ಎಸ್.ಎಫ್.ಐ.-45 ರ ಸಂಭ್ರಮ

ಸಂಪುಟ 10 ಸಂಚಿಕೆ 2 ಜನವರಿ 10 – 2016

ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ಈಗ 45ರ ಸಂಭ್ರಮ, ಸಂಭ್ರಮ ಎನ್ನುವುದಕ್ಕಿಂತ ವಿದ್ಯಾರ್ಥಿಗಳಿಗೆ ಎದುರಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸಿ ಹೋರಾಟವನ್ನು ತೀವ್ರಗೊಳಿಸುವ ಅನಿವಾರ್ಯತೆ ಈಗಿನ ಅಗತ್ಯಎನ್ನಬಹುದು. ಸ್ವಾತಂತ್ರ ನಂತರದಲ್ಲಿ ಬಂದ ಸರ್ಕಾರಗಳು ಶಿಕ್ಷಣವನ್ನು ಎಲ್ಲರಿಗೂ ನೀಡುವ ಬದಲು, ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬ ಅನಾದಿ ಕಾಲದ ನೀತಿಯನ್ನೇ ಮುಂದುವರೆಸಿದ್ದವು. ಶಿಕ್ಷಣವನ್ನು ಖಾಸಗೀಕರಣದ ವಿರುದ್ಧ ಮತ್ತುಎಲ್ಲರಿಗೂ ಎಂಬ ಧ್ಯೇಯದೊಂದಿಗೆ 1970ರಲ್ಲಿ ತಿರುವನಂತಪುರಂನಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‍ಎಂದುದೇಶದಲ್ಲಿ ಪ್ರಾರಂಭವಾಯಿತು.

ಕಳೆದ 45 ವರ್ಷಗಳಿಂದ ಶಿಕ್ಷಣದ ಖಾಸಗೀಕರಣ, ಕೋಮುವಾದೀಕರಣದ ವಿರುದ್ಧ, ಸರ್ಕಾರದ ನೀತಿಗಳಿಂದಾಗಿ ಶಿಕ್ಷಣಕ್ಕೆ ವಿನಿಯೋಗಿಸುವ ಹಣಕಾಸಿನ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆಕಡಿಮೆ ಮಾಡುವುದನ್ನು ವಿರೋಧಿಸಿ, ಸರ್ಕಾರಿ ಶಾಲಾ-ಕಾಲೇಜುಗಳನ್ನು ಉಳಿಸಬೇಕೆಂದು, ಹಣ ಉಳ್ಳವರಿಗೆ ಮಾತ್ರ ಶಿಕ್ಷಣವಲ್ಲ, ಎಲ್ಲರಿಗೂ ಶಿಕ್ಷಣ ನೀಡಬೇಕೆಂದು ನಿರಂತರ ಹೋರಾಟವನ್ನು ಸಂಘಟಿಸುತ್ತಾ ಬಂದಎಸ್.ಎಫ್.ಐ. ಸಂಘಟನೆಯ 45ನೇ ವರ್ಷದ ಸಂಭ್ರಮಾಚರಣೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

P1070040

ಹಾವೇರಿಯಲ್ಲಿ ಎಸ್‍ಎಫ್‍ಐ 45ರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

ಎಸ್‍ಎಫ್‍ಐ ಹಾವೇರಿಜಿಲ್ಲಾ ಸಮಿತಿಯು ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಗರದ ಎಸ್‍ವಿಐ ವಿಜ್ಞಾನ ಪದವಿ ಪೂರ್ವಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಬೇಕಾ ಅಥವಾ ಬೇಡಾ ಎಂಬ ವಿಷಯದಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದ ಎಸ್‍ವಿಐ ಕಾಲೇಜಿನ ವಿದ್ಯಾರ್ಥಿನಿ ಸ್ಪೂರ್ತಿ ಈ.ಟಿ. ಪ್ರಥಮ ಬಹುಮಾನ ಪಡೆದರು, ಇದೇ ವಿಷಯದ ವಿರೋಧವಾಗಿ ಮಾತನಾಡಿದ ಜಿ.ಹೆಚ್‍ಕಾಲೇಜು ವಿದ್ಯಾರ್ಥಿ ಸಾಗರ ಸುಳ್ಳಿಹಳ್ಳಿ ಪ್ರಥಮ ಬಹುಮಾನ ಪಡೆದರು. 40 ಜನ ವಿದ್ಯಾರ್ಥಿಗಳಿಗೆ ಬಹುಮಾನÀ ವಿತರಣೆ ಮಾಡಲಾಯಿತು. ಪ್ರಬಂಧ ಸ್ಪ ರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ಬಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‍ಎಫ್‍ಐ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಪೂಜಾರ, ಎಸ್‍ಎಫ್‍ಐನ ಮಾಜಿ ಮುಖಂಡರು ಹಾಗೂ ಸಿಐಟಿಯುನ ಹಾವೇರಿ ಜಿಲ್ಲಾ ಸಂಚಾಲಕರಾದ ವಿನಾಯಕ ಕುರುಬರ ಮತ್ತು ಹಿರಿಯ ವಕೀಲರಾದ ಜಿ.ಎ.ಹಿರೇಮಠ ಮಾತನಾಡಿದರು. ಎಸ್‍ಎಫ್‍ಐಜಿಲ್ಲಾ ಅಧ್ಯಕ್ಷರಾದ ರೇಣುಕಾ ಕಹಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಸುಭಾಸ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದದರು. ಎಸ್‍ವಿಐ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ||ಶ್ರೀಗೌರಿ ಎಂ.ಪಿ.ಎಂ ವೇದಿಕೆ ಮೇಲಿದ್ದರು. ವಿಜಯಕುಮಾರ ಎಸ್. ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಎಸ್‍ಎಫ್‍ಐನ ಶ್ವೇತ ಪತಾಕೆಯ ಧ್ವಜಾರೋಹಣ ಮಾಡಲಾಯಿತು.

ಗದಗ ಜಿಲ್ಲೆಯ ಗಜೇಂದ್ರಗಢದ ಕೆ.ವಿ.ಎಸ್.ಆರ್. ಪಿಯು ಕಾಲೇಜಿನಲ್ಲಿ ಎಸ್.ಎಫ್.ಐ ಘಟಕದಿಂದ ನಡೆದ 45ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕಾರ್ಯಕ್ರಮವನ್ನು ಎಸ್.ಎಫ್.ಐ ಮಾಜಿ ಮುಖಂಡರಾದ ಎಂ.ಎಸ್.ಹಡಪದ ಉದ್ಘಾಟಿಸಿದರು. ಉಪನ್ಯಾಸಕರಾದ ಸತೀಶ ಪಾಸಿ, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಬೋಸ್ಲೆ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ಉಪ ಪ್ರಾಚಾರ್ಯರಾದ ಆರ್.ಎಶ್.ಪೂಜಾರ ವಹಿಸಿದ್ದರು. ಕಾರ್ಯಕ್ರಮದ ನೀರೂಪಣೆಯನ್ನು ಎಸ್.ಎಫ್.ಐ ಮುಖಂಡ ಕೃಷ್ಣ ಪೂಜಾರ ಸ್ವಾಗತವನ್ನು ಸುನೀಲ ಲಮಾಣಿ ಹಾಗೂ ವಂದನಾರ್ಪಣೆಯನ್ನು ಹನಮಂತ ಮಂಜುಗುಡ್ಡ ನಡೆಸಿ ಕೊಟ್ಟರು. ಈ ವೇಳೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣೇಶ ರಾಥೋಡ್ ಚಾಲನೆ ನೀಡಿ ಮಾತನಾಡಿದರು. ಎಸ್.ಎಫ್.ಐ ವಿದ್ಯಾರ್ಥಿ ಚಳುವಳಿಯ ಮಾಜಿರಾಜ್ಯ ಮುಖಂಡರಾದ ಸಿಐಟಿಯುನ ಯಮುನಾಗಾಂವ್ಕರ್ ಮುಖ್ಯ ಭಾಷಣ ಮಾಡಿದರು. ರಾಜಸ್ತಾನದ ಸಿತಾರ್ ಜಿಲ್ಲೆಯಲ್ಲಿ ನಡೆಯಲಿರುವ ಎಸ್‍ಎಫ್‍ಐನ ರಾಷ್ಟ್ರ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಹೋಗಲಿರುವ ಸಂಗಾತಿಗಳಿಗೆ ರೈತ ಸಂಘದ ತಾಲೂಕಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಅಭಿನಂದಿಸಿದರು. ವಿದ್ಯಾರ್ಥಿ ಉಪಸಮಿತಿ ಮುಖಂಡರಾದ ಸೌಮ್ಯ ಕಾಂಬಳೆ, ಶ್ವೇತಾ ಪಿಳ್ಳೈ, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಮುಖಂಡರಾದ ಮೋಹಿನಿ ನಮ್ಸೇಕರ್, ವಿಮಲಾ, ಮಂಜುಳಾ, ಮಾಯಾ ಭಾಗವಹಿಸಿದ್ದರು.

