ಸೆ.28ರಿಂದ ಬ್ಯಾಂಕ್‌ ನೌಕರರ ಮುಷ್ಕರ – ವಾರಕ್ಕೆ 5 ದಿನ ಕೆಲಸಕ್ಕೆ ಆಗ್ರಹ

ಬೆಂಗಳೂರು: ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್‌ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್‌ (UFBU) ಸೆಪ್ಟೆಂಬರ್‌ 28, 29 ಮತ್ತು 30ರಂದು ಅಖಿಲ ಭಾರತ ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿದೆ. ಬೇಡಿಕೆಗಳು ಈಡೇರದಿದ್ದರೆ ಅಕ್ಟೋಬರ್‌ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘಟನೆ ಎಚ್ಚರಿಸಿದೆ. ಸೆ.28

ಮುಷ್ಕರದ ಭಾಗವಾಗಿ ಶುಕ್ರವಾರ ಬ್ಯಾಂಕ್‌ ಆಫ್‌ ಇಂಡಿಯಾ ಕಚೇರಿ ಆವರಣದಲ್ಲಿ ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಯಿತು.

UFBUಯಲ್ಲಿ ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳ ಏಳು ಸಂಘಟನೆಗಳು ಒಳಗೊಂಡಿದ್ದು, ಸಾರ್ವಜನಿಕ, ಖಾಸಗಿ, ವಿದೇಶಿ, ಪ್ರಾದೇಶಿಕ ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್‌ಗಳ ಶೇ.90ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪ್ರತಿನಿಧಿಸುತ್ತದೆ ಎಂದು ಸಂಘಟನೆ ತಿಳಿಸಿದೆ.

ವಾರಕ್ಕೆ ಐದು ದಿನ ಕೆಲಸದ ಬೇಡಿಕೆ

ಬ್ಯಾಂಕ್‌ಗಳಲ್ಲಿ ಉಳಿದ ಶನಿವಾರಗಳನ್ನೂ ರಜಾದಿನಗಳಾಗಿ ಘೋಷಿಸಿ ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. 2015ರ ಒಪ್ಪಂದದಲ್ಲಿ ತಿಂಗಳ 2ನೇ ಮತ್ತು 4ನೇ ಶನಿವಾರಗಳನ್ನು ರಜೆಯಾಗಿ ಘೋಷಿಸಲಾಗಿತ್ತು. ಉಳಿದ ಶನಿವಾರಗಳನ್ನೂ ಹಂತಹಂತವಾಗಿ ರಜೆಯನ್ನಾಗಿ ಮಾಡುವ ಭರವಸೆ ನೀಡಲಾಗಿತ್ತು ಎಂದು UFBU ಹೇಳಿದೆ.

2024ರ ಮಾರ್ಚ್‌ನಲ್ಲಿ ನಡೆದ ವೇತನ ಪರಿಷ್ಕರಣೆ ಒಪ್ಪಂದದಲ್ಲಿ ಉಳಿದ ಶನಿವಾರಗಳನ್ನು ರಜೆಯನ್ನಾಗಿ ಮಾಡುವ ಬಗ್ಗೆ ಒಪ್ಪಿಗೆ ವ್ಯಕ್ತವಾಗಿದ್ದು, ಇದಕ್ಕೆ ಬದಲಾಗಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ನೌಕರರ ಸಂಘಟನೆಗಳು ಒಪ್ಪಿಕೊಂಡಿದ್ದವು. ಈ ಪ್ರಸ್ತಾವನೆಗೆ ಕೇಂದ್ರ ಹಣಕಾಸು ಸಚಿವಾಲಯದ ಅನುಮೋದನೆ ಬಾಕಿಯಿದ್ದು, ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ನಿರ್ಧಾರವಾಗಿಲ್ಲ ಎಂದು UFBU ಆರೋಪಿಸಿದೆ.

ಗ್ರಾಹಕರ ಬ್ಯಾಂಕಿಂಗ್‌ ಸೇವೆಯ ಸಮಯದಲ್ಲಿ ಯಾವುದೇ ಕಡಿತವಾಗುವುದಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ 40 ನಿಮಿಷ ಹೆಚ್ಚುವರಿ ಕೆಲಸ ಮಾಡುವುದರಿಂದ ಅದನ್ನು ಸರಿದೂಗಿಸಲಾಗುವುದು ಎಂದು ಸಂಘಟನೆ ತಿಳಿಸಿದೆ.ಸೆ.28

ಇದನ್ನೂ ಓದಿ : ಎಸ್.ಐ.ಆರ್ ರದ್ದುಪಡಿಸಲು ಆಗ್ರಹ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ 48 ಗಂಟೆಗಳ ಗಡುವು

ಬಾಕಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

2024ರ ವೇತನ ಒಪ್ಪಂದದಲ್ಲಿ ಪರಿಹಾರವಾಗದೆ ಉಳಿದಿರುವ ಹಲವು ಬೇಡಿಕೆಗಳನ್ನೂ UFBU ಮುಂದಿಟ್ಟಿದೆ. ಬ್ಯಾಂಕ್‌ಗಳಲ್ಲಿ ಅಗತ್ಯ ಸಂಖ್ಯೆಯ ಕ್ಲೆರಿಕಲ್‌ ಮತ್ತು ಸಬ್‌-ಸ್ಟಾಫ್‌ ನೇಮಕಾತಿ, NPS ಬದಲಿಗೆ OPS ಜಾರಿ, NPSಗೆ ಬ್ಯಾಂಕ್‌ಗಳ ಹೆಚ್ಚುವರಿ ಶೇ.4ರ ಕೊಡುಗೆಗೆ ಆದಾಯ ತೆರಿಗೆ ವಿನಾಯಿತಿ, ಗ್ರ್ಯಾಚ್ಯುಟಿ ಮಿತಿಯ ಹೆಚ್ಚಳ, ಪಿಂಚಣಿ ಪರಿಷ್ಕರಣೆ, ಪಿಂಚಣಿದಾರರಿಗೆ ಸಮಾನ DA, ಹಳೆಯ ಪಿಂಚಣಿದಾರರಿಗೆ ಎಕ್ಸ್‌ಗ್ರೇಷಿಯಾ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳು ಇನ್ನೂ ಬಾಕಿ ಉಳಿದಿವೆ ಎಂದು ಸಂಘಟನೆ ಹೇಳಿದೆ. ಸೆ.28

ಸೆಪ್ಟೆಂಬರ್‌ 22ರಂದು ಉಪ ಮುಖ್ಯ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಹಣಕಾಸು ಸಚಿವಾಲಯದ ಅಧಿಕಾರಿಗಳೂ ಭಾಗವಹಿಸಿದ್ದರು. ಆದರೆ ಐದು ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಖಚಿತ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಮುಷ್ಕರವನ್ನು ತಪ್ಪಿಸಲು ಒಮ್ಮತ ಮೂಡಲಿಲ್ಲ ಎಂದು UFBU ತಿಳಿಸಿದೆ.

ಮುಷ್ಕರದ ದಿನಗಳಲ್ಲಿ ಎಲ್ಲಾ ಬ್ಯಾಂಕ್‌ ಶಾಖೆಗಳು ಮುಚ್ಚಲಿದ್ದು, ಯಾವುದೇ ಬ್ಯಾಂಕಿಂಗ್‌ ಸೇವೆ ಲಭ್ಯವಿರುವುದಿಲ್ಲ ಎಂದು UFBU ಕರ್ನಾಟಕ ರಾಜ್ಯ ಘಟಕ ತಿಳಿಸಿದೆ. ಸೆ.28

ಇದನ್ನೂ ನೋಡಿ : ಎಸ್‌ಐಆರ್‌ ಎಡವಟ್ಟು | ಬಯಲಾಯ್ತು ಅಸಲಿ ಗುಟ್ಟು – ಜನಪರ ನಟ ಕಿಶೋರ್‌ ಕುಮಾರ್‌ ಜೊತೆ ಕೆ.ಎಸ್‌ ವಿಮಲಾ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *