ಇದೊಂದು ಎರಡು ದೇಶಗಳ ಜನರ ನಡುವಿನ ಸಾಂಸ್ಕೃತಿಕ ಸಹಯೋಗ. ಪ್ಯಾಲೆಸ್ತೈನಿನ ಜೆನಿನ್ ಪ್ರದೇಶದ (ನಿರಾಶ್ರಿತರ ಬಿಡಾರ) ದಿ ಫ್ರೀಡಂಥಿಯೇಟರ್ (ಟಿಎಫ್ಟಿ) ಮತ್ತು ಭಾರತದ ದೆಹಲಿಯಲ್ಲಿನ ಜನ ನಾಟ್ಯ ಮಂಚ್ (ಜನಮ್) ನಡುವಿನ ಸಹಯೋಗ.
ಟಿಎಫ್ಟಿ ಪ್ಯಾಲೆಸ್ತೈನಿನ ಪ್ರಮುಖ ರಂಗ ತಂಡ. 1989ರಲ್ಲಿ ಜನಮ್ನಸಫ್ದರ್ ಹಷ್ಮಿಹತ್ಯೆಯಾದಂತೆ ಟಿಎಫ್ಟಿಯ ಜ್ಯೂಲಿಯಾನೊ ಮೆರ್ಖಮಿಸ್ 2011 ರಲ್ಲಿ ಅವರ ರಂಗ ಮಂದಿರದ ಎದುರುಗಡೆಯೇ ಹತ್ಯೆಗೊಳಗಾದರು. ದಿ ಫ್ರೀಡಂಥಿಯೇಟರ್ ಇಂದು ಜಗತ್ತಿನಲ್ಲೇ ಬಹುದೊಡ್ಡ ರೆಪರ್ಟರಿ (ಸಂಚಾರಿ ರಂಗ ತಂಡ) ಕಂಪನಿ. ವೃತ್ತಿಪರ ರೆಪರ್ಟರಿ ಕಂಪನಿಯಾಗಿ ಒಂದು ರಂಗಶಾಲೆ ಮತ್ತು ಶ್ರವಣ ಹಾಗೂ ದೃಶ್ಯ ತರಬೇತಿ ಕೇಂದ್ರವನ್ನು ದಿ ಫ್ರೀಡಂ ಥಿಯೇಟರ್ ನಡೆಸುತ್ತಿದೆ.
ಟಿಎಫ್ಟಿಯ ಎಂಟು ಕಲಾವಿದರು ನವಂಬರ್ 2015 ರಲ್ಲಿ ಭಾರತಕ್ಕೆ ಬಂದಿದ್ದಾರೆ. ರಂಗ ಪರಿಣಿತರ ಬಳಿ ರಂಗಕಮ್ಮಟದಲ್ಲಿ ತರಬೇತಿ. ಜನಮ್ ಜತೆ ಜಂಟಿಯಾಗಿ ಡಿಸೆಂಬರ್ 2015-ಜನವರಿ 2016 ರಲ್ಲಿ ಭಾರತದ 10 ನಗರಗಳಿಗೆ ಜಾಥಾದಲ್ಲಿ ಹೋಗಲಿದ್ದಾರೆ. ಲಕ್ನೊ, ಭೋಪಾಲ್ಗಳಲ್ಲಿ ಈಗಾಗಲೇ ಜಾತಾ ತಲುಪಿ ಪ್ರದರ್ಶನ ನೀಡಿದ್ದು, ದೆಹಲಿ, ಮುಂಬಯಿ, ಕೇರಳ (3 ಕಡೆ) ಗಳ ನಂತರ ಬೆಂಗಳೂರಿನಲ್ಲಿ ಜನವರಿ 13, 14 ಮತ್ತು 15ರಂದು ಜಾಥಾ ಬರಲಿದೆ. ಜಾಥಾದ ತಂಡದ ಕಾರ್ಯಕ್ರಮದಲ್ಲಿ ಜಂಟಿಯಾಗಿ ತಯಾರಿಸಿದ 40 ಮಿನಿಟುಗಳ ಬೀದಿ ನಾಟಕ, ಪ್ಯಾಲೆಸ್ಟೈನಿನ ಜಾನಪದ ನೃತ್ಯ ಮತ್ತು ಗೊಂಬೆಯಾಟ ಸೇರಿರುತ್ತವೆ. ಇದಲ್ಲದೆ ಸಮುದಾಯದ ‘ಗೋಡೆಗೆ ಹೇಳಿದ ಕತೆ’ ಬೀದಿ ನಾಟಕ ಇರುತ್ತದೆ. ಬೆಂಗಳೂರಿನಲ್ಲಿ ಕೆಲವು ಜಾಥಾ-ಪೂರ್ವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
“ಸ್ವಾತಂತ್ರ್ಯ ಮತ್ತು ವಿಮೋಚನೆ ಬಗೆಗಿನ ತಮ್ಮ ಪರಿಕಲ್ಪನೆಗಳನ್ನು ಭಾರತದ ಪ್ರೇಕ್ಷಕರಜತೆ ಹಂಚಿಕೊಳ್ಳುವುದೇ ಪ್ಯಾಲೆಸ್ತೈನಿನ ಯುವ ಕಲಾವಿದರಿಗೆ ಒಂದು ರೋಮಾಂಚಕಾರಿ ಅನುಭವ” ಎನ್ನುತ್ತಾರೆ ಫೈಸಲ್ ಅಬು ಅಲ್ಲಾಜ, ಟಿಎಫ್ಟಿಯ ಕಲಾ ಮುಖ್ಯಸ್ಥ. “ಭಾರತೀಯ ಸಂಸ್ಕøತಿ, ಸಿನೆಮಾ ಮತ್ತು ರಂಗಭೂಮಿ ನಮಗೆ ದೊಡ್ಡ ಸ್ಪೂರ್ತಿ ಮತ್ತು ಇದು ನಮ್ಮ ಎರಡೂ ದೇಶಗಳ ನಡುವಿನ ಇನ್ನೂ ಹೆಚ್ಚಿನ ಸಾಂಸ್ಕøತಿಕ ವಿನಿಮಯಕ್ಕೆ ದಾರಿ ಮಾಡಿಕೊಡಲಿದೆ.” “ಅಚ್ಚರಿಯ ಈ ಪ್ರವಾಸ ಸಾಧ್ಯವಾಗಿಸಲು ಜನಮ್ಜತೆ ದೇಶದ ಇಪ್ಪತ್ತಕ್ಕೂ ಹೆಚ್ಚಿನ ಸಾಂಸ್ಕøತಿಕ ಸಂಘಟನೆಗಳು ಕೈಜೋಡಿಸುತ್ತಿವೆ. ಹಲವಾರು ಕಲಾವಿದರು ಅನೇಕ ರೀತಿಯಲ್ಲಿ ಈ ನಾಟಕ ತಯಾರಿ ಮತ್ತು ಪ್ರವಾಸದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬಂದಿದ್ದಾರೆ.” ಎಂದು ಜನಮ್ನ ಮುಖ್ಯಸ್ಥ ಸುಧನ್ವ ದೇಶಪಾಂಡೆ ಹೇಳುತ್ತಾರೆ.
“ಪ್ರೀತಿ ವಿಶ್ವಾಸದಿಂದ ಕೂಡಿದ ಎರಡು ನಾಗರೀಕತೆಗಳ ಕಲಾವಿದರ ನಡುವಿನ ನೇರ ಸಂವಾದ ನಡೆಯುತ್ತಿರುವುದು ಸಂಭ್ರಮದ ಹಾಗೂ ಕುತೂಹಲಕಾರಿ ವಿಷಯ” ಎನ್ನುತ್ತಾರೆ ಬಾಲಿವುಡ್ ನ ಹಿರಿಯತಾರೆ ಶರ್ಮಿಳಾ ಟ್ಯಾಗೋರ್. ಚಿತ್ರ ನಿರ್ಮಾಪಕರಾದ ಶ್ಯಾಮ್ ಬೆನೆಗಲ್, ಸಯೀದ್ ಮಿರ್ಜಾ, ಲೇಖಕಿಯರಾದ ಗೀತಾ ಹರಿಹರನ್, ನಯನ್ತಾರಾ ಸೈಗಲ್ ಮತ್ತು ಕಲಾವಿದರಾದ ವಿವಾನ್ ಸುಂದರಂ ಹಾಗೂ ಮುಖ್ಯಸ್ಥರಾದ ಪ್ರಬೀರ್ ಪುರಕಾಯಸ್ಥ ಅವರನ್ನು ಒಳಗೊಂಡ ಪ್ಯಾಲೆಸ್ತೈನ್ ಸೌಹಾರ್ದ ಸಮಿತಿ ಜಾತಾಕ್ಕೆ ಪೂರ್ಣ ಬೆಂಬಲ, ಸಹಕಾರ ನೀಡುತ್ತಿದೆ.
ಈ ಪ್ರವಾಸವನ್ನು ಮುಂಬಯಿಯ ಜುನೂನ್ ಮತ್ತು ಬೆಂಗಳೂರಿನ ಸಮುದಾಯವನ್ನೂ ಒಳಗೊಂಡಂತೆ ಹಲವಾರು ಸಂಘಟನೆಗಳು ಬೆಂಬಲಿಸಿವೆ ಹಾಗೂ ಅಲ್ಲಲ್ಲಿಯ ಪ್ರದರ್ಶನಗಳನ್ನು ಸಂಘಟಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ.
ಬೆಂಗಳೂರಿನ ಕಾರ್ಯಕ್ರಮಗಳು
ಜನವರಿ 2 ಮತ್ತು 10 ರಂದು ಅನುಕ್ರಮವಾಗಿ ಬಾದಾಮಿ ಹೌಸ್ ಹಾಗೂ ಕೆ ವಿ ಸುಬ್ಬಣ್ಣರಂಗ ಮಂದಿರಗಳಲ್ಲಿ ಪ್ಯಾಲೆಸ್ತೈನಿ ಯನ್ ಫಿಲಂ ಪ್ರದರ್ಶನ / ಸಂವಾದ; ಜನವರಿ 9 ರಂದು ನೇಮಿಚಂದ್ರ ಅವರಿಂದ ‘ಯಾದವಶೇಮ್’ ಓದು ಮತ್ತು ಪ್ಯಾಲೆಸ್ಟೈನ್ ಕವಿಗೋಷ್ಟಿ ಮತ್ತು ಹಾಡುಗಳು; ಜನವರಿ 13, 14 ಮತ್ತು 15ರಂದು ಸಂಜೆ ಜಾಥಾ ತಂಡದ ಕಾರ್ಯಕ್ರಮಗಳು ಅನುಕ್ರಮವಾಗಿ- ಚಿತ್ರ ಕಲಾ ಪರಿಷತ್, ಐ.ಐ.ಎಚ್.ಎಸ್., ರಂಗ ಶಂಕರ/ಪೀಣ್ಯ – ಗಳಲ್ಲಿ ಇರುತ್ತವೆ. ಇದಲ್ಲದೆ ಜಾತಾ ತಂಡದೊಂದಿಗೆ ಮೂರೂ ದಿನ ವಿವಿಧ ಸಂಸ್ಥೆಗಳಲ್ಲಿ ಸಂವಾದ ಇರುತ್ತದೆ.