ಸೌಜನ್ಯ ಪ್ರಕರಣ: SIT ಪುನರ್‌ರಚನೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡವನ್ನು (SIT) ಪುನರ್‌ರಚಿಸಬೇಕು ಎಂದು ಆಗ್ರಹಿಸಿ ಕೊಂದವರು ಯಾರು? ಆಂದೋಲನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಿತು. ಸೌಜನ್ಯ

ಸೌಜನ್ಯ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ SITಯಲ್ಲಿ ವಿವಾದಾಸ್ಪದ ಅಧಿಕಾರಿಗಳನ್ನು ಸೇರ್ಪಡೆಗೊಳಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಆಶಯಕ್ಕೆ ಅನುಗುಣವಾಗಿ ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಮರುತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ವಿವಾದಿತ ಅಧಿಕಾರಿಗಳ ಸೇರ್ಪಡೆಗೆ ಆಕ್ಷೇಪ

SITಗೆ ಸೇರ್ಪಡೆಗೊಳಿಸಲಾಗಿರುವ ಎಸ್ಪಿ ವೆಂಕಟೇಶ್ ಪ್ರಸನ್ನ ಅವರ ವಿರುದ್ಧ ವಿವಿಧ ಪ್ರಕರಣಗಳು ಹಾಗೂ ಗಂಭೀರ ಆರೋಪಗಳ ಕುರಿತು ಇಲಾಖಾ ತನಿಖೆಗಳು ನಡೆದಿದ್ದವು ಎಂದು ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಯನ್ನು ಸೌಜನ್ಯ ಪ್ರಕರಣದ ಮರುತನಿಖಾ ತಂಡದಲ್ಲಿ ಸೇರಿಸಿರುವುದು ಸುಪ್ರೀಂ ಕೋರ್ಟ್‌ನ ಆದೇಶದ ಮೂಲ ಆಶಯಕ್ಕೆ ವಿರುದ್ಧವಾಗಬಹುದು ಎಂದು ಆಂದೋಲನ ಆತಂಕ ವ್ಯಕ್ತಪಡಿಸಿದೆ. ಸೌಜನ್ಯ

ಇದನ್ನೂ ಓದಿ : ಸೌಜನ್ಯ ಪ್ರಕರಣದ ಮರುತನಿಖೆಗೆ ಎಸ್‌ಐಟಿ ರಚನೆ

SIT ಪುನರ್‌ರಚನೆಗೆ ಮೂರು ಪ್ರಮುಖ ಮಾನದಂಡ

ಮರುರಚಿಸಲಾಗುವ SITಗೆ ಅಧಿಕಾರಿಗಳ ಆಯ್ಕೆಯಲ್ಲಿ ಮೂರು ಅಂಶಗಳನ್ನು ಪಾಲಿಸಬೇಕು ಎಂದು ಆಂದೋಲನ ಒತ್ತಾಯಿಸಿದೆ.

  • ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ DG ಅಥವಾ ADGP ದರ್ಜೆಯ ಅಧಿಕಾರಿಯನ್ನು SIT ಮುಖ್ಯಸ್ಥರನ್ನಾಗಿ ನೇಮಿಸಬೇಕು.
  • ತನಿಖಾ ತಂಡದಲ್ಲಿ ಫೊರೆನ್ಸಿಕ್ ಪರಿಣತಿ ಹೊಂದಿರುವ ಅಧಿಕಾರಿಗಳನ್ನು ಒಳಗೊಳ್ಳಬೇಕು.
  • ಭ್ರಷ್ಟಾಚಾರ, ಕರ್ತವ್ಯಲೋಪ, ಮಹಿಳೆಯರ ವಿಚಾರದಲ್ಲಿ ಅಸೂಕ್ಷ್ಮತೆ ಹಾಗೂ ಕೋಮುವಾದಿ ಶಕ್ತಿಗಳೊಂದಿಗೆ ನೇರ ಸಂಪರ್ಕದ ಆರೋಪಗಳನ್ನು ಹೊಂದಿರುವ ಅಧಿಕಾರಿಗಳನ್ನು ತಂಡದಿಂದ ದೂರವಿಡಬೇಕು.

ಸೌಜನ್ಯ ಪ್ರಕರಣದ ಮರುತನಿಖೆಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖಾ ತಂಡ ಅಗತ್ಯವಾಗಿದ್ದು, ಯಾವುದೇ ಸ್ಥಳೀಯ ಪ್ರಭಾವ ಅಥವಾ ಹಿಂದಿನ ತನಿಖೆಯ ಲೋಪಗಳಿಗೆ ಒಳಗಾಗದ ಅಧಿಕಾರಿಗಳನ್ನು ನೇಮಿಸಬೇಕು ಎಂದು ‘ಕೊಂದವರು ಯಾರು?’ ಆಂದೋಲನ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಗೌರಮ್ಮ, ಜ್ಯೋತಿ ಅನಂತಸುಬ್ಬರಾವ್, ಮಧು ಭೂಷಣ್, ಮಲ್ಲಿಗೆ ಹಾಗೂ ಮಮತಾ ಯಜಮಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಬೇಕು ಹಾಗೂ ಪ್ರಕರಣದ ನೈಜ ಅಪರಾಧಿಗಳನ್ನು ಪತ್ತೆಹಚ್ಚಲು ಯಾವುದೇ ಪ್ರಭಾವಕ್ಕೆ ಒಳಗಾಗದ ತನಿಖೆ ನಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸೌಜನ್ಯ

ಇದನ್ನೂ ನೋಡಿ : ಸೌಜನ್ಯ ಪ್ರಕರಣಕ್ಕೆ ಮರುಜೀವ! | ಮತ್ತೆ ಚಿಗುರಿದ ನ್ಯಾಯದ ನಿರೀಕ್ಷೆ Janashakthi Media

Donate Janashakthi Media

Leave a Reply

Your email address will not be published. Required fields are marked *