UPI ಶುಲ್ಕಕ್ಕೆ ವಿರೋಧ | ‘ಇದು ನೇರ ದರೋಡೆ’ ಎಂದ ಅಭಿಜೀತ್ ದಿಪ್ಕೆ

ನವದೆಹಲಿ: ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ UPI ವಹಿವಾಟುಗಳಿಗೆ ಹೊಸದಾಗಿ Merchant Discount Rate (MDR) ಜಾರಿಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. Cockroach Janta Party (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ, ಹೊಸ ಶುಲ್ಕ ವ್ಯವಸ್ಥೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. UPI 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, UPI ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ನಿರ್ಧಾರವನ್ನು ‘ನೇರ ದರೋಡೆ’ ಎಂದು ಟೀಕಿಸಿದರು. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ದೇಶವನ್ನು ನಗದುರಹಿತ ಆರ್ಥಿಕತೆಯತ್ತ ಕೊಂಡೊಯ್ಯುವ ಅಗತ್ಯವನ್ನು ಸರ್ಕಾರ ಪ್ರತಿಪಾದಿಸಿತ್ತು. ಜನರು ಅದನ್ನು ಸ್ವೀಕರಿಸಿ ಡಿಜಿಟಲ್ ಪಾವತಿಗಳನ್ನು ವ್ಯಾಪಕವಾಗಿ ಬಳಸುತ್ತಿರುವ ಸಂದರ್ಭದಲ್ಲಿ ಇದೀಗ ಅದೇ ವ್ಯವಸ್ಥೆಯ ಮೇಲೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

“ಜನರು ನಗದುರಹಿತ ಆರ್ಥಿಕತೆಯನ್ನು ಅಳವಡಿಸಿಕೊಂಡ ನಂತರ ಅದರ ಮೇಲೆಯೇ ಶುಲ್ಕ ವಿಧಿಸುವುದು ಸರಿಯಲ್ಲ. UPI ಮೇಲಿನ ಈ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ದಿಪ್ಕೆ ಆಗ್ರಹಿಸಿದ್ದಾರೆ.

ಪ್ರಸ್ತುತ ಜಾರಿಗೊಳಿಸಿರುವ ನಿಯಮದಂತೆ, ಅಕ್ಟೋಬರ್ 15ರಿಂದ ₹2,000ಕ್ಕಿಂತ ಹೆಚ್ಚಿನ Person-to-Merchant (P2M) UPI ಪಾವತಿಗಳಿಗೆ ಶೇ.0.4ರಷ್ಟು MDR ವಿಧಿಸಲಾಗುತ್ತದೆ. ₹75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಈ ಶುಲ್ಕ ಗರಿಷ್ಠ ₹300ಕ್ಕೆ ಸೀಮಿತವಾಗಿರಲಿದೆ. ಉದಾಹರಣೆಗೆ, ₹3,000 ಪಾವತಿಗೆ ₹12 ಹಾಗೂ ₹50,000 ಪಾವತಿಗೆ ₹200 MDR ಅನ್ವಯವಾಗಲಿದೆ. ಆದರೆ ಈ ಶುಲ್ಕವನ್ನು ಗ್ರಾಹಕರಿಂದ ನೇರವಾಗಿ ವಸೂಲಿ ಮಾಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. UPI 

ಇದನ್ನೂ ಓದಿ : ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿ | 4 ಕಿ.ಮೀ.ಗೆ 2.5 ಗಂಟೆ, ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಪರದಾಟ

ಸಣ್ಣ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ಕೂಡ ಆಕ್ಷೇಪಗಳು ವ್ಯಕ್ತವಾಗಿವೆ. ಸಾಮಾನ್ಯ ವ್ಯಾಪಾರದ ಹಲವು ವಹಿವಾಟುಗಳು ₹2,000ಕ್ಕಿಂತ ಹೆಚ್ಚಾಗುವ ಹಿನ್ನೆಲೆಯಲ್ಲಿ MDR ತಮ್ಮ ವ್ಯವಹಾರದ ವೆಚ್ಚವನ್ನು ಹೆಚ್ಚಿಸಬಹುದು ಎಂದು ವ್ಯಾಪಾರಿ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

UPI ವ್ಯವಸ್ಥೆಯನ್ನು ದೀರ್ಘಕಾಲಿಕವಾಗಿ ನಿರ್ವಹಿಸಲು ಅಗತ್ಯವಿರುವ ಮೂಲಸೌಕರ್ಯ, ಸೈಬರ್ ಭದ್ರತೆ, ನವೀನತೆ ಹಾಗೂ ಗ್ರಾಹಕ ಸೇವೆಗಳಿಗೆ ಆದಾಯದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ MDR ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಮತ್ತು NPCI ಹೇಳಿವೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ವಹಿವಾಟುಗಳು ಹಾಗೂ ಕೆಲವು ಕಡಿಮೆ ಮೊತ್ತದ ವ್ಯಾಪಾರಿ ಪಾವತಿಗಳು ಶುಲ್ಕದಿಂದ ಹೊರಗಿರಲಿವೆ.

ಆದರೆ ಹೊಸ ಶುಲ್ಕ ವ್ಯವಸ್ಥೆ ಡಿಜಿಟಲ್ ಪಾವತಿಗಳ ಬಳಕೆಯನ್ನು ಉತ್ತೇಜಿಸುವ ಸರ್ಕಾರದ ಹಿಂದಿನ ನೀತಿಗೆ ವಿರುದ್ಧವಾಗಿದೆ ಎಂಬ ಟೀಕೆಗಳು ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ UPI ಮೇಲಿನ ಹೊಸ ಶುಲ್ಕವನ್ನು ಹಿಂಪಡೆಯುವಂತೆ ಅಭಿಜೀತ್ ದಿಪ್ಕೆ ಸೇರಿದಂತೆ ವಿರೋಧ ವ್ಯಕ್ತಪಡಿಸುತ್ತಿರುವವರು ಒತ್ತಾಯಿಸಿದ್ದಾರೆ. UPI 

ಇದನ್ನೂ ನೋಡಿ : SIR | 14 ಕೋಟಿ ಮತದಾರರ ಹೆಸರು ಡಿಲೀಟ್‌? ಮತದಾನದ ಹಕ್ಕಿಗೇ ಕತ್ತರಿ! | Janashakthi Media

Donate Janashakthi Media

Leave a Reply

Your email address will not be published. Required fields are marked *