ಐಎಂಡಿ ಹೊಸ ಅಂದಾಜು: ಈ ಬಾರಿ ಕಡಿಮೆಯಾಗಲಿದೆ ಮುಂಗಾರು ಮಳೆ?

ನವದೆಹಲಿ : ದೇಶದ ಮುಂಗಾರು ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ಮತ್ತೊಮ್ಮೆ ಪರಿಷ್ಕರಿಸಿದ್ದು, ಈ ಬಾರಿ ಜೂನ್‌-ಸೆಪ್ಟೆಂಬರ್‌ ಅವಧಿಯಲ್ಲಿ ದೇಶಕ್ಕೆ ದೀರ್ಘಕಾಲಿಕ ಸರಾಸರಿ (LPA) ಮಳೆಯ ಕೇವಲ ಶೇ.90ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಐಎಂಡಿ

ಏಪ್ರಿಲ್‌ನಲ್ಲಿ ನೀಡಿದ್ದ ಮೊದಲ ಹಂತದ ಮುನ್ಸೂಚನೆಯಲ್ಲಿ ಶೇ.92ರಷ್ಟು ಮಳೆಯ ನಿರೀಕ್ಷೆ ವ್ಯಕ್ತಪಡಿಸಲಾಗಿತ್ತು. ಇದೀಗ ಅದನ್ನೂ ಕಡಿಮೆ ಮಾಡಿರುವುದರಿಂದ ಕೃಷಿ, ನೀರಿನ ಲಭ್ಯತೆ ಹಾಗೂ ಆಹಾರ ದರ ಏರಿಕೆ ಕುರಿತು ಆತಂಕ ಹೆಚ್ಚಾಗಿದೆ.

ಐಎಂಡಿ ಪ್ರಕಾರ, ಈ ಬಾರಿ ಈಶಾನ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದ್ದರೂ, ದಕ್ಷಿಣ ದ್ವೀಪಕಲ್ಪ, ಮಧ್ಯ ಭಾರತ ಹಾಗೂ ಉತ್ತರ ಪಶ್ಚಿಮ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಎಲ್‌ ನಿನೋ ಪರಿಣಾಮ ದುರ್ಬಲದಿಂದ ಮಧ್ಯಮ ಮಟ್ಟದಲ್ಲಿ ಮುಂದುವರಿಯುವ ನಿರೀಕ್ಷೆಯಿದ್ದು, ಇದರಿಂದ ಮುಂಗಾರು ಮೇಲೆ ಪರಿಣಾಮ ಬೀಳಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ : ₹24 ಕೋಟಿ ಸೇತುವೆಯಲ್ಲಿ ಬಿರುಕು: ಗುಜರಾತ್ ಬಿಜೆಪಿ ಒಳಗೆ ಅಸಮಾಧಾನ, ಭ್ರಷ್ಟಾಚಾರ ಆರೋಪ

ಮುಂಗಾರು ದೇಶದ ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿರುವ ಹಿನ್ನೆಲೆ, ಈ ಮುನ್ಸೂಚನೆ ರೈತರಲ್ಲಿ ಆತಂಕ ಮೂಡಿಸಿದೆ. ಮಳೆಯ ಕೊರತೆ ಉಂಟಾದರೆ ಬೆಳೆ ಉತ್ಪಾದನೆ, ಜಲಾಶಯಗಳ ನೀರಿನ ಮಟ್ಟ ಹಾಗೂ ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ. ಅಲ್ಲದೆ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತು ಹಣದುಬ್ಬರದ ಒತ್ತಡವೂ ಹೆಚ್ಚುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ನೋಡಿ : ಹಾಸ್ಟೆಲ್‌ ನೌಕರರ ಕಣ್ಣೀರ ಕಥೆ | ಬೆಂಗಳೂರಿನಲ್ಲಿ ಸಾವಿರಾರು ಜನರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *