ಪ್ಯಾಲೆಸ್ಟೈನ್‌ ಮಕ್ಕಳನ್ನು ಗುರಿಯಾಗಿಸಿ ಇಸ್ರೇಲಿ ಸೈನ್ಯ ನರಮೇಧ ನಡೆಸುತ್ತಿದೆ: ವಿಶ್ವಸಂಸ್ಥೆಯ ಕಮಿಶನ್

ಪ್ಯಾಲೆಸ್ಟೈನ್‌ ನಲ್ಲಿ ಅಕ್ಟೋಬರ್‌ 7, 2023 ರಂದು ಕಿಡ್ನಾಪ್‌ ಮಾಡಿದ ಇಸ್ರೇಲಿ ಜನರ ಬಿಡುಗಡೆ ಮತ್ತು ಪ್ಯಾಲೇಸ್ಟೈನ್ನ ಹಮಾಸ್‌ ಸಂಘಟನೆಗೆ ಬುದ್ದಿ ಕಲಿಸುವ ನೆಪದಲ್ಲಿ ಪ್ರಾರಂಭವಾದ ಯುದ್ಧ ಹತ್ತಿರ ಹತ್ತಿರ ಮೂರು ವರ್ಷಗಳ ಕಾಲ ನಡೆದಿದೆ. ಈ ಯುದ್ಧ ಸಾವಿರ ದಿನಗಳನ್ನು ಪೂರೈಸಿದೆ. ವಿಶ್ವಸಂಸ್ಥೆಯ ಅಂತರ್ರಾಷ್ಟ್ರೀಯ ಸ್ವತಂತ್ರ ವಿಚಾರಣಾ ಆಯೋಗ ಸೆಪ್ಟೆಂಬರ್‌ 2025 ರಲ್ಲಿ ಸಲ್ಲಿಸಿದ ವರದಿಯ ಪ್ರಕಾರ, ಈ ಯುದ್ಧದಿಂದ 73000 ಸಾವುಗಳಾಗಿದ್ದವು ಮತ್ತು 1.8 ಲಕ್ಷ ಗಾಯಾಳುಗಳಾದರು. ಮೇಲಿನ ಸಂಖ್ಯೆಗಳಲ್ಲಿ ಶೇ 30 ರಷ್ಟು ಸಾವು ಮಕ್ಕಳದ್ದಾಗಿತ್ತು ಹಾಗೂ ಗಾಯಗೊಂಡವರಲ್ಲಿ ಶೇ 26 ರಷ್ಟು ಮಕ್ಕಳು! ಯಾವುದೇ ನಾಗರಿಕ ಸಮಾಜ ತಲೆ ತಗ್ಗಿಸುವ ಘೋರ ಕ್ರೌರ್ಯ ಇದು. ಪ್ಯಾಲೆಸ್ಟೈನ್‌

– ಜಿ. ಎಸ್‌. ಮಣಿ

ಇದೇ ಆಯೋಗ ಜೂನ್‌ 18, 2026 ರಂದು ಮಕ್ಕಳನ್ನು ಗುರಿಯಿಟ್ಟು ನಡೆಸಲಾದ ನರಮೇಧದ ಕುರಿತು ನೀಡಿರುವ ವರದಿ ಇಂತಹದ್ದೇ ಬೆಚ್ಚಿಬೀಳಿಸುವ ಅಂಕೆಸಂಖ್ಯೆ ಮತ್ತು ಕ್ರೌರ್ಯವನ್ನು ಎತ್ತಿ ತೋರಿಸಿದೆ. ತಾಯಿಯ ಹಾಲು ಕುಡಿಯುತ್ತಿರುವ ಮಗುವನ್ನು ಡ್ರೋನ್ ನಿಂದ ಗುರಿಯಿಟ್ಟು ವಿಶೇಷ ಬುಲೆಟ್ ಗಳಿಂದ ಕೊಲ್ಲಲಾಗಿದೆ. ತಂದೆಯ ಕೈ ಹಿಡಿದು ನಡೆಯುತ್ತಿರುವ ಹುಡುಗನಿಗೆ ಗುರಿಯಿಟ್ಟು ಡ್ರೋನ್ ನಿಂದ ಕೊಲ್ಲಲಾಗಿದೆ. ಈ ಎರಡು ಪ್ರಕರಣಗಳಲ್ಲಿ ತಾಯಿಯಾಗಲಿ ತಂದೆಯಾಗಲಿ ಸತ್ತಿಲ್ಲ, ಗಾಯೊಗೊಂಡೂ ಇಲ್ಲ. ಪ್ಯಾಲೆಸ್ಟೈನ್‌