ಉಡುಪಿ ಜಿಲ್ಲೆಯ ಎಸ್‍ಎಫ್‍ಐ ಕುಂದಾಪುರ ತಾಲ್ಲೂಕು ಸಮಿತಿ ವತಿಯಿಂದ 45ರ ಸಂಭ್ರಮವನ್ನು ಸಡಗರದಿಂದ ಆಚರಿಸಲಾಯಿತು. ಎಸ್‍ಎಫ್‍ಐ ಮಾಜಿ ಮುಖಂಡರಾದ ರಮಾನಾಥ ಭಂಡಾರಿರವರು ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ತಾಲ್ಲೂಕು ಅಧ್ಯಕ್ಷರಾದ ಅಕ್ಷಯ್ ವಡೇರ ಹೋಬಳಿ ಮಾತನಾಡಿದರು. ಈ ಸಂದರ್ಭದಲ್ಲಿ ಡಿವೈಎಫ್‍ಐನ ತಾಲ್ಲೂಕು ಕಾರ್ಯದರ್ಶಿ ರಾಜೀಶ್ ವಡೇರ ಹೋಬಳಿ, ಅಲ್ಡ್ರೀನ್, ವಿನಯ್ ಪ್ರಭು, ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ ಜ್ಯೋತಿಬಸು ಭವನದಲ್ಲಿ ವಿದ್ಯಾರ್ಥಿಗಳು ಕೇಕ್‍ಕತ್ತರಿಸುವ ಮೂಲಕ ಎಸ್‍ಎಫ್‍ಐನ 45ರ ದಿನಾಚರಣೆ ಆಚರಿಸಲಾಯಿತು. ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಆಶ್ರಮ ಸರ್ಕಲ್‍ನಲ್ಲಿರುವ ವಿವೇಕಾನಂದರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಎಸ್‍ಎಫ್‍ಐ ಮಾಜಿ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂರವರು ಸೇರಿದಂತೆ ಬೆಂ.ದಕ್ಷಿಣ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ಬೆಂ.ಉತ್ತರ ಜಿಲ್ಲಾ ಕಾರ್ಯದರ್ಶಿ ಚಿಕ್ಕರಾಜು ಮತ್ತಿತರ ಮುಖಂಡದರು ಭಾಗವಹಿಸಿದ್ದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಂಕಲ್ಪ ಪಿ.ಯು. ಕಾಲೇಜಿನಲ್ಲಿ ಎಸ್‍ಎಫ್‍ಐ 45ರ ಸಂಭ್ರಮವನ್ನು ಹಿರಿಯ ಸಾಹಿತಿ ಫೀರಭಾಷರವರು ಉದ್ಘಾಟಿಸಿದರು. ಗ್ಯಾನೇಶ ಕಡದಗ ಮಾತನಾಡಿದರು. ಪ್ರಾಂಶುಪಾಲರಾದ ಬಸವರಾಜರವರು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಲಿಂಗಪ್ಪ ಹಣವಾಳ, ಬಾಳಪ್ಪ ಮತ್ತು ವಿದ್ಯಾರ್ಥಿಗಳು ಮುಖಂಡರು ಭಾಗವಹಿಸಿದ್ದರು.
ಇದಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಸ್.ಎಫ್.ಐ ಸಂಘಟನೆಯ ಸಂಭ್ರಮಾಚರಣೆಯನ್ನು ಆಚರಿಸಲಾಗಿದೆ ಎಂದು ವರದಿಗಳು ಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *