ಎಸ್‌ಐಆರ್‌: ರಾಜ್ಯದಲ್ಲಿ ಶೇ.82.45ರಷ್ಟು ಎನ್ಯೂಮರೇಷನ್‌ ಫಾರ್ಮ್‌ ವಿತರಣೆ; 10.22% ದಾಖಲೆಗಳ ಡಿಜಿಟೈಸೇಶನ್‌ ಪೂರ್ಣ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಕಾರ್ಯದ ಭಾಗವಾಗಿ ಜುಲೈ 8ರ ಸಂಜೆ 6 ಗಂಟೆಯ ವೇಳೆಗೆ ಒಟ್ಟು 4,57,05,239 ಎನ್ಯೂಮರೇಷನ್‌ ಫಾರ್ಮ್‌ಗಳು (ಶೇ.82.45) ಮತದಾರರಿಗೆ ವಿತರಿಸಲಾಗಿದ್ದು, 56,65,447 ಫಾರ್ಮ್‌ಗಳು (ಶೇ.10.22) ಡಿಜಿಟೈಸೇಶನ್‌ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. ಎಸ್‌ಐಆರ್‌

ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದು, ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಜೂನ್‌ 30ರಿಂದ ಜುಲೈ 29ರವರೆಗೆ ನಡೆಯಲಿದೆ. ಇದೇ ಅವಧಿಯಲ್ಲಿ ಡಿಜಿಟೈಸೇಶನ್‌ ಪ್ರಕ್ರಿಯೆಯೂ ನಡೆಯುತ್ತಿದೆ.

ಇಲ್ಲಿಯವರೆಗೆ 22,122 ಮತಗಟ್ಟೆಗಳಲ್ಲಿ (ಶೇ.37.46) ಶೇ.100ರಷ್ಟು ಫಾರ್ಮ್‌ ವಿತರಣೆ ಪೂರ್ಣಗೊಂಡಿದೆ. ಮತ್ತೊಂದು 14,108 ಮತಗಟ್ಟೆಗಳಲ್ಲಿ (ಶೇ.23.89) ಶೇ.90ಕ್ಕಿಂತ ಹೆಚ್ಚು ವಿತರಣೆ ಸಾಧಿಸಲಾಗಿದೆ. ಡಿಜಿಟೈಸೇಶನ್‌ನಲ್ಲಿ ಕೇವಲ 5 ಮತಗಟ್ಟೆಗಳು ಶೇ.100 ಸಾಧಿಸಿದ್ದು, 83 ಮತಗಟ್ಟೆಗಳು ಶೇ.90ಕ್ಕಿಂತ ಹೆಚ್ಚು ಪ್ರಗತಿ ದಾಖಲಿಸಿವೆ. ಎಸ್‌ಐಆರ್‌

ಇದನ್ನೂ ಓದಿ :ಎಸ್‌ಐಆರ್ ಕರ್ತವ್ಯಕ್ಕೆ ಹೋದ ಬಿಎಲ್‌ಒಗೆ ಜಾತಿನಿಂದನೆ; ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲು

ಆನ್‌ಲೈನ್‌ ಮೂಲಕ 1,66,818 ಮತದಾರರು (ಶೇ.0.30) ತಮ್ಮ ಎನ್ಯೂಮರೇಷನ್‌ ಫಾರ್ಮ್‌ಗಳನ್ನು ಸಲ್ಲಿಸಿದ್ದಾರೆ. ಈವರೆಗೆ 1,48,007 ASDDO ಪ್ರಕರಣಗಳು ಗುರುತಿಸಲಾಗಿದ್ದು, 2,772 ಮತದಾರರು ಪತ್ತೆಯಾಗಿಲ್ಲ, 75,061 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ, 59,461 ಮಂದಿ ಮೃತಪಟ್ಟಿದ್ದಾರೆ, 10,078 ಮಂದಿ ಈಗಾಗಲೇ ನೋಂದಾಯಿತರಾಗಿದ್ದಾರೆ ಹಾಗೂ 635 ಪ್ರಕರಣಗಳು ಇತರೆ ವರ್ಗಕ್ಕೆ ಸೇರಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ, 2026–27ನೇ ಹಣಕಾಸು ವರ್ಷದ ಎರಡನೇ ಕಂತಿನ ಗೌರವಧನವಾಗಿ ಪ್ರತಿ ಬಿಎಲ್‌ಒಗೆ ₹8,000ರಂತೆ ಒಟ್ಟು ₹47.24 ಕೋಟಿ ಮೊತ್ತವನ್ನು ಜುಲೈ 7ರಂದು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ. ಎಸ್‌ಐಆರ್‌

ಇದನ್ನೂ ನೋಡಿ : SIR ಕರ್ತವ್ಯದಲ್ಲಿ ಮತ್ತೊಂದು ಆಘಾತ! ಬಿಎಲ್‌ಒಗೆ ಜಾತಿ ನಿಂದನೆ; ಎಫ್‌ಐಆರ್‌ ದಾಖಲು Janashakthi Media

Donate Janashakthi Media

Leave a Reply

Your email address will not be published. Required fields are marked *