ಎಸ್‌ಐಆರ್‌ ಕರ್ತವ್ಯದಲ್ಲಿರುವ ಚುನಾವಣಾ ಸಿಬ್ಬಂದಿಗೆ ₹6,000 ವಿಶೇಷ ಗೌರವಧನ ಘೋಷಿಸಿದ ಚುನಾವಣಾ ಆಯೋಗ

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision–SIR) ಕಾರ್ಯದಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು (BLO) ಹಾಗೂ ಬೂತ್ ಮಟ್ಟದ ಮೇಲ್ವಿಚಾರಕರಿಗೆ (BLS) ಚುನಾವಣಾ ಆಯೋಗವು ಒಮ್ಮೆಯ ವಿಶೇಷ ₹6,000 ಗೌರವಧನ ನೀಡಲು ಅನುಮೋದನೆ ನೀಡಿದೆ. ಈ ಮೊತ್ತವನ್ನು ಅವರಿಗೆ ಈಗಾಗಲೇ ನೀಡಲಾಗುತ್ತಿರುವ ವಾರ್ಷಿಕ ಸಂಭಾವನೆಯ ಜೊತೆಗೆ ಹೆಚ್ಚುವರಿಯಾಗಿ ಪಾವತಿಸಲಾಗುತ್ತದೆ. ಎಸ್‌ಐಆರ್‌

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಸಿಬ್ಬಂದಿ ಹೆಚ್ಚಿನ ಪ್ರಮಾಣದ ಕ್ಷೇತ್ರ ಕಾರ್ಯ, ದಾಖಲೆ ಪರಿಶೀಲನೆ, ಮನೆಮನೆಗೆ ಭೇಟಿ, ನಮೂನೆಗಳ ಸಂಗ್ರಹ ಮತ್ತು ಪರಿಶೀಲನೆ ಸೇರಿದಂತೆ ಹೆಚ್ಚುವರಿ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಆದೇಶವು ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತೆಲಂಗಾಣ, ತ್ರಿಪುರಾ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಇದರ ಪ್ರಯೋಜನ ಪಡೆಯಲಿದ್ದಾರೆ. ಎಸ್‌ಐಆರ್‌

ಇದನ್ನೂ ನೋಡಿ : ರಾಜ್ಯದ ನಿರುದ್ಯೋಗ ಪ್ರಮಾಣ ಶೇ.8.6: ಕಂಬಳದ ಉದ್ಯೋಗ ಕೊಡುವಿರಾ ಮುಖ್ಯಮಂತ್ರಿಗಳೇ? Janashakthi Media

ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕಳುಹಿಸಿರುವ ನಿರ್ದೇಶನದಲ್ಲಿ, ಈ ಆದೇಶವನ್ನು ಕೂಡಲೇ ಜಿಲ್ಲಾ ಹಾಗೂ ಕ್ಷೇತ್ರ ಮಟ್ಟದ ಚುನಾವಣಾ ಸಿಬ್ಬಂದಿಗೆ ತಿಳಿಸಿ, ಗೌರವಧನ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಮತದಾರರ ಪಟ್ಟಿಯನ್ನು ನಿಖರ ಹಾಗೂ ನವೀಕೃತವಾಗಿರಿಸುವ ಉದ್ದೇಶದಿಂದ ದೇಶದ ಹಲವು ರಾಜ್ಯಗಳಲ್ಲಿ ಎಸ್‌ಐಆರ್‌ ಅಭಿಯಾನ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ನಿರ್ವಹಿಸುತ್ತಿರುವ ಹೆಚ್ಚುವರಿ ಜವಾಬ್ದಾರಿ ಮತ್ತು ಶ್ರಮವನ್ನು ಪರಿಗಣಿಸಿ ಈ ವಿಶೇಷ ಗೌರವಧನವನ್ನು ಘೋಷಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಡಿಲಿಮಿಟೇಶನ್‌ನಿಂದ ಮಹಿಳಾ ಮೀಸಲಾತಿಯನ್ನು ಬೇರ್ಪಡಿಸಿ ಜಾರಿಗೆ ತರಬೇಕು: ನ್ಯಾಯಮೂರ್ತಿ ನಾಗಮೋಹನ ದಾಸ್

Donate Janashakthi Media

Leave a Reply

Your email address will not be published. Required fields are marked *