ಮಾತ್ರವಲ್ಲ ಮಕ್ಕಳ ತಲೆ, ಭುಜದ ಮೇಲೆ ಮಾರಣಾಂತಿಕ ಬುಲೆಟ್ ದಾಳಿ ಮಾಡಲಾಗಿದೆ. ಹಾಗಾಗಿ ಮುಂದಿನ ಪೀಳಿಗೆಯನ್ನೇ ನಿರ್ನಾಮ ಮಾಡುವ ಸ್ಪಷ್ಟ ಗುರಿಯಿಂದ ಇದನ್ನು ಮಾಡಲಾಗುತ್ತಿದೆ. ಹೀಗೆ ನಿರ್ದಿಷ್ಟವಾಗಿ ಗುರಿಯಿಟ್ಟು ಮಕ್ಕಳನ್ನೇ ಕೊಲ್ಲುವುದು ಸುಲಭವಲ್ಲ. ಇದಕ್ಕಾಗಿ ವಿಶೇಷ ಬುಲೆಟ್, ಡ್ರೋನ್, ವಿಶೇಷ ತರಬೇತಿ ಪಡೆದ ಸಿಬ್ಬಂದಿಯನ್ನು ಯೋಜಿಸಲಾಗಿದೆ ಎಂದು ಮಿಲಿಟರಿ ಪರಿಣತರು, ಹಲವು ಸಾಕ್ಷಿದಾರರ ಹೇಳಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇಸ್ರೇಲಿ ಸೈನಿಕರು ‘ಮಕ್ಕಳ ನರಮೇಧದಲ್ಲಿ ತಮ್ಮ ಕೌಶಲ್ಯ’ ಕೊಚ್ಚಿಕೊಳ್ಳುತ್ತಾ ಬಿಚ್ಚಿಟ್ಟ ಪೋಸ್ಟ್ ಗಳು ಇತ್ಯಾದಿ ಹಲವು ಸಾಕ್ಷ್ಯಗಳ ಆಧಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆಯೋಗ ವರದಿಯಲ್ಲಿ ಹೇಳಿದೆ. ಪ್ಯಾಲೆಸ್ಟೈನ್‌

ಇದನ್ನೂ ಓದಿ: 2026ರ ಮುಷ್ಕರ ಅಲೆ: ಸಣ್ಣ ಸಹಾಯಕ ಕಂಪನಿಗಳಿಗೂ ತಟ್ಟಿದ ಕಾರ್ಮಿಕ ಹೋರಾಟ

ಈ ಆಯೋಗದ ಮುಖ್ಯಸ್ಥರಾಗಿರುವ ನಿವೃತ್ತ ಒಡಿಶಾ ಹೈ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಮುರಳೀದರ ಹಲವು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಈ ಕೆಲವು ನರಮೇಧದ ನಿರ್ದಿಷ್ಟ ಪ್ರಕರಣಗಳ ತನಿಖೆಯೇ ಅತ್ಯಂತ ಭೀಕರ ಅನುಭವವಾಗಿತ್ತು ಎಂದಿದ್ದಾರೆ. ಈ ಆಯೋಗಕ್ಕೆ ಇಸ್ರೇಲ್ ಗಾಜಾ ಪ್ರದೇಶಕ್ಕೆ ಅಥವಾ ಇಸ್ರೇಲ್ ಗೆ ಭೇಟಿ ನೀಡಲು, ಅಲ್ಲಿನ ಸರಕಾರದ ಪ್ರತಿನಿಧಿಗಳು, ಮಿಲಿಟರಿ ಸಿಬ್ಬಂದಿ ಅಥವಾ ನಾಗರಿಕರನ್ನು ಮಾತನಾಡಿಸಲು ಅವಕಾಶ ಕೊಟ್ಟಿಲ್ಲ. ಆದರೂ ಇಸ್ರೇಲಿನ ಹೊರಗೆ ಬಂದಿದ್ದ ಹಲವರನ್ನು ಸಂದರ್ಶಿಸಲಾಗಿದೆ. ಪ್ರತಿ ಪ್ರಕರಣದ ಸಾಕ್ಷ್ಯಾಧಾರದ ವಿವರಗಳನ್ನು ಇಸ್ರೇಲಿ ಸರಕಾರದ ಜತೆ ಹಂಚಿಕೊಳ್ಳಲಾಗಿದೆ. ಅವರದೇ ಯಾವುದೇ ಸಾಕ್ಷ್ಯಾಧಾರವಿದ್ದರೆ ಕೊಡಲು ಕೇಳಿಕೊಳ್ಳಲಾಗಿದೆ. ಇಸ್ರೇಲಿ ಸರಕಾರ ಯಾವುದಕ್ಕೂ ಸ್ಪಂದಿಸಿಲ್ಲ, ಎಂದಿದ್ದಾರೆ.

ಇಸ್ರೇಲಿ ಸೈನಿಕರಿಗೆ ಪ್ಯಾಲೆಸ್ಟೈನ್ ಮಕ್ಕಳೆಲ್ಲ ಹುಟ್ಟಾ ಭಯೋತ್ಪಾದಕರು ಎಂದು ನಂಬಿಸಲಾಗಿದ್ದು, ಹಾಗಾಗಿ ಮಕ್ಕಳ ಮೇಲೆ ತಾವು ತೋರುವ ಕ್ರೌರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. (ಕೆಳಗೆ ನೀಡಿರುವ ಅವರ ಉಕ್ತಿಗಳನ್ನು ನೋಡಿ) ಗಾಝಾದ ಶೇ2 ರಷ್ಟು ಮಕ್ಕಳನ್ನು ಹತ್ಯೆಗೈಯಲಾಗಿದೆ. ಅಲ್ಲಿನ ಮಕ್ಕಳು ಶಾಲೆ, ಆಟಪಾಠ ಮತ್ತು ಪೌಷ್ಟಿಕತೆ ಇತ್ಯಾದಿಗಳಿಂದ ವಂಚಿತರಾಗಿದ್ದಾರೆ. ಪ್ಯಾಲೆಸ್ಟೈನ್‌

ಇಸ್ರೇಲ್‌ ದುರುದ್ದೇಶದಿಂದಲೇ ಇಂತಹ ಕ್ರೌರ್ಯ ಎಸಗಿದೆ ಎಂದು ವರದಿ ಸ್ಪಷ್ಟವಾಗಿ ಹೇಳಿದೆ. ಕೆಳಗಿನ ಕೋಷ್ಟಕಗಳು ಈ ಕ್ರೌರ್ಯಗಾಥೆಯನ್ನು ಒಡೆದು ಹೇಳುತ್ತವೆ. ಹನಿಯಷ್ಟು ಮನುಷ್ಯತ್ವ ಇರುವವರಿಗೂ ಈ ಕೋಷ್ಟಕಗಳು ವಿಷಯವನ್ನು ಮಾತುಗಳ ಹಂಗಿಲ್ಲದೇ ಬಹಿರಂಗಗೊಳಿಸುತ್ತವೆ.

ಇಸ್ರೇಲಿಗಳ ಉಕ್ತಿಗಳು

“ನೀನು ಸಾಯುತ್ತಿ, ನಿನ್ನ ಮಕ್ಕಳು ಸಾಯುತ್ತಾರೆ, ನಿನ್ನ ಮೊಮ್ಮಕ್ಕಳು ಸಾಯುತ್ತಾರೆ, ಪ್ಯಾಲೇಸ್ಟೈನ್‌ ಎಂಬ ದೇಶವೇ ಉಳಿಯುವುದಿಲ್ಲ” –ಹನೊಚ್‌ ಮಿಲ್ಡವಿಸ್ಕಿ”,

“ಇಸ್ರೇಲಿ ಖೆನೆಸೆಟ್‌ ನ (ಇಸ್ರೇಲಿನ ಸಂಸತ್ತು) ಸದಸ್ಯ “ಗಾಝಾವನ್ನು ಅಳಿಸಿ ಹಾಕಿ. ನಮಗೆ ಬೇರೆನೂ ತೃಪ್ತಿ ನೀಡುವುದಿಲ್ಲ… ಒಂದು ಮಗುವನ್ನೂ ಅಲ್ಲಿ ಬಿಡಬೇಡಿ. ಎಲ್ಲರನ್ನೂ ಹೊರಹಾಕಿ. ಪುನರುಜ್ಜೀವನ ಎಂಬುದು ಅವರಿಗೆ ಸಾಧ್ಯವಾಗಬಾರದು.”- ನಿಸ್ಸಿಮ್‌ ವಟುರಿ, ಇಸ್ರೇಲಿ ಖೆನೆಸೆಟ್‌ ನ ಉಪ ಸಭಾಪತಿ.

“ಗಾಝಾ ಭಯೋತ್ಪಾದಕರಿಂದ ತುಂಬಿಹೋಗಿದೆ. ಅಲ್ಲಿ ಹುಟ್ಟುವ ಪ್ರತಿ ಮಗುವೂ ಹುಟ್ಟಿನಿಂದಲೇ ಭಯೋತ್ಪಾದಕ”- ನಿಸ್ಸಿಮ್‌ ವಟುರಿ, ಇಸ್ರೇಲಿ ಖೆನೆಸೆಟ್‌ ನ ಉಪ ಸಭಾಪತಿ.

“ಗಾಝಾದ ಮಕ್ಕಳು ಇಸ್ರೇಲಿ ಮಕ್ಕಳಿಗೆ ಸಮನಲ್ಲ. ಗಾಝಾದ ಮಕ್ಕಳು ತಮ್ಮ ಕೊಲೆಯನ್ನು ತಾವೇ ತಂದುಕಂಡಿದ್ದಾರೆ”- ಮೆರಾವ್‌ ಬೆನ್-ಆರಿ, ಇಸ್ರೇಲಿ ಖೆನೆಸೆಟ್‌ ನ (ಅಲ್ಲಿನ ಸಂಸತ್ತು) ಸದಸ್ಯ

“ಗಾಝಾದಲ್ಲಿನ ಪ್ರತಿ ಮಗವೂ ಒಬ್ಬ ವೈರಿ…. ನಾವು ಗಾಝಾವನ್ನು ಗೆದ್ದು ಅದನ್ನು ವಸಾಹತು ಮಾಡಿಕೊಳ್ಳಬೇಕು.ಒಂದೇ ಒಂದು ಗಾಝಾ ಮಗುವೂ ಅಲ್ಲಿ ಉಳಿಯಬಾರದು. ಅದಲ್ಲದೇ ನಮಗೆ ಬೇರೆ ವಿಜಯವಿಲ್ಲ.” ಮೋಶೇ ಫೇಗ್ಲಿನ್‌, ಇಸ್ರೇಲಿ ಖೆನೆಸೆಟ್‌ ನ ಮಾಜಿ ಸದಸ್ಯ

“ಮೊದಲ ಗುಂಡು ನೇರ ತಲೆಗೆ” -ಇಸ್ರೇಲಿ ಸೈನಿಕ ಪ್ಯಾಲೆಸ್ಟೈನಿಯರ ಮೇಲೆ ಗುಂಡು ಹಾರಿಸುವ ಕ್ರಮದ ಬಗೆಗೆ –ಡಾಕ್ಯುಮೆಂಟರಿಯೊಂದರಲ್ಲಿ.

“ನಾವು ಬಂಡಿಯಂತಹದ್ದನ್ನು ತಳ್ಳುತ್ತಿರುವ ಎರಡು ಹುಡುಗರನ್ನು ಕಂಡೆವು. ಮೊದಲ ಗುಂಡು ನೇರ ಅವರ ತಲೆಗೆ” ಇಸ್ರೇಲಿ ಸೈನಿಕ ಡಾಕ್ಯುಮೆಂಟರಿಯಲ್ಲಿ

ಹತ್ತು ವರ್ಷದ ಹುಡುಗನನ್ನು ಕೊಂದ ಮೇಲೆ ಇಸ್ರೇಲಿ ಸೈನಿಕ ಹುಡುಗನ ತಾಯಿಗೆ ಹೇಳಿದ್ದು “ನಾನೇ ಹುಡುಗನ ತಲೆಗೆ ಗುಂಡು ಹೊಡೆದಿದ್ದು. ದೇವರು ಬಯಸಿದರೆ ಅವನು ಸಾಯುತ್ತಾನೆ” ಹುಡುಗ ಸತ್ತ ಎಂದು ಬೇರೆ ಹೇಳಬೇಕಾಗಿಲ್ಲ.

ಆಧಾರ: ಜುಲೈ 1ನೇ ತಾರೀಖಿನ ದಿ ಹಿಂದು ದಿನ ಪತ್ರಿಕೆಯ ಡೇಟಾ ಪಾಯಿಂಟ್‌ ಅಂಕಣ

ಇದನ್ನೂ ನೋಡಿ: ರಾಮ ಮಂದಿರ ಟ್ರಸ್ಟ್‌ ಹಗರಣ: ಭಕ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ? ಹೊಣೆ ಹೊರುವರೇ ಮೋದಿ? MG ಹೆಗಡೆ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *