ ಅತ್ತಾರ — ಕೊಪ್ಪಳ
- ಶ್ರೀಮತಿ ಗೌರಮ್ಮ — ಚಾಮರಾಜನಗರ
- ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ — ಗನದ
- ಶ್ರೀ ಎ.ಆರ್. ಸತ್ಯನಾರಾಯಣ — ಬೆಂಗಳೂರು ದಕ್ಷಿಣ
- ಶ್ರೀ ಈರಣ್ಣ ರುದ್ರಾಕ್ಷಿ — ರಾಯಚೂರು
- ಶ್ರೀ ಶಿವಲಿಂಗಪ್ಪ ಎಂ. — ಕೊಪ್ಪಳ
- ಶ್ರೀ ಸುರೇಶ ರಾಮಚಂದ್ರ ಜೋಶಿ — ವಿಜಯಪುರ
-
- ಡಾ. ಸಿ.ಎ. ಶ್ರೀಧರ್ — ಮೈಸೂರು
- ಡಾ. ಎ. ನಾರಾಯಣ ಸ್ವಾಮಿ — ಹಾಸನ
- ಶ್ರೀ ವಿ. ಮುರಳಿ — ಬೆಂಗಳೂರು ಗ್ರಾಮಾಂತರ
-
- ಡಾ. ಸತ್ಯನಾರಾಯಣ ರಾಜು — ಬೆಂಗಳೂರು ನಗರ
-
- ಶ್ರೀ ಅಶೋಕ್ (ಹಿರಿಯ ನಟ) — ಬೆಂಗಳೂರು ಗ್ರಾಮಾಂತರ
- ಶ್ರೀ ಕೆ. ವೆಂಕಟರಮಣ (ಬಾಬಾಜಿ) — ಧಾರವಾಡ
- ಶ್ರೀ ಕೆ.ಎಸ್. ರವೀಂದ್ರನಾಥ್ — ಬೆಂಗಳೂರು ನಗರ
-
- ಶ್ರೀ ಗೋಪಾಲ ಗಾಣಿಗ (ಯಕ್ಷಗಾನ) — ಉಡುಪಿ
- ಶ್ರೀಮತಿ ಹುಲಿಗೆಮ್ಮ (ಬಯಲಾಟ) — ಬಳ್ಳಾರಿ
-
- ಶ್ರೀ ಎ.ವಿ. ರವಿ (ಜಿಮ್ ರವಿ – ದೇಹದಾರ್ಢ್ಯ) — ಕೋಲಾರ
- ಡಾ. ಎ.ಬಿ. ಸುಬ್ಬಯ್ಯ (ಹಾಕಿ) — ಕೊಡಗು
- ಶ್ರೀ ಎಂ. ಗಿರೀಶ್ — ಬೆಂಗಳೂರು
-
- ಇಂದಿರಾ ಹೆಗ್ಗಡೆ (ಹಿರಿಯ ಲೇಖಕಿ) — ದಕ್ಷಿಣ ಕನ್ನಡ
- ಡಿ. ಉಮಾಪತಿ (ಹಿರಿಯ ಪತ್ರಕರ್ತರು) — ಮಾಧ್ಯಮ ಕ್ಷೇತ್ರ
-
- ಕಾಗೋಡು ತಿಮ್ಮಪ್ಪ (ಹಿರಿಯ ರಾಜಕಾರಣಿ) — ಶಿವಮೊಗ್ಗ
- ಬಿ.ವಿ. ಆಚಾರ್ಯ (ಹಿರಿಯ ನ್ಯಾಯವಾದಿಗಳು) — ಉಡುಪಿ
- ತೆರೇಸಾ ಭಟ್ಟಾಚಾರ್ಯ (ಮಾಜಿ ಮುಖ್ಯ ಕಾರ್ಯದರ್ಶಿ) — ಆಡಳಿತ ಕ್ಷೇತ್ರ
- ಪ್ರಸಾದ್ ಬಿದ್ದಪ್ಪ — ಫ್ಯಾಷನ್ ಕ್ಷೇತ್ರ
- ಡಾ. ಫಾ. ಜೋಸೆಫ್ ಸಿ. ಸಿ. (ಶಿಕ್ಷಣ ಕ್ಷೇತ್ರ – ಕ್ರೈಸ್ಟ್ ವಿವಿ ಉಪಕುಲಪತಿ) — ಬೆಂಗಳೂರು
- ಸಂಗೀತಾ ಎನ್. ಕಟ್ಟಿಮನಿ — ಶಿಕ್ಷಣ ಕ್ಷೇತ್ರ
- ಶ್ರೀ ರಮೇಶ್ ಆರ್. ಗೌಡ (ಮಾಜಿ ಅಧ್ಯಕ್ಷರು, ಅಕ್ಕ) — ಅಮೆರಿಕ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2026.pdf ಓಪನ್ ಮಾಡಿ
ಇದನ್ನೂ ನೋಡಿ : ಎಸ್ಐಆರ್ ಕರ್ನಾಟಕ | ಪತ್ತೆಯಾದ ವಿದೇಶಿ ಪ್ರಜೆಗಳೆಷ್ಟು? ಬಾಂಗ್ಲಾದೇಶದವರು ಎಷ್ಟು? Janashakthi Media